Home> India
Advertisement

Srinagar Encounter: ಸೋಪೋರ್ ಎನ್‌ಕೌಂಟರ್‌ನಲ್ಲಿ ಪರಾರಿಯಾಗಿದ್ದ ಉಗ್ರರನ್ನು ಶ್ರೀನಗರದಲ್ಲಿ ಹತ್ಯೆಗೈದ ಭದ್ರತಾ ಪಡೆ

Srinagar Encounter:  ಕಾಶ್ಮೀರ ಕಣಿವೆಯಲ್ಲಿ ಗುರಿ ಹತ್ಯೆ ಆರಂಭವಾದ ನಂತರ, ಭದ್ರತಾ ಪಡೆಗಳು ಭಯೋತ್ಪಾದಕರನ್ನು ಪತ್ತೆ ಹಚ್ಚಲು ಮತ್ತು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿವೆ. ಸೋಮವಾರ ರಾತ್ರಿ ಅವರು ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Srinagar Encounter: ಸೋಪೋರ್ ಎನ್‌ಕೌಂಟರ್‌ನಲ್ಲಿ ಪರಾರಿಯಾಗಿದ್ದ ಉಗ್ರರನ್ನು ಶ್ರೀನಗರದಲ್ಲಿ ಹತ್ಯೆಗೈದ ಭದ್ರತಾ ಪಡೆ

ಶ್ರೀನಗರ ಎನ್‌ಕೌಂಟರ್:   ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಶೋಧದ ಮೂಲಕ ಭಯೋತ್ಪಾದಕರ ನಿರ್ಮೂಲನೆಯಲ್ಲಿ ತೊಡಗಿವೆ. ಶ್ರೀನಗರದ ಬೆಮಿನಾ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ತಟಸ್ಥಗೊಳಿಸಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಜವಾನ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ತಡರಾತ್ರಿ ಶ್ರೀನಗರದಲ್ಲಿ ನಡೆದ ಎನ್‌ಕೌಂಟರ್:
ಭಯೋತ್ಪಾದಕರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ಸೋಮವಾರ ರಾತ್ರಿ ಬೆಮಿನಾ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಕಾಶ್ಮೀರ ರೇಂಜ್ ಐಜಿ ವಿಜಯ್ ಕುಮಾರ್ ಹೇಳಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಭಯೋತ್ಪಾದಕರು ಭದ್ರತಾ ಪಡೆಗಳ ಭಯೋತ್ಪಾದಕರು ಮೇಲೆ ಗುಂಡಿನ ದಾಳಿ ನಡೆಸಿದ್ದು, ಯೋಧರು ಕೂಡ ಪ್ರತ್ಯುತ್ತರ ನೀಡಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು, ಒಬ್ಬ ಪಾಕಿಸ್ತಾನಿ ಮತ್ತು ಒಬ್ಬ ಸ್ಥಳೀಯರು ಎಂದು ಗುರುತಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ- "ಇಂಗ್ಲಿಷ್ ಪ್ರೀಮಿಯರ್ ಲೀಗ್‌ಗಿಂತ ಐಪಿಎಲ್ ಹೆಚ್ಚಿನ ಆದಾಯವನ್ನು ಗಳಿಸುತ್ತಿದೆ"

ಹತರಾದ ಉಗ್ರರ ಗುರುತು:
ಹತ್ಯೆಗೀಡಾದ ಭಯೋತ್ಪಾದಕನನ್ನು ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ಅಬ್ದುಲ್ಲಾ ಗೊಜ್ರಿ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಎರಡನೇ ಭಯೋತ್ಪಾದಕನನ್ನು ಅನಂತನಾಗ್‌ನ ಪಹಲ್ಗಾಮ್ ನಿವಾಸಿ ಆದಿಲ್ ಹುಸೇನ್ ಮೀರ್ ಎಂದು ಗುರುತಿಸಲಾಗಿದೆ. ಆದಿ ಹುಸೇನ್ 2018 ರಲ್ಲಿ ಪ್ರವಾಸಿ ವೀಸಾದಲ್ಲಿ ತರಬೇತಿಗಾಗಿ ಪಾಕಿಸ್ತಾನಕ್ಕೆ ಹೋಗಿದ್ದರು ಮತ್ತು ನಂತರ ಭಯೋತ್ಪಾದಕರಾಗಿ ಮರಳಿದ್ದರು. ಹತ್ಯೆಗೀಡಾದ ಇಬ್ಬರು ಉಗ್ರರಿಂದ 2 ಎಕೆ 47 ರೈಫಲ್‌ಗಳು, 10 ಮ್ಯಾಗಜೀನ್‌ಗಳು, ಪಾಕಿಸ್ತಾನಿ ಔಷಧಗಳು, ಮ್ಯಾಟ್ರಿಕ್ಸ್ ಶೀಟ್‌ಗಳು ಸೇರಿದಂತೆ ದೋಷಾರೋಪಣೆಯ ಸಾಹಿತ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ- SBI ನಲ್ಲಿ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಅಮರನಾಥ ಯಾತ್ರೆ ಯಾತ್ರಿಕರ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಉಗ್ರರು:
ಹತ್ಯೆಗೀಡಾದ ಇಬ್ಬರೂ ಭಯೋತ್ಪಾದಕರು ಸೋಪೋರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ  ಭಾಗಿಯಾಗಿದ್ದರು ಆದರೆ ಕತ್ತಲೆಯಿಂದಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಜೂನ್ 30 ರಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯ ಮೇಲೆ ದೊಡ್ಡ ದಾಳಿ ನಡೆಸುವುದು ಅವರ ಉದ್ದೇಶವಾಗಿತ್ತು. ಅವರು ತಮ್ಮ ಉದ್ದೇಶದಲ್ಲಿ ಯಶಸ್ವಿಯಾಗುವ ಮೊದಲು ಅವರನ್ನು ಮಟ್ಟ ಹಾಕಲಾಗಿದೆ  ಎಂದು ಐಜಿ ವಿಜಯ್ ಕುಮಾರ್ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Read More