Home> India
Advertisement

ತನ್ನ ಮದುವೆಗೇ ಬಾರದ ಯೋಧ; ಏನಿದು 'ಸೈನಿಕನ ಜೀವನದಲ್ಲಿ ಇನ್ನೊಂದು ದಿನ'?

ಸುನೀಲ್ ಎಂಬ ಸೈನಿಕ ಹಿಮಾಚಲ ಪ್ರದೇಶದ ಮಂಡಿಗೆ ಸೇರಿದವನಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾನೆ. ಸುನೀಲ್ ಅವರ ವಿವಾಹ ರಜೆ ಜನವರಿ l ರಿಂದ ಪ್ರಾರಂಭವಾಗಬೇಕಿತ್ತು ಮತ್ತು ಅವರು ಕೆಲವು ದಿನಗಳ ಹಿಂದೆ ಬಂಡಿಪೋರಾದಲ್ಲಿನ ಸಾರಿಗೆ ಶಿಬಿರವನ್ನು ತಲುಪಿದ್ದರು.

ತನ್ನ ಮದುವೆಗೇ ಬಾರದ ಯೋಧ; ಏನಿದು 'ಸೈನಿಕನ ಜೀವನದಲ್ಲಿ ಇನ್ನೊಂದು ದಿನ'?

ಮನಾಲಿ: ಕಾಶ್ಮೀರ ಕಣಿವೆಯಲ್ಲಿ ಭಾರಿ ಹಿಮಪಾತದ ನಡುವೆ ಸಿಲುಕಿಕೊಂಡಿದ್ದರಿಂದ ಕಾಶ್ಮೀರ ಕಣಿವೆಯಲ್ಲಿ ಪೋಸ್ಟ್ ಆಗಿದ್ದ ಸೈನಿಕನೊಬ್ಬ ತನ್ನ ಮದುವೆಯನ್ನೇ ತಪ್ಪಿಸಿಕೊಂಡ ಘಟನೆಯೊಂದು ನಡೆದಿದೆ. ಭಾರತೀಯ ಸೈನ್ಯವು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಭಾನುವಾರ 'ಸೈನಿಕನ ಜೀವನದಲ್ಲಿ ಇನ್ನೊಂದು ದಿನ' ಎಂದು ಬರೆದ ಕಥೆಯನ್ನು ಹಂಚಿಕೊಂಡಿದೆ.

ಟ್ವೀಟ್ನಲ್ಲಿ, '' ಕಾಶ್ಮೀರ ಕಣಿವೆಯಲ್ಲಿ ಹಿಮಪಾತದಲ್ಲಿ ಸಿಲುಕಿರುವ ಯೋಧ ತನ್ನ ಮದುವೆಗೇ ಹಾಜರಾಗಲು ಸಾಧ್ಯವಾಗಿಲ್ಲ.  ಚಿಂತಿಸಬೇಡಿ ಜೀವನವು ಕಾಯುತ್ತದೆ. #NationFirstAlways ವಧುವಿನ ಕುಟುಂಬವು ಹೊಸ ದಿನಾಂಕವನ್ನು ಒಪ್ಪುತ್ತದೆ. ಸೈನಿಕನ ಜೀವನದಲ್ಲಿ ಇನ್ನೊಂದು ದಿನ'' ಎಂದು ಬರೆದಿದೆ.

ಸುನೀಲ್ ಎಂಬ ಸೈನಿಕ ಹಿಮಾಚಲ ಪ್ರದೇಶದ ಮಂಡಿಗೆ ಸೇರಿದವನಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾನೆ. ಅವರ ವಿವಾಹ ರಜೆ ಜನವರಿ l ರಿಂದ ಪ್ರಾರಂಭವಾಗಬೇಕಿತ್ತು ಮತ್ತು ಅವರು ಕೆಲವು ದಿನಗಳ ಹಿಂದೆ ಬಂಡಿಪೋರಾದಲ್ಲಿನ ಸಾರಿಗೆ ಶಿಬಿರವನ್ನು ತಲುಪಿದ್ದರು.

ಭಾರತೀಯ ಸೇನೆಯು ಹಂಚಿಕೊಂಡ ಸುದ್ದಿ ಲೇಖನವು ಈಗಾಗಲೇ ವಿವಾಹ ಸಮಾರಂಭಗಳು ಪ್ರಾರಂಭವಾಗಿದ್ದವು ಮತ್ತು ಎರಡೂ ಕುಟುಂಬಗಳು ವಿವಾಹದ ತಯಾರಿಕೆಯಲ್ಲಿ ಪಾಲ್ಗೊಂಡಿದ್ದವು ಮತ್ತು ಕಣಿವೆಯಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ವರ ಸುನೀಲ್ ಅವರು ಮದುವೆಗೆ ಹಾಜರಾಗಲು ಸಾಧ್ಯವಾಗದ ಕಾರಣ ನಿರಾಶೆಗೊಂಡಿದ್ದಾರೆ ಎಂದು ಹೇಳಲಾಗಿದೆ.

ಶ್ರೀನಗರದಿಂದ ದೂರವಾಣಿ ಕರೆ ಮೂಲಕ ಸುನೀಲ್ ಕುಟುಂಬಕ್ಕೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದು, ಹವಾಮಾನದಿಂದಾಗಿ ವಿಮಾನ ಹಾರಾಟ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಏತನ್ಮಧ್ಯೆ, ಕುಟುಂಬಗಳು ವಿವಾಹ ಸಮಾರಂಭಕ್ಕೆ ಹೊಸ ದಿನಾಂಕವನ್ನು ನಿಗದಿಪಡಿಸಿದ್ದಾರೆ.

Read More