Home> India
Advertisement

Shraddha Murder Case: ಅಫ್ತಾಬ್ ಮನೆ ಕಾರ್ಯಾಚರಣೆ: 8 ಮೂಳೆಗಳ ಜೊತೆ ರಕ್ತದ ಮಾದರಿ ಪೊಲೀಸ್ ವಶಕ್ಕೆ

Shraddha Murder Case: ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ದವಡೆಯ ಭಾಗ ಸೇರಿದಂತೆ 18 ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಳೆಗಳನ್ನು ದೆಹಲಿಯ ಮೆಹ್ರೌಲಿ, ಛತ್ತರ್‌ಪುರ, ಮೈದಂಗರಿ ಮತ್ತು ಗುರುಗ್ರಾಮ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಮೂಳೆಗಳು ಮನುಷ್ಯರದ್ದೋ ಅಲ್ಲವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shraddha Murder Case: ಅಫ್ತಾಬ್ ಮನೆ ಕಾರ್ಯಾಚರಣೆ: 8 ಮೂಳೆಗಳ ಜೊತೆ ರಕ್ತದ ಮಾದರಿ ಪೊಲೀಸ್ ವಶಕ್ಕೆ

Shraddha Murder Case: ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನಿಂದ ದೆಹಲಿ ಪೊಲೀಸರು ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಫ್ತಾಬ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರ ಮುಂದೆ ಶ್ರದ್ಧಾಳನ್ನು ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಇದರಿಂದಾಗಿ ದೆಹಲಿ ನ್ಯಾಯಾಲಯವು ಅಫ್ತಾಬ್‌ನ ಪೊಲೀಸ್ ಕಸ್ಟಡಿಯನ್ನು ಮತ್ತೆ 4 ದಿನಗಳವರೆಗೆ ವಿಸ್ತರಿಸಿದೆ

ಇದನ್ನೂ ಓದಿ: Earthquake in Indonesia: ಇಂಡೋನೇಷ್ಯಾದಲ್ಲಿ 5.4 ತೀವ್ರತೆಯ ಭೂಕಂಪ: 20 ಮಂದಿ ಮೃತ, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ದವಡೆಯ ಭಾಗ ಸೇರಿದಂತೆ 18 ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಳೆಗಳನ್ನು ದೆಹಲಿಯ ಮೆಹ್ರೌಲಿ, ಛತ್ತರ್‌ಪುರ, ಮೈದಂಗರಿ ಮತ್ತು ಗುರುಗ್ರಾಮ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಆದರೆ ಈ ಮೂಳೆಗಳು ಮನುಷ್ಯರದ್ದೋ ಅಲ್ಲವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಸಿಬಿಐನ ಸಿಎಫ್‌ಎಸ್‌ಎಲ್ ತಂಡವು ದೆಹಲಿಯ ವಿವಿಧ ಭಾಗಗಳಿಂದ 18 ಮೂಳೆಗಳನ್ನು ಪತ್ತೆ ಮಾಡುತ್ತಿದೆ. ಒಂದು ಅಥವಾ ಎರಡು ವಾರಗಳಲ್ಲಿ CFSL ವರದಿಯನ್ನು ನೀಡುತ್ತದೆ. ಈ ವರದಿ ಬಂದ ನಂತರವಷ್ಟೇ ಈ ಮೂಳೆಗಳು ಮನುಷ್ಯರದ್ದೋ ಅಲ್ಲವೋ ಎಂಬುದು ಸ್ಪಷ್ಟವಾಗಲಿದೆ.

ದೆಹಲಿ ಪೊಲೀಸರು ಮತ್ತು ಸಿಬಿಐ CFSL ತಂಡವು ಅಫ್ತಾಬ್ ಮನೆಯ ಹೆಂಚುಗಳ ನಡುವೆ ರಕ್ತದ ಕಲೆಗಳನ್ನು ಪತ್ತೆಹಚ್ಚಿದೆ. ಇದಲ್ಲದೇ ಇದುವರೆಗೆ ನಡೆಸಿರುವ ತನಿಖೆಯಲ್ಲಿ ಪೊಲೀಸರಿಗೆ ಮಹತ್ವದ ಸಾಕ್ಷ್ಯಾಧಾರಗಳೂ ಸಿಕ್ಕಿವೆ. ಅಫ್ತಾಬ್ ಮತ್ತು ಶ್ರದ್ಧಾ ಹಲವು ಬಾರಿ ಬೇರ್ಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿ ಮಾತ್ರವಲ್ಲದೆ ಹಿಮಾಚಲ ಪ್ರದೇಶ ಮತ್ತು ಮುಂಬೈನಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು ನಡೆಸುತ್ತಿದ್ದಾರೆ. ಅಫ್ತಾಬ್ ಮತ್ತು ಶ್ರದ್ಧಾ ಅವರ ಹಿಮಾಚಲ ಭೇಟಿಯ ಲಿಂಕ್‌ಗಳನ್ನು ಪೊಲೀಸರು ಸೇರಿಸುತ್ತಿದ್ದಾರೆ. ಮುಂಬೈನಲ್ಲಿ ಪ್ರತ್ಯಕ್ಷದರ್ಶಿಗಳು, ಶ್ರದ್ಧಾ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಸೈಬರ್ ಸೆಲ್ ಎಫ್‌ಎಸ್‌ಒ ಘಟಕ, ದಕ್ಷಿಣ ವಿಶೇಷ ಸಿಬ್ಬಂದಿ ಸೇರಿದಂತೆ 200 ಪೊಲೀಸರು ಶ್ರದ್ಧಾ ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: “ಕಾರು, ಟಿವಿಗಳನ್ನು ಖರೀದಿಸಬೇಡಿ!...ವಿಶ್ವದ ಶ್ರೀಮಂತ ವ್ಯಕ್ತಿ ಹೀಗೆ ಹೇಳಿದ್ದ್ಯಾಕೆ?

ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರಿಗೆ ಮುಂದಿನ 4 ದಿನಗಳು ಅತ್ಯಂತ ನಿರ್ಣಾಯಕವಾಗಿವೆ. ಆರೋಪಿ ಅಫ್ತಾಬ್ ನನ್ನು ಮತ್ತೊಮ್ಮೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು 4 ದಿನಗಳ ಕಾಲ ಬಂಧನವನ್ನು ವಿಸ್ತರಿಸಿದೆ. ಮೇ 18ರ ನಂತರ ಪೊಲೀಸರು ಅಫ್ತಾಬ್‌ನ ಮೊಬೈಲ್‌ ಫೋನ್‌ ಎಲ್ಲಿದೆ ಎಂಬ ತನಿಖೆಯನ್ನು ಮಾಡಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More