Home> India
Advertisement

Shocking News: ಹೆತ್ತ ಮಗನ ಮುಂದೆಯೇ ತಾಯಿಯ ಮೇಲೆ 79 ದಿನ ನಿರಂತರ ಅತ್ಯಾಚಾರ!

2017ರಲ್ಲಿ ವಿವಾಹವಾಗಿದ್ದ ತನಗೆ ವರದಕ್ಷಿಣೆ ವಿಚಾರವಾಗಿ ಅತ್ತೆ-ಮಾವ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.  

Shocking News: ಹೆತ್ತ ಮಗನ ಮುಂದೆಯೇ ತಾಯಿಯ ಮೇಲೆ 79 ದಿನ ನಿರಂತರ ಅತ್ಯಾಚಾರ!

ಬಾಲಸೋರ್: ಎರಡೂವರೆ ವರ್ಷದ ಮಗನ ಮುಂದೆಯೇ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ನಿರಂತರವಾಗಿ 79 ದಿನಗಳ ಕಾಲ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಶುಕ್ರವಾರ ಸಂತ್ರಸ್ತೆ ಮತ್ತು ಆಕೆಯ ಮಗನನ್ನು ಆರೋಪಿಯ ಕೋಣೆಯಿಂದ ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.

ಅತ್ಯಾಚಾರ ನಡೆಸಿದ ಬಳಿಕ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 2017ರಲ್ಲಿ ವಿವಾಹವಾಗಿದ್ದ ತನಗೆ ವರದಕ್ಷಿಣೆ ವಿಚಾರವಾಗಿ ಅತ್ತೆ-ಮಾವ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.  

ಇದನ್ನೂ ಓದಿ: 'ಬಿಜೆಪಿ ಶ್ರೀಮಂತರಿಗೊಂದು ಜನಸಾಮಾನ್ಯನಿಗೊಂದು ಭಾರತವನ್ನು ಸೃಷ್ಟಿಸಿದೆ'

ಈ ಹಿಂದೆ ಆರೋಪಿಯು ಮಹಿಳೆಯ ಕುಟುಂಬಕ್ಕೆ ಭಿನ್ನಾಭಿಪ್ರಾಯ ಬಗೆಹರಿಸುವ ಭರವಸೆ ನೀಡಿ, ಆಕೆಯನ್ನು ಕರೆದುಕೊಂಡು ಹೋಗಲು ಸಿದ್ಧನಾಗಿದ್ದ. ಆದರೆ, ಸಂತ್ರಸ್ತೆ ಆರೋಪಿ ಜೊತೆ ಹೋಗಲು ನಿರಾಕರಿಸಿದ್ದಳು. ಈ ಹಿನ್ನೆಲೆ ಆಕೆಯ ಅತ್ತೆ ಮಹಿಳೆಗೆ ಪ್ರಜ್ಞೆ ಹೋಗುವಂತೆ ಥಳಿಸಿ ಆರೋಪಿಯ ಕೋಣೆಯಲ್ಲಿ ಆಕೆಯ ಮಗನೊಂದಿಗೆ ಕೂಡಿಹಾಕಿದ್ದರು. ಪ್ರಜ್ಞೆ ಬಂದ ಬಳಿಕ ಮಹಿಳೆ ತನ್ನನ್ನು ಮತ್ತು ಮಗನನ್ನು ಬಿಟ್ಟುಬಿಡುವಂತೆ ಮಹಿಳೆ ಆರೋಪಿ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದಳಂತೆ.  

ಆದರೆ, ಆರೋಪಿಯು ಮಹಿಳೆಯ ಮೇಲೆ ಆಕೆಯ ಮಗನ ಮುಂದೆಯೇ 79 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಏಪ್ರಿಲ್ 28ರಂದು ಆರೋಪಿ ತನ್ನ ಮೊಬೈಲ್ ಫೋನ್‍ಅನ್ನು ಕೋಣೆಯಲ್ಲಿಯೇ ಬಿಟ್ಟು ಹೋಗಿದ್ದ. ಅದನ್ನು ತೆಗೆದುಕೊಂಡ ಮಹಿಳೆ ಕೂಡಲೇ ತನ್ನ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಈ ಬಗ್ಗೆ ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೇಶದ್ರೋಹದಡಿ ದಾಖಲಾದ ಪ್ರಕರಣಗಳ ಬಗ್ಗೆ ತೀರ್ಮಾನಿಸಲು ಕೇಂದ್ರಕ್ಕೆ 24 ಗಂಟೆಗಳ ಗಡುವು

ಮಾಹಿತಿ ಪಡೆದುಕೊಂಡ ಪೊಲೀಸರು ತಕ್ಷಣವೇ ಸ್ಥಳ ತಲುಪಿ ಪರಿಶೀಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಸೇರಿ ಹಲವು ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ಮತ್ತು ಆಕೆಯ ಮಗನನ್ನು ರಕ್ಷಿಸಿರುವ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಮಹಿಳೆ ಎಫ್‌ಐಆರ್‌ನಲ್ಲಿ ತನ್ನ ಪತಿ, ಅತನ ಸಹೋದರ, ಅತ್ತೆ-ಮಾವನ ಬಗ್ಗೆ ದೂರು ನೀಡಿದ್ದಾರೆ. ಆದರೆ, ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More