Home> India
Advertisement

ಹಸ್ತಾಂತರದ ಅನುಮತಿ ಬಳಿಕ, ಮಲ್ಯ ವಿರುದ್ಧ ಸರ್ಕಾರದ ಎರಡನೇ ಪ್ರಮುಖ ಯಶಸ್ಸು

ಮದ್ಯ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಸರಕಾರವು ಭಾರಿ ಯಶಸ್ಸನ್ನು ಕಂಡಿದೆ. ಮುಂಬೈಯ ವಿಶೇಷ ಪಿಎಂಎಲ್ಎ ನ್ಯಾಯಾಲಯವು ಮಲ್ಯವನ್ನು ಓರ್ವ ಪ್ಯುಗಿಟಿವ್  ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.

ಹಸ್ತಾಂತರದ ಅನುಮತಿ ಬಳಿಕ, ಮಲ್ಯ ವಿರುದ್ಧ ಸರ್ಕಾರದ ಎರಡನೇ ಪ್ರಮುಖ ಯಶಸ್ಸು

ನವದೆಹಲಿ/ಮುಂಬೈ : ಮದ್ಯದ ದೊರೆ ವಿಜಯ ಮಲ್ಯ ವಿರುದ್ಧ ಸರಕಾರವು ಭಾರಿ ಯಶಸ್ಸನ್ನು ಕಂಡಿದೆ. ಮುಂಬೈಯ ವಿಶೇಷ ಪಿಎಂಎಲ್ಎ ನ್ಯಾಯಾಲಯವು ಮಲ್ಯವನ್ನು ಓರ್ವ ಪ್ಯುಗಿಟಿವ್ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.

ಇಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದು ಕೋರ್ಟ್ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಅಂತೆ ತನ್ನ ತೀರ್ಪಿನಲ್ಲಿ ವಿಜಯ್ ಮಲ್ಯರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದೆ.

9 ಸಾವಿರ ಕೋಟಿ ರೂಪಾಯಿ ವಂಚನೆ ಆರೋಪ: 
ಈ ಮೊದಲು ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿದೆ. ಕಿಂಗ್ ಫಿಷರ್ ಏರ್ಲೈನ್ ಮಾಲೀಕ, 62 ವರ್ಷದ ವಿಜಯ್ ಮಲ್ಯ ಅವರು 9 ಸಾವಿರ ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿದ್ದಾರೆ. 

Read More