Home> India
Advertisement

ಲೋಕಸಭಾ ಸ್ಪೀಕರ್ ಹುದ್ದೆಯ ಬೇಡಿಕೆ ಇಟ್ಟ ಟಿಡಿಪಿ..! ಈ ಬೇಡಿಕೆ ಹಿಂದಿನ ಉದ್ದೇಶವೇನು ಗೊತ್ತೇ?

ಎನ್‌ಡಿಎಯಲ್ಲಿ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು ಮತ್ತು ಇತರ ಮೈತ್ರಿ ಪಾಲುದಾರರೊಂದಿಗೆ ಅದು 292 ಲೋಕಸಭಾ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈಗ ಅದು ಮೂರು ಸಚಿವ ಸಂಪುಟದ ಬೇಡಿಕೆಯನ್ನು ಇಟ್ಟಿದೆ.

 ಲೋಕಸಭಾ ಸ್ಪೀಕರ್ ಹುದ್ದೆಯ ಬೇಡಿಕೆ ಇಟ್ಟ ಟಿಡಿಪಿ..! ಈ ಬೇಡಿಕೆ ಹಿಂದಿನ ಉದ್ದೇಶವೇನು ಗೊತ್ತೇ?

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗೆ ಮುನ್ನ ಅಧಿಕಾರ ಹಂಚಿಕೆ ಮಾಡ್ಯೂಲ್ ಕುರಿತು ಚಿಂತನೆ ನಡೆಸುತ್ತಿದ್ದಂತೆ, ಮಿತ್ರಪಕ್ಷಗಳು ತಮ್ಮ ಬೇಡಿಕೆಗಳನ್ನು ಬಿಜೆಪಿಯ ಮುಂದಿಟ್ಟಿವೆ. ಎನ್‌ಡಿಎ ಮಿತ್ರ ಪಕ್ಷ ತೆಲುಗು ದೇಶಂ ಪಕ್ಷ (ಟಿಡಿಪಿ) ಬಿಜೆಪಿಯಿಂದ ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ.

ಎನ್‌ಡಿಎಯಲ್ಲಿ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿದ್ದು ಮತ್ತು ಇತರ ಮೈತ್ರಿ ಪಾಲುದಾರರೊಂದಿಗೆ ಅದು 292 ಲೋಕಸಭಾ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈಗ ಅದು ಮೂರು ಸಚಿವ ಹುದ್ದೆಯ ಬೇಡಿಕೆಯನ್ನು ಇಟ್ಟಿದೆ.ಆದರೆ ಎನ್‌ಡಿಎ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ.ಇನ್ನೊಂದೆಡೆಗೆ ಜೆಡಿಯು 3 ಕ್ಯಾಬಿನೆಟ್ ಮತ್ತು ಒಂದು ಎಂಒಎಸ್ ಹುದ್ದೆಗೆ ಬೇಡಿಕೆ ಇಟ್ಟಿದೆ. 

ಇದನ್ನೂ ಓದಿ: ಬಹುನಿರೀಕ್ಷಿತ 'ಕೋಟಿ' ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾ

ಲೋಕಸಭೆ ಸ್ಪೀಕರ್ ಹುದ್ದೆಗೆ ಟಿಡಿಪಿ ಬೇಡಿಕೆ ಇಟ್ಟಿರುವುದೇಕೆ? 

ಸರ್ಕಾರದ ವಿರುದ್ಧ ಅವಿಶ್ವಾಸ ಮತದ ನಿರ್ಣಯದ ಸಂದರ್ಭದಲ್ಲಿ ಸ್ಪೀಕರ್ ಪಾತ್ರ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ 1998 ರಲ್ಲಿ, ನಾಯ್ಡು ಅವರು ಎನ್‌ಡಿಎ ಸರ್ಕಾರಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ತಮ್ಮ ಬೆಂಬಲವನ್ನು ನೀಡಿದಾಗ ಅವರು ಯಾವುದೇ ಕ್ಯಾಬಿನೆಟ್ ಹುದ್ದೆಗಳನ್ನು ಕೇಳುವ ಬದಲಾಗಿ ಸ್ಪೀಕರ್ ಸ್ಥಾನದ ಬೇಡಿಕೆಯನ್ನಿಟ್ಟರು.ಹಾಗಾಗಿ ಈ ಹುದ್ದೆಗೆ ಜಿಎಂಸಿ ಬಾಲಯೋಗಿ ಅವರನ್ನು ನಾಮನಿರ್ದೇಶನವನ್ನು ಮಾಡಲಾಯಿತು.

ಒಂದು ವೇಳೆ ಅವಿಶ್ವಾಸ ಮತದ ಸಂದರ್ಭದಲ್ಲಿ ಸರ್ಕಾರ ಪತನಗೊಂಡರೂ ಸದನ ವಿಸರ್ಜಿಸುವವರೆಗೂ ಸ್ಪೀಕರ್ ಸ್ಥಾನದಿಂದ ಕೆಳಗಿಳಿಯುವಂತಿಲ್ಲ ಎಂಬ ಕಾರಣಕ್ಕೆ ಸ್ಪೀಕರ್ ಹುದ್ದೆಯೂ ಮಹತ್ವದ್ದಾಗಿದೆ. ಹೀಗಾಗಿ, ಟಿಡಿಪಿ ಸ್ಪೀಕರ್ ಸ್ಥಾನವನ್ನು ಪಡೆದು ಕಾಂಗ್ರೆಸ್ ಪಕ್ಷವನ್ನು ಬದಲಾಯಿಸಿದರೆ, ನಂತರ ಸ್ಪೀಕರ್ ಹುದ್ದೆಯನ್ನು ಮುಂದುವರಿಸುತ್ತಾರೆ. ಸ್ಪೀಕರ್ ರನ್ನು ಸದನದ ಒಟ್ಟು ಬಲದ 50% ಕ್ಕಿಂತ ಹೆಚ್ಚು ಅಂದರೆ ಪರಿಣಾಮಕಾರಿ ಬಹುಮತದಿಂದ ಅಂಗೀಕರಿಸಲ್ಪಟ್ಟ ನಿರ್ಣಯದ ಮೂಲಕ ಮಾತ್ರ ಸದನವು ತೆಗೆದುಹಾಕಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Read More