Home> India
Advertisement

Funny Video: ನಡು ರಸ್ತೆಯಲ್ಲಿ ಬ್ಯಾಂಗ್ ಡಾನ್ಸ್ ಮಾಡಿದ ಹುಡುಗಿ, ವಿಡಿಯೋ ಕಂಡು ನೆಟಿಜನ್‌ಗಳು ಹೇಳಿದ್ದೇನು?

Funny Video: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನ ವಿಡಿಯೋ ವೈರಲ್ ಆಗುತ್ತಿದೆ. ಈ ಹುಡುಗಿ ವೀಡಿಯೋ ಚಾಲೆಂಜ್ ಅನ್ನು ಪೂರ್ಣಗೊಳಿಸಲು ರಸ್ತೆ ಮಧ್ಯೆದಲ್ಲಿ ಟ್ರೆಂಡಿಂಗ್ ಡ್ಯಾನ್ಸ್ ಮಾಡಿದ್ದಾಳೆ.
 

Funny Video: ನಡು ರಸ್ತೆಯಲ್ಲಿ ಬ್ಯಾಂಗ್ ಡಾನ್ಸ್ ಮಾಡಿದ ಹುಡುಗಿ, ವಿಡಿಯೋ ಕಂಡು ನೆಟಿಜನ್‌ಗಳು ಹೇಳಿದ್ದೇನು?

ನವದೆಹಲಿ: ಕೆಲವು ಜನರು ತುಂಬಾ ಧೈರ್ಯಶಾಲಿಗಳು. ಅವರು ಸಾರ್ವಜನಿಕ ಸ್ಥಳದಲ್ಲಿ ಏನನ್ನೂ ಮಾಡಲು ಯಾವುದೇ ಹಿಂಜರಿಕೆ ಅಥವಾ ಆತಂಕವನ್ನು ಅನುಭವಿಸುವುದಿಲ್ಲ. ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮವು (Social Media) ಅಂತಹ ಪ್ರಭಾವಶಾಲಿಗಳಿಂದ ತುಂಬಿದೆ, ಅವರು ಸಾರ್ವಜನಿಕರ ಅಂದರೆ ಡಿಜಿಟಲ್ ಪ್ರಪಂಚದ ತಮ್ಮ ಅಭಿಮಾನಿಗಳನ್ನು ರಂಜಿಸಲು ಯಾವುದೇ ಮಟ್ಟಕ್ಕೂ ಹೋಗಲು ಸಿದ್ಧರಾಗಿದ್ದಾರೆ. ಈ ವೈರಲ್ ವೀಡಿಯೋದಲ್ಲಿ (Viral Video), ಸೋಶಿಯಲ್ ಮೀಡಿಯಾ ಪ್ರಭಾವಿಯು ಇತ್ತೀಚಿನ ಟ್ರೆಂಡ್‌ನ ಸವಾಲನ್ನು ಪೂರ್ಣಗೊಳಿಸಲು ರಸ್ತೆಯ ಮಧ್ಯದಲ್ಲಿ ವಿಲಕ್ಷಣ ನೃತ್ಯವನ್ನು ಮಾಡುತ್ತಿದ್ದಾರೆ. 

ಟ್ರಾಫಿಕ್ ನಿಂತ ತಕ್ಷಣ ಸವಾಲು ಎದುರಾಯಿತು :

ಕೆಲವು ಸ್ನೇಹಿತರ ವಲಯಗಳು ಅದ್ಭುತವಾಗಿರುತ್ತವೆ. ಅವರು ಪರಸ್ಪರ ಮೋಜು ಮಾಡುತ್ತಾರೆ ಮತ್ತು ಜೊತೆಗೆ ಪರಸ್ಪರ ಚಾಲೆಂಜ್ ಕೂಡ ನೀಡುತ್ತಾರೆ. ಶ್ರೇಯಾ ಕಲ್ರಾ (Shreya Kalra) ಸಾಮಾಜಿಕ ಮಾಧ್ಯಮದ ಪ್ರಭಾವಿ (Social Media Influencer). ಕೆಲವು ದಿನಗಳ ಹಿಂದೆ, ಅವರ ಸ್ನೇಹಿತರು ಅವರಿಗೆ ಡೇರ್ ವಿಡಿಯೋ ಚಾಲೆಂಜ್ (Dare Video Challenge) ನೀಡಿದ್ದರು. ಈ ಸವಾಲಿನ ಅಡಿಯಲ್ಲಿ, ನಡು ರಸ್ತೆಯಲ್ಲಿ ಟ್ರಾಫಿಕ್ ನಿಂತ ತಕ್ಷಣ ಅವರು ನೃತ್ಯ ಮಾಡಬೇಕು. ಈ ಚಾಲೆಂಜ್ ಅನ್ನು ಸ್ವೀಕರಿಸಿದ್ದ ಶ್ರೇಯಾ ಟ್ರಾಫಿಕ್ ಲೈಟ್ ಕೆಂಪು ಬಣ್ಣಕ್ಕೆ ತಿರುಗಿದ ತಕ್ಷಣ, ರಸ್ತೆಯಲ್ಲಿ ನೃತ್ಯ ಮಾಡುವ ಮೂಲಕ ತನ್ನ ಸವಾಲನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ- YouTube's new feature: ಯೂಟ್ಯೂಬ್ ಬಳಕೆದಾರರೇ ನೀವೂ ಕೂಡ ಈ ಅದ್ಭುತ ವೈಶಿಷ್ಟ್ಯವನ್ನು ಬಳಸಿದ್ದೀರಾ!

ರಸ್ತೆ ಮಧ್ಯದಲ್ಲಿ ಶ್ರೇಯಾ ಈ ರೀತಿ ನೃತ್ಯ ಮಾಡುವುದನ್ನು ನೋಡಿ, ಟ್ರಾಫಿಕ್ ನಲ್ಲಿ ಸಿಲುಕಿದ್ದ ಸಾರ್ವಜನಿಕರು ನೃತ್ಯ ಮಾಡುತ್ತಿದ್ದ ಹುಡುಗಿಯ ಆತ್ಮವಿಶ್ವಾಸವನ್ನು ನೋಡುತ್ತಿದ್ದರು. ಶ್ರೇಯಾ ಕೂಡ ಯಾವುದೇ ಹಿಂಜರಿಕೆಯಿಲ್ಲದೆ ಟ್ರೆಂಡಿಂಗ್ ನೃತ್ಯದಲ್ಲಿ (Trending Dance) ತನ್ನ ಚಲನೆಗಳನ್ನು ತೋರಿಸುತ್ತಲೇ ಇದ್ದಳು. ಇದುವರೆಗೆ ಅವರ ಈ ವಿಡಿಯೋವನ್ನು 2 ಲಕ್ಷ 34 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Shreya Kalra (@shreyakalraa)

ಇದನ್ನೂ ಓದಿ- Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗುತ್ತಿದ್ದು ಜನರು ಪ್ರತಿಕ್ರಿಯೆ (Public Reaction) ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಶ್ರೇಯಾ ಅವರ ವಿಡಿಯೋವನ್ನು ವೀಕ್ಷಿಸುತ್ತಿರುವ ನೆಟಿಜನ್‌ಗಳು ಭಾರೀ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಕೆಲವರು ಆಕೆಯ ಆತ್ಮವಿಶ್ವಾಸವನ್ನು ಹೊಗಳುತ್ತಿದ್ದರೆ, ಕೆಲವರು ಆಕೆಯನ್ನು ಗೇಲಿ ಮಾಡುತ್ತಿದ್ದಾರೆ. 

ವಾಸ್ತವವಾಗಿ, ಇನ್ಸ್ಟಾಗ್ರಾಮ್ ನಲ್ಲಿ shreyakalraa ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ದಯವಿಟ್ಟು ನಿಯಮಗಳನ್ನು ಮುರಿಯಬೇಡಿ - ಕೆಂಪು ಚಿಹ್ನೆ ಎಂದರೆ ನೀವು ಸಿಗ್ನಲ್‌ನಲ್ಲಿ ನಿಲ್ಲಬೇಕು. ಏಕೆಂದರೆ ನಾನು ನೃತ್ಯ ಮಾಡುತ್ತಿದ್ದೇನೆ ಮತ್ತು ಮಾಸ್ಕ್ ಅನ್ನು ಧರಿಸಿದ್ದೇನೆ ಎಂದು ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More