Home> India
Advertisement

Shocking video : ಮದುವೆಯ ವೇದಿಕೆಗೆ ಉಯ್ಯಾಲೆ ಮೇಲೆ ಎಂಟ್ರಿ ಕೊಟ್ಟ ವಧು-ವರ, ಹಗ್ಗ ತುಂಡಾಗಿ 12 ಎತ್ತರದಿಂದ ಕೆಳಗೆ ಬಿದ್ದ ಜೋಡಿ

ಈ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ.  ವಧು-ವರರು ಉಯ್ಯಾಲೆ ಮೂಲಕ ಗ್ರ್ಯಾಂಡ್ ಎಂಟ್ರಿ ತೆಗೆದುಕೊಂಡಿದ್ದಾರೆ. ವೃತ್ತಾಕಾರದ ಉಯ್ಯಾಲೆಯಲ್ಲಿ ವಧು-ವರರ ಎಂಟ್ರಿಯನ್ನು ಇಲ್ಲಿ ಕಾಣಬಹುದು.  

Shocking video : ಮದುವೆಯ ವೇದಿಕೆಗೆ ಉಯ್ಯಾಲೆ ಮೇಲೆ ಎಂಟ್ರಿ ಕೊಟ್ಟ ವಧು-ವರ, ಹಗ್ಗ ತುಂಡಾಗಿ 12  ಎತ್ತರದಿಂದ ಕೆಳಗೆ ಬಿದ್ದ ಜೋಡಿ

ನವದೆಹಲಿ : ಪ್ರಸ್ತುತ ಭಾರತದಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ತಮ್ಮ ಜೀವನದ ವಿಶೇಷ ದಿನವನ್ನು ಇನ್ನಷ್ಟು  ಸ್ಮರಣೀಯವಾಗಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತವೆ. ಇತ್ತೀಚಿನ ದಿನಗಳಲ್ಲಿ, ಮದುವೆಗಳಲ್ಲಿ ವಧು- ವರರ ಗ್ರ್ಯಾಂಡ್ ಎಂಟ್ರಿ ಟ್ರೆಂಡ್ ಪ್ರಾರಂಭವಾಗಿದೆ.  ಆದರೆ ಈ ಮದುವೆಯ ಸಮಾರಂಭದಲ್ಲಿ ವಧು-ವರರ ಎಂಟ್ರಿ ವೇಳೆ, ಅವಘಡವೊಂದು ಸಂಭವಿಸಿದೆ. 

12 ಅಡಿ ಎತ್ತರದಿಂದ ಕೆಳಗೆ ಬಿದ್ದ ವಧು- ವರ :

ಈ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ.  ವಧು-ವರರು ಉಯ್ಯಾಲೆ ಮೂಲಕ ಗ್ರ್ಯಾಂಡ್ ಎಂಟ್ರಿ ತೆಗೆದುಕೊಂಡಿದ್ದಾರೆ. ವೃತ್ತಾಕಾರದ ಉಯ್ಯಾಲೆಯಲ್ಲಿ ವಧು-ವರರ ಎಂಟ್ರಿಯನ್ನು (Wedding video) ಇಲ್ಲಿ ಕಾಣಬಹುದು.  ಆದರೆ ಇದ್ದಕ್ಕಿದ್ದಂತೆ ಉಯ್ಯಾಲೆಯ ಹಗ್ಗ ಮುರಿದು ಇಬ್ಬರೂ 12 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ಆದರೆ, ಅದೃಷ್ಟವಶಾತ್ ವಧು-ವರರಿಗೆ ಹೆಚ್ಚಿನ ಗಾಯಗಳಾಗಿಲ್ಲ. 

ಇದನ್ನೂ ಓದಿ  : Viral Video: ಅಪಾಯಕಾರಿ King Cobra ಹಿಡಿಯಲು ಹೋದ ವ್ಯಕ್ತಿ, ಮುಂದೇನಾಯ್ತು ನೀವೇ ನೋಡಿ

ಇದ್ದಕ್ಕಿದ್ದಂತೆ ಮುರಿದ ಉಯ್ಯಾಲೆಯ ಹಗ್ಗ : 
ಈ ಘಟನೆಯಿಂದಾಗಿ ಇಡೀ ಮದುವೆ ಮನೆಯಲ್ಲಿ ಆತಂಕ ಮನೆ ಮಾಡಿತ್ತು. ಉಯ್ಯಾಲೆಯ ಹಗ್ಗ ತುಂಡಾಗುತ್ತಿದ್ದಂತೆಯೇ ಮದುವೆ ಸಮಾರಂಭದಲ್ಲಿ ಕೋಲಾಹಲ ಉಂಟಾಯಿತು. ರಾಯ್‌ಪುರ ಠಾಣಾ ಕ್ಷೇತ್ರದ ತೆಲಿಬಂಡಾದಲ್ಲಿರುವ ಹೋಟೆಲ್‌ನಲ್ಲಿ ಈ ಮದುವೆ ನಡೆಯುತ್ತಿತ್ತು. ವಧು-ವರರ ಅದ್ಧೂರಿ ಪ್ರವೇಶ (grand entry on wedding)  ಮತ್ತು ವಿವಾಹ ಸಮಾರಂಭದ ಜವಾಬ್ದಾರಿಯನ್ನು ಈವೆಂಟ್ ಕಂಪನಿಗೆ ವಹಿಸಲಾಗಿತ್ತು. ಶನಿವಾರ ನಡೆದ ವಿವಾಹದ ವೇಳೆ ವೇದಿಕೆಯನ್ನು ಅದ್ದೂರಿಯಾಗಿ ಅಲಂಕರಿಸಲಾಗಿತ್ತು. ವಧು -ವರರ ಗ್ರ್ಯಾಂಡ್ ಎಂಟ್ರಿ ವೇಳೆ, ಜನರು ಕುಣಿದು ಕುಪ್ಪಳಿಸುತ್ತಿದ್ದುದ್ದನ್ನು ಕೂಡಾ ಇಲ್ಲಿ ಕಾಣಬಹುದು (Viral video) .  

 

ವಧು-ವರರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅರ್ಧಗಂಟೆಯ ನಂತರ ವಿವಾಹ ಕಾರ್ಯಕ್ರಮವನ್ನು ಮತ್ತೆ ಮುಂದುವರೆಸಲಾಯಿತು. 

ಇದನ್ನೂ ಓದಿ  : ಅಡುಗೆ ಮನೆಗೆ ನುಗ್ಗಿದ ದೈತ್ಯ ನಾಗರಹಾವು, ಬೆಚ್ಚಿ ಬೀಳಿಸುವ King Cobra Video ಇದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Read More