Home> India
Advertisement

Shocking Video: ಕಾರು ಚಲಾಯಿಸುತ್ತಿದ್ದಂತೆಯೇ ಪ್ರಜ್ಞೆ ಕಳೆದುಕೊಂಡ ಮಹಿಳೆ.! ಮುಂದೆ ?

ಟ್ರಾಫಿಕ್ ಸಿಗ್ನಲ್ ಬಿದ್ದ ನಂತರವೂ ಕಾರು ನಿಧಾನವಾಗಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಆದರೆ ಆ ಕಾರು ಯಾವ ದಿಕ್ಕಿಗೆ ಹೋಗುತ್ತಿದೆ ಎನ್ನುವುದನ್ನು ಕಂಡ ಸಾರ್ವಜನಿಕರಿಗೆ ಮೊದಲು ಆಶ್ಚರ್ಯವಾಗಿದೆ. 

 Shocking Video: ಕಾರು ಚಲಾಯಿಸುತ್ತಿದ್ದಂತೆಯೇ ಪ್ರಜ್ಞೆ ಕಳೆದುಕೊಂಡ ಮಹಿಳೆ.!  ಮುಂದೆ ?

ನವದೆಹಲಿ : ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ, ಸಾಮಾನ್ಯವಾಗಿ ನಾಗರಿಕರು ತಕ್ಷಣ ಸಹಾಯಕ್ಕಾಗಿ ಮುಂದೆ ಬರುತ್ತಾರೆ.  ಎಷ್ಟೋ ಸಲ ಅಪಘಾತ ಸಂಭವಿಸಿರುವುದಕ್ಕೆ ಏನು ಕಾರಣ ಎನ್ನುವುದು ತಿಳಿಯುವುದೇ ಇಲ್ಲ. ಇಲ್ಲಿ ಮಹಿಳೆಯೊಬ್ಬರು ಕಾರು ಚಾಲನೆ ಮಾಡುತ್ತಿರುವಂತೆಯೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕಾರು ಮಾತ್ರ ಹಾಗೆಯೇ ಚಲಿಸುತ್ತಿತ್ತು.   ಸಿಗ್ನಲ್ ಬಿದ್ದಾಗಲೂ ಕಾರು ನಿಲ್ಲದೆ ಅಡ್ಡಾದಿಡ್ಡಿಯಾಗಿ ಚಲಿಸಿದೆ. ಮೊದಲಿಗೆ ಏನಾಗುತ್ತಿದೆ ಎನ್ನುವುದು ಅಲ್ಲಿದ್ದವರಿಗೆ ತಿಳಿಯಲಿಲ್ಲ. 
 
ರಸ್ತೆಯ ಮಧ್ಯದಲ್ಲಿ ಮೂರ್ಛೆ ಹೋದ ಮಹಿಳೆ : 

ಟ್ರಾಫಿಕ್ ಸಿಗ್ನಲ್ ಬಿದ್ದ ನಂತರವೂ ಕಾರು ನಿಧಾನವಾಗಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಆದರೆ ಆ ಕಾರು ಯಾವ ದಿಕ್ಕಿಗೆ ಹೋಗುತ್ತಿದೆ ಎನ್ನುವುದನ್ನು ಕಂಡ ಸಾರ್ವಜನಿಕರಿಗೆ ಮೊದಲು ಆಶ್ಚರ್ಯವಾಗಿದೆ. ನಂತರ ಆ ಕಾರನ್ನು ಚಲಾಯಿಸುತ್ತಿದ್ದ ಮಹಿಳೆ ಪ್ರಜ್ಞೆ ಕಳೆದುಕೊಂಡಿರುವುದನ್ನು ಅಲ್ಲಿದ್ದ ಜನ ಗಮನಿಸಿದ್ದಾರೆ. ತಕ್ಷಣ, ಕಾರು ನಿಲ್ಲಿಸಲು ಪ್ರಯತ್ನಿಸಿದ್ದಾರೆ.  ಅದೃಷ್ಟವಶಾತ್ ಕಾರು ಹೋಗುತ್ತಿದ್ದ ದಿಕ್ಕಿನಿಂದ ಯಾವುದೇ ವಾಹನ ಅತಿವೇಗದಲ್ಲಿ ಬಾರದೆ, ಇದ್ದ ಕಾರಣ,  ಅನಾಹುತ ಸಂಭವಿಸಿಲ್ಲ. 

ಇದನ್ನೂ ಓದಿ ಒಂದೇ ಒಂದು ಚಿಪ್ಸ್ 1.90 ಲಕ್ಷ ರೂ.! ಕಾರಣ ತಿಳಿದರೆ ಶಾಕ್‌ ಆಗೋದು ಗ್ಯಾರಂಟಿ

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ : 
ಪೊಲೀಸರ ಪ್ರಕಾರ, ಕಾರು ಚಲಾಯಿಸುತ್ತಿದ್ದ ಮಹಿಳೆ  ಮೂರ್ಛೆ ಹೋಗಿರುವುದನ್ನು  ರಸ್ತೆಯಲ್ಲಿದ್ದ ಜನರು  ಗಮನಿಸಿದ್ದಾರೆ. ತಕ್ಷಣ ಮಹಿಳೆಯ ಶಯಕ್ಕು ಧಾವಿಸಿದ್ದಾರೆ. ಚಲಿಸುತ್ತಿದ್ದ ವಾಹನವನ್ನು ನಿಲ್ಲಿಸುವುದಕ್ಕೆ ಅಲ್ಲಿದ್ದ ಎಲ್ಲರೂ ಸಹಾಯ ಮಾಡಿದ್ದಾರೆ. ಇನ್ನು ಕಾರನ್ನು ನಿಲ್ಲಿಸುವ ಮತ್ತು ಮಹಿಳೆಯನ್ನು ರಕ್ಷಿಸುವ ಸಲುವಾಗಿ, ವ್ಯಕ್ತಿಯೊಬ್ಬರು ಕಾರಿನ ಕಿಟಕಿ ಗಾಜನ್ನು ಒಡೆದಿದ್ದಾರೆ.  ನಂತರ ಕಾರಿನಿಂದ ಮಹಿಳೆಯನ್ನು ಹೊರ ತೆಗೆದು ವೈದ್ಯಕೀಯ ನೆರವು ನೀಡಲಾಗಿದೆ. ಮಹಿಳೆಯನ್ನು ವೆಸ್ಟ್ ಪಾಮ್ ಬೀಚ್ ನಿವಾಸಿ ಲಾರಿ ರಾಬಿಯರ್ ಎಂದು ಗುರುತಿಸಲಾಗಿದೆ.

 

ಅಧಿಕ ರಕ್ತದೊತ್ತಡದ ಮಾತ್ರೆ ಮತ್ತು ವೈದ್ಯಕೀಯ ಪ್ರೊಸೀಜರ್ ಹಿನ್ನೆಲೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಇದ್ದ ಕಾರಣ, ಮಹಿಳೆಗೆ ತಲೆ ಸುತ್ತು ಬಂದು, ಮೂರ್ಛೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ  ವೇಳೆ ಮಹಿಳೆಯ ಸಹಾಯಕ್ಕೆ ಬಂದ ಎಲ್ಲರಿಗೂ ಪೊಲೀಸರು ಧನ್ಯವಾದ ಹೇಳಿದ್ದಾರೆ. 

ಇದನ್ನೂ ಓದಿ : Viral Story: ಎಲ್ಲರ ಮುಂದೆಯೇ ಮದುವೆ ನಿಲ್ಲಿಸಿ ವಧು! ಕಾರಣ ಏನು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More