Home> India
Advertisement

Video: ಇಂಗ್ಲಿಷ್ ಸ್ವರ, ವ್ಯಂಜನ ಕಲಿಸಲು ಭೋಜಪುರಿಯಲ್ಲಿ ಹಾಡುವ ಶಿಕ್ಷಕ..!

 ಉತ್ತಮ ಶಿಕ್ಷಕನೆಂದರೆ ತಾನು ಕಲಿಸುವ ವಿಷಯವನ್ನು ಆಸಕ್ತಿಕರವಾಗಿ ಮಾಡುವುದು ಮತ್ತು ಸರಳಿಕರಿಸುವುದು, ಆಗ ಮಾತ್ರ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಎಂತಹ ಕಠಿಣ ವಿಷಯವಿದ್ದರೂ ಕೂಡ ಅದನ್ನು ಸುಲಭ ಮಾಡಬಹುದು ಎನ್ನುವುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿ.

 Video: ಇಂಗ್ಲಿಷ್ ಸ್ವರ, ವ್ಯಂಜನ ಕಲಿಸಲು ಭೋಜಪುರಿಯಲ್ಲಿ ಹಾಡುವ ಶಿಕ್ಷಕ..!

ನವದೆಹಲಿ: ಉತ್ತಮ ಶಿಕ್ಷಕನೆಂದರೆ ತಾನು ಕಲಿಸುವ ವಿಷಯವನ್ನು ಆಸಕ್ತಿಕರವಾಗಿ ಮಾಡುವುದು ಮತ್ತು ಸರಳಿಕರಿಸುವುದು, ಆಗ ಮಾತ್ರ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಗೆ ಎಂತಹ ಕಠಿಣ ವಿಷಯವಿದ್ದರೂ ಕೂಡ ಅದನ್ನು ಸುಲಭ ಮಾಡಬಹುದು ಎನ್ನುವುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿ.

ಅಂತಹದ್ದೇ ಒಬ್ಬ ಶಿಕ್ಷಕ ಈಗ ಸಾಮಾಜಿಕ ಜಾಲತಾಣವೊಂದರಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಭೋಜಪುರಿಯಲ್ಲಿ ಹಾಡುವುದರ ಮೂಲಕ ಇಂಗ್ಲಿಷ್ ನ ವ್ಯಂಜನ ಮತ್ತು ಸ್ವರಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಾನೆ.ಈಗ ವಿಡಿಯೋವನ್ನು ಕುಮಾರ್ ವಿಶ್ವಾಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇನ್ನೊಂದೆಡೆಗೆ ಇದೆ ವಿಡಿಯೋವನ್ನು ಬಾಲಿವುಡ್ ನ ನಟ ಅಮಿತಾಬ್ ಬಚ್ಚನ್ ಕೂಡ ಶೇರ್ ಮಾಡಿದ್ದಾರೆ.

ಕುಮಾರ್ ವಿಶ್ವಾಸ್ ಟ್ವೀಟ್ ವೊಂದರಲ್ಲಿ "ನಾವು ರೀತಿ ಸಂಗೀತ ಗುರುವಿನ ಹಾಗೆ ಕಳಿಸಿದ್ದೆ ಆದಲ್ಲಿ ನಾವು ಶಶಿ ತರೂರ್ ಹಾಗೆ ಇಂಗ್ಲಿಷ್ ಮಾತನಾಡಬಹುದು" ಎಂದು ತಿಳಿಸಿದ್ದಾರೆ.

 

Read More