Home> India
Advertisement

ಪ್ರಧಾನಿ ಮೋದಿ ರಾತ್ರಿಯಿಡೀ ಗುಹೆಯಲ್ಲಿ ಕುಳಿತು ಸಂಶೋಧನೆ ಮಾಡ್ತಿದ್ರಾ? ಶರದ್ ಯಾದವ್ ವ್ಯಂಗ್ಯ

ಲೋಕಸಭಾ ಚುನಾವಣೆ 2019ರ ಕೊನೆಯ ಹಂತದ ಮತದಾನ ಭಾನುವಾರ ನಡೆಯುತ್ತಿದ್ದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪ್ರಧಾನಿ ಮೋದಿ ಅವರ ಕೇದಾರನಾಥ ಭೇಟಿ ಮಾತ್ರ ಸುದ್ದಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. 

ಪ್ರಧಾನಿ ಮೋದಿ ರಾತ್ರಿಯಿಡೀ ಗುಹೆಯಲ್ಲಿ ಕುಳಿತು ಸಂಶೋಧನೆ ಮಾಡ್ತಿದ್ರಾ? ಶರದ್ ಯಾದವ್ ವ್ಯಂಗ್ಯ

ನವದೆಹಲಿ: ಪ್ರಧಾನಿ ಮೋದಿ ಕೇದಾರನಾಥ ದೇವಸ್ಥಾನದ ಬಳಿಯ ಗುಹೆಯಲ್ಲಿ ರಾತ್ರಿಯಿಡೀ ಧ್ಯಾನ ಮಾಡಿದ ಬಗ್ಗೆ ಟೀಕಿಸಿರುವ ಎಲ್‌ಜೆಡಿ(ಲೋಕತಾಂತ್ರಿಕ ಜನತಾದಳ) ನಾಯಕ ಶರದ್ ಯಾದವ್, ಗುಹೆಯಲ್ಲಿ ಕುಳಿತು ಮೋದಿ ಸಂಶೋಧನೆ ಮಾಡ್ತಿದ್ರಾ ಎಂದು ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆ 2019ರ ಕೊನೆಯ ಹಂತದ ಮತದಾನ ಭಾನುವಾರ ನಡೆಯುತ್ತಿದ್ದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪ್ರಧಾನಿ ಮೋದಿ ಅವರ ಕೇದಾರನಾಥ ಭೇಟಿ ಮಾತ್ರ ಸುದ್ದಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. ಈ ಬೆನ್ನಲ್ಲೇ ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡುತ್ತಾ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶರದ್ ಯಾದವ್, ಪ್ರಪಂಚದಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದ ಪ್ರಧಾನಿ ಗುಹೆಯೊಳಗೆ ಕುಳಿತುಕೊಳ್ಳುತ್ತಾರೆ. ಅದರಿಂದ ಅವರು ಸಾಧಿಸಿದ್ದಾದರೂ ಏನು? ಏನಾದರೂ ಸಂಶೋಧನೆ ಮಾಡಿದ್ರಾ? ಲೋಕಸಭೆಯನ್ನು ಕಿರ್ತನ್ ಸಭಾ ಆಗಿ ಪರಿವರ್ತಿಸಲು ಪ್ರಯತ್ನಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. 

ಲೋಸಭಾ ಚುನಾವಣೆಯ ಕೊನೆಯ ಹಂತದ ಮತದಾನದ ಮುನ್ನಾ ದಿನ ಕೇದಾರನಾಥ ಮತ್ತು ಬದ್ರಿನಾಥ್ ಪ್ರವಾಸ ಕೈಗೊಂಡಿದ್ದ ಮೋದಿ ಕೆದಾರನಾಥದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಳಿಕ ಅಲ್ಲಿನ ಗುಹೆಯಲ್ಲಿ ರಾತ್ರಿಯಿಡೀ ಧ್ಯಾನದಲ್ಲಿ ತಲ್ಲಿನರಾಗಿದ್ದ ಮೋದಿ, ಮರುದಿನ ಬೆಳಿಗ್ಗೆ ಬದರೀನಾಥಕ್ಕೆ ಪ್ರಯಾನ ಬೆಳಸಿದ್ದರು. ಮೋದಿ ಅವರ ಈ ಎರಡು ದಿನಗಳ ದೇವಾಲಯ ಭೇಟಿ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Read More