Home> India
Advertisement

ದೆಹಲಿ ಏರ್‌ಪೋರ್ಟ್‌ನಲ್ಲಿ 20 ಕೋಟಿ ರೂ. ಮೌಲ್ಯದ ಹೆರಾಯಿನ್ ಸಹಿತ ಸಿಕ್ಕಿಬಿದ್ದ ದಕ್ಷಿಣ ಆಫ್ರಿಕಾ ಮಹಿಳೆ

ದಕ್ಷಿಣ ಆಫ್ರಿಕಾದ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ಮಹಿಳೆಯ ಬಳಿ ಸುಮಾರು 4900 ಗ್ರಾಂ ಹೆರಾಯಿನ್ ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ದೆಹಲಿ ಏರ್‌ಪೋರ್ಟ್‌ನಲ್ಲಿ 20 ಕೋಟಿ ರೂ. ಮೌಲ್ಯದ ಹೆರಾಯಿನ್ ಸಹಿತ ಸಿಕ್ಕಿಬಿದ್ದ ದಕ್ಷಿಣ ಆಫ್ರಿಕಾ ಮಹಿಳೆ

ನವದೆಹಲಿ: ರಾಷ್ಟ್ರದ ರಾಜಧಾನಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20 ಕೋಟಿ ರೂ.ಗಳ ಮೌಲ್ಯದ ಹೆರಾಯಿನ್ ಹೊಂದಿದ್ದ ದಕ್ಷಿಣ ಆಫ್ರಿಕಾದ ಮಹಿಳೆಯನ್ನು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ಮಹಿಳೆಯ ಬಳಿ ಸುಮಾರು 4900 ಗ್ರಾಂ ಹೆರಾಯಿನ್ ಪತ್ತೆಯಾಗಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಆಯುಕ್ತರ (ವಿಮಾನ ನಿಲ್ದಾಣ ಮತ್ತು ಜನರಲ್) ಕಚೇರಿ ಪ್ರಕಟಣೆ ತಿಳಿಸಿದೆ.

ದಕ್ಷಿಣ ಆಫ್ರಿಕಾದಿಂದ ಕತಾರ್ ಮೂಲಕ ನವದೆಹಲಿಯ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್ 3 ಗೆ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಗ್ರೀನ್ ಚಾನೆಲ್ ದಾಟಿದ ಬಳಿಕ ಅಧಿಕಾರಿಗಳು ತಡೆದಿದ್ದಾರೆ. ಈಕೆ ಕತಾರ್ ಏರ್ಲೈನ್ಸ್ ಫ್ಲೈಟ್ ನಂಬರ್ ಕ್ಯೂಆರ್ 570ರಲ್ಲಿ  ನವದೆಹಲಿಗೆ ಬಂದಿಳಿದಿದ್ದಾಗಿ ಎಂದು ಪ್ರಕಟಣೆ ತಿಳಿಸಿದೆ.

ಮಹಿಳೆಯ ಬ್ಯಾಗೇಜ್ ಪರಿಶೀಲನೆ ವೇಳೆ ಆಕೆಯ ಲಗೇಜಿನಲ್ಲಿ "ಹೆರಾಯಿನ್ ನ ಸಣ್ಣ ಪೊಟ್ಟಣಗಳು ಪತ್ತೆಯಾಗಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆ, 1985 ರ ನಿಬಂಧನೆಗಳ ಪ್ರಕಾರ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಮಹಿಳೆಯನ್ನು ಸೆಕ್ಷನ್ 43 (ಬಿ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಪ್ರಕರಣೆ ತಿಳಿಸಿದೆ.

Read More