Home> India
Advertisement

ಲೋಕಸಭಾ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದ ಸಮಾಜವಾದಿ ಪಕ್ಷ

ಸಮಾಜವಾದಿ ಪಕ್ಷವು ಉತ್ತರಪ್ರದೇಶದ 6 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 

ಲೋಕಸಭಾ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದ ಸಮಾಜವಾದಿ ಪಕ್ಷ

ಲಕ್ನೋ: 2019ರ ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷವು ಉತ್ತರಪ್ರದೇಶದ 6 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. 

ಇದರಲ್ಲಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮೇನ್ಪುರಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇವರೊಂದಿಗೆ ಬದಾನ್ ಲೋಕಸಭಾ ಕ್ಷೇತ್ರದಿಂದ ಧರ್ಮೇಂದ್ರ ಯಾದವ್, ಫಿರೋಜಾಬಾದ್'ನಿಂದ ಅಕ್ಷಯ್ ಯಾದವ್, ಇಟಾವಾ ಕ್ಷೇತ್ರದಿಂದ ಕಮಲೇಶ್ ಕ್ಯಾಥೇರಿಯಾ, ಬಹರಾಯ್ಚ್ ಕ್ಷೇತ್ರದಿಂದ ಶಬ್ಬೀರ್ ವಾಲ್ಮೀಕಿ ಮತ್ತು ರಾಬರ್ಟ್ಸ್ಗಂಜ್ ಕ್ಷೇತ್ರದಿಂದ ಭಾಯ್ ಲಾಲ್ ಸ್ಪರ್ಧಿಸಲಿದ್ದಾರೆ.

ಗುರುವಾರ ಕಾಂಗ್ರೆಸ್ ಪಕ್ಷವು ಉತ್ತರಪ್ರದೇಶದ 11 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಇಂದು ಸಮಾಜವಾದಿ ಪಕ್ಷ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 
 

Read More