Home> India
Advertisement

Reservation In Promotion: ಎಸ್‌ಸಿ-ಎಸ್‌ಟಿಗೆ ಬಡ್ತಿಗಾಗಿ ಮೀಸಲಾತಿಯಲ್ಲಿನ ಮಾನದಂಡಗಳು ಬದಲಾಗುವುದಿಲ್ಲ

Supreme Court Latest Update: ಸರ್ಕಾರಿ ನೌಕರಿಗಳಲ್ಲಿ (Government Jobs) SC-ST ಜನರಿಗೆ ಪ್ರಮೋಶನ್ (Pramotion) ವೇಳೆ ಮೀಸಲಾತಿ ನೀಡುವ ಕುರಿತು ಮಾನದಂಡ ನಿಗದಿಪಡಿಸಲು ಸರ್ವೋಚ್ಛ ನ್ಯಾಯಾಲಯ (Supreme Court) ನಿರಾಕರಿಸಿದೆ.

Reservation In Promotion: ಎಸ್‌ಸಿ-ಎಸ್‌ಟಿಗೆ ಬಡ್ತಿಗಾಗಿ ಮೀಸಲಾತಿಯಲ್ಲಿನ ಮಾನದಂಡಗಳು ಬದಲಾಗುವುದಿಲ್ಲ

Supreme Court News - ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದವರಿಗೆ (ST) ಬಡ್ತಿಯಲ್ಲಿ ಮೀಸಲಾತಿ ವಿಷಯದ ಕುರಿತು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಎಸ್‌ಸಿ-ಎಸ್‌ಟಿಗಳಿಗೆ ಇರುವ ಮೀಸಲಾತಿ ಷರತ್ತುಗಳನ್ನು ಕಡಿಮೆಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಬಡ್ತಿಯಲ್ಲಿ ಮೀಸಲಾತಿ ನೀಡುವ ಮೊದಲು ನೌಕರರು ಕ್ವಾಂಟಿಟೆಟಿವ್ ಡೇಟಾ ಸಂಗ್ರಹಿಸಲು ಬದ್ಧರಾಗಿರುತ್ತಾರೆ ಎಂದು ನ್ಯಾಯಾಲಯ ಹೇಳಿದೆ. ನಮ್ಮ ಹಿಂದಿನ ನಿರ್ಧಾರಗಳಲ್ಲಿ ನಿಗದಿಪಡಿಸಲಾದ ಮೀಸಲಾತಿಯ ಮಾನದಂಡಗಳನ್ನು ನಾವು ತಿದ್ದಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ. ಆದರೆ ಬಡ್ತಿಯಲ್ಲಿ ಮೀಸಲಾತಿ ಸಂದರ್ಭದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿದೆಯೇ ಅಥವಾ ಇಲ್ಲವೇ ಎಂಬುದನ್ನು ಸರ್ಕಾರ (Central Government)  ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದೂ ಕೂಡ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ-Schools Reopening News: ದೇಶಾದ್ಯಂತ ಶಾಲಾ-ಕಾಲೇಜುಗಳನ್ನು ತೆರೆಯಲು ಸಿದ್ಧತೆ, ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ!

ಮೂವರು ನ್ಯಾಯಾಧೀಶರನ್ನೋಳಗೊಂಡ ಪೀಠದಿಂದ ತೀರ್ಪು ಪ್ರಕಟ
ಸುಪ್ರೀಂ ಕೋರ್ಟ್ (Supreme Court) ನ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠ ಈ ನಿರ್ಧಾರ ಪ್ರಕಟಿಸಿದೆ. ಈ ಪೀಠದಲ್ಲಿ ನ್ಯಾಯಮೂರ್ತಿ ಎಲ್. ನಾಗೆಶ್ವರ್ ರಾವ್, ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಬಿ. ಆರ್. ಗವಯಿ ಶಾಮೀಲಾಗಿದ್ದಾರೆ. ಇದಕ್ಕೂ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಜಸ್ಟಿಸ್. ನಾಗೆಶ್ವರ್ ರಾವ್ (Justice Nageshwar Rao) ನೇತೃತ್ವದ ಪೀಠ, ಅಕ್ಟೋಬರ್ 26 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. 

ಇದನ್ನೂ ಓದಿ-Kisan Credit Card : ಈಗ ಮನೆಯಲ್ಲಿ ಕುಳಿತೆ ಪಡಿಬಹುದು 'SBI ಕಿಸಾನ್ ಕ್ರೆಡಿಟ್ ಕಾರ್ಡ್' : ಹೇಗೆ ಇಲ್ಲಿದೆ ನೋಡಿ

ಕೇಂದ್ರ ಸರ್ಕಾರ ಮಂಡಿಸಿದ್ದ ವಾದವೇನು?
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕವೂ ಕೂಡ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಕ್ಕೆ ಸೇರಿದ ಜನರನ್ನು ಮುಂದುವರೆದ ವರ್ಗದವರ ಬೌದ್ಧಿಕ ಮಟ್ಟಕ್ಕೆ ತರಲಾಗಿಲ್ಲ ಎಂಬುದು ಸತ್ಯ ಎಂದು ವಿಚಾರಣೆಯ ವೇಳೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಒಪ್ಪಿಕ್ಕೊಂಡಿದೆ. ಈ ಸಂದರ್ಭದಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದ ಅಟಾರ್ನಿ ಜನರಲ್ (Atorny General) ಕೆ.ಕೆ.  ವೇಣುಗೋಪಾಲ್ (KK Venugopal), ಎಸ್.ಸಿ-ಎಸ್ಟಿ ಸಮುದಾಯದ ಜನರಿಗೆ ಗ್ರೂಪ್ ಎ ಶ್ರೇಣಿಯ ನೌಕರಿಗಳಲ್ಲಿ ಉನ್ನತ ಹುದ್ದೆ ಅಲಂಕರಿಸುವುದು ಕಷ್ಟದ ಕೆಲಸವಾಗಿದ್ದು, ಓಬಿಸಿ (OBC) ಸೇರಿದಂತೆ ಈ ವರ್ಗಗಳ ಹುದ್ದೆಗಳ ಜನರಿಗೆ ಆಧಾರ ಕಲ್ಪಿಸಲು ಸುಪ್ರೀಂ ಕೋರ್ಟ್ ನಿರ್ಣಾಯಕ ತೀರ್ಪು ಪ್ರಕಟಿಸುವ ಕಾಲ ಬಂದಿದೆ ಎಂದು ಹೇಳಿದ್ದರು.

ಇದನ್ನೂ ಓದಿ-Black Fungus: ಮತ್ತೆ ಮರಳುತ್ತಿದೆಯೇ ಬ್ಲಾಕ್ ಫಂಗಸ್? ದೇಶದ ಈ ಸ್ಥಳದಲ್ಲಿ ಮೊದಲ ರೋಗಿ ಪತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More