Home> India
Advertisement

Shocking Video: ಬೆಟ್ಟ ಹತ್ತಲು ಹೋದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಸಾವು

ಮೃತ ನವೀನ್ ಜಬಲ್ಪುರ್ ಮೂಲದವನಾಗಿದ್ದು JNUನ ಐಸಿಎಸ್ಎಸ್ಆರ್ ನ ವಿದ್ಯಾರ್ಥಿ ಎನ್ನಲಾಗಿದೆ. 

Shocking Video: ಬೆಟ್ಟ ಹತ್ತಲು ಹೋದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಸಾವು

ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಬೆಟ್ಟ ಹತ್ತಲು ಹೋದ ವಿದ್ಯಾರ್ಥಿಯೊಬ್ಬ ಆಯತಪ್ಪಿ ಕೆಳಗಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಈ ಘಟನೆ ಡಿಸೆಂಬರ್ 30 ರಂದು ನಡೆದಿದ್ದು, ಮೃತ ನವೀನ್ ಜಬಲ್ಪುರ್ ಮೂಲದವನಾಗಿದ್ದು JNUನ ಐಸಿಎಸ್ಎಸ್ಆರ್ ನ ವಿದ್ಯಾರ್ಥಿ ಎನ್ನಲಾಗಿದೆ. ಪ್ರವೀಣ್ ಕ್ಯಾಂಪಸ್ ಆವರಣದಲ್ಲಿರುವ ಬೆಟ್ಟ ಹತ್ತುತ್ತಿದ್ದುದನ್ನು ಆತನ ಸ್ನೇಹಿತರು ವೀಡಿಯೋ ಮಾಡಿದ್ದಾರೆ. ಇದರಲ್ಲಿ ಆತ ಹೇಗೆ ಸಾವನ್ನಪ್ಪಿದ ಎಂಬುದು ರೆಕಾರ್ಡ್ ಆಗಿದೆ. 

ಪ್ರವೀಣ ಬೆಟ್ಟ ಹತ್ತುವಾಗ ಆತನ ಸ್ನೇಹಿತರು ಆತನ್ನನ್ನು ತಡೆಯಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೂ ಅದ್ಯಾವುದನ್ನೂ ಲೆಕ್ಕಿಸದೆ ಪ್ರವೀನ್ ಬೆಟ್ಟ ಹತ್ತುವ ಸಾಹಸ ಮಾಡಿದ ಪ್ರವೀಣ್, ಕೊನೆಗೆ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
 

Read More