Home> India
Advertisement

ಬಿಹಾರ: ಇಂದು ಬಿಜೆಪಿ-ಜೆಡಿಯು-ಎಲ್ಜೆಪಿ ಸೀಟು ಹಂಚಿಕೆ ಘೋಷಣೆ

ಬಿಜೆಪಿ ಮೂಲಗಳ ಮಾಹಿತಿಯ ಪ್ರಕಾರ, ಈಗಾಗಲೇ ನಿಗದಿಪಡಿಸಿದ ಸಂಖ್ಯೆಯ ಆಧಾರದ ಮೇಲೆ, ಎಲ್ಜೆಪಿಯ ಖಾತೆಗೆ ನಾಲ್ಕು ಲೋಕಸಭೆ ಮತ್ತು ಒಂದು ರಾಜ್ಯಸಭೆ ಸ್ಥಾನ ನೀಡುವ ಸಾಧ್ಯತೆ.

ಬಿಹಾರ: ಇಂದು ಬಿಜೆಪಿ-ಜೆಡಿಯು-ಎಲ್ಜೆಪಿ ಸೀಟು ಹಂಚಿಕೆ ಘೋಷಣೆ

ಪಾಟ್ನಾ: ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ, ಬಿಹಾರದಲ್ಲಿ ಬಿಜೆಪಿ, ಜನತಾ ದಳ ಯುನೈಟೆಡ್ (ಜೆಡಿಯು) ಮತ್ತು ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ನಡುವಿನ ಸ್ಥಾನ ಹಂಚಿಕೆಗಾಗಿ ಮಾತುಕತೆ ಪೂರ್ಣಗೊಂಡಿದೆ. ಇಂದು ಎಲ್ಲಾ ಮೂರು ಪಕ್ಷಗಳ ಹಿರಿಯ ಮುಖಂಡರು ಪತ್ರಿಕಾಗೋಷ್ಠಿಯನ್ನು ನಡೆಸಿ ಸೀಟು ಹಂಚಿಕೆ ಘೋಷಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ಲೋಕ ಸಮಾತಾ ಪಕ್ಷದ ನಿರ್ಗಮನದ ನಂತರ, ಎಲ್ಜೆಪಿ ಸ್ಥಾನಗಳನ್ನು ಮತ್ತೆ ನವೀಕರಿಸಲಾಯಿತು.

fallbacks

ಬಿಜೆಪಿ ಮೂಲಗಳ ಮಾಹಿತಿಯ ಪ್ರಕಾರ, ಈಗಾಗಲೇ ನಿಗದಿಪಡಿಸಿದ ಸಂಖ್ಯೆಯ ಆಧಾರದ ಮೇಲೆ, ಎಲ್ಜೆಪಿಯ ಖಾತೆಗೆ ನಾಲ್ಕು ಲೋಕಸಭೆ ಮತ್ತು ಒಂದು ರಾಜ್ಯಸಭೆ ಸ್ಥಾನ ನೀಡಬಹುದು ಎನ್ನಲಾಗಿದೆ. ಆರ್​ಎಲ್​ಎಸ್​ಪಿ ನಿರ್ಗಮನದ ನಂತರ ಪಾಸ್ವಾನ್ ಎರಡು ಸ್ಥಾನಗಳ ಮೇಲೆ ಹಕ್ಕು ಸಾಧಿಸಿದರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಜೆಡಿ (ಯು) ಅಧ್ಯಕ್ಷ ನಿತೀಶ್ ಕುಮಾರ್ ಈಗಾಗಲೇ ಎರಡೂ ಪಕ್ಷಗಳು ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂದು ಘೋಷಿಸಿದ್ದಾರೆ.

ಸೀಟ್ ಹಂಚಿಕೆಯ ಹೊಸ ಸಮೀಕರಣದ ಪ್ರಕಾರ, ಒಕ್ಕೂಟದ ಪಾಲುದಾರರಿಗೆ ಬಿಜೆಪಿ ತ್ಯಾಗ ಮಾಡಿದೆ. 2014 ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ 30, ಎಲ್ಜೆಪಿ ಏಳು ಮತ್ತು ಆರ್​ಎಲ್​ಎಸ್​ಪಿ ಮೂರು ಸ್ಥಾನಗಳನ್ನು ಗೆದ್ದಿದೆ. ಈ ಚುನಾವಣೆಯಲ್ಲಿ ಜೆಡಿಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಜೆಡಿಯು ಜತೆಗೂಡಿದ ನಂತರ, ಬಿಜೆಪಿ ಹೆಚ್ಚಿನ ನಷ್ಟವನ್ನು ಎದುರಿಸುತ್ತಿದೆ.

fallbacks

ಹೊಸ ಸೂತ್ರದ ಆಧಾರದ ಮೇಲೆ ಬಿಜೆಪಿ ಮತ್ತು ಜೆಡಿಯು 17-17 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಎಲ್ಜೆಪಿಗೆ ಏಳು ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಇಂದಿನ ಪತ್ರಿಕಾಗೋಷ್ಠಿಯಲ್ಲಿ ಯಾವ ಯಾವ ಪಕ್ಷ ಯಾವ ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬುದನ್ನು ಘೋಷಿಸುವ ಸಾಧ್ಯತೆ ಇದೇ.

2014 ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ನೀವು ನೋಡಿದರೆ ಬಿಜೆಪಿ 29.4% ಮತ್ತು ಎಲ್ಜೆಪಿ ಖಾತೆ 6.4% ರಷ್ಟಿದೆ. ಅದೇ ಸಮಯದಲ್ಲಿ, ಜೆಡಿಯು ಕೇವಲ ಎರಡು ಸೀಟುಗಳನ್ನು ಗೆದ್ದ ಯಶಸ್ಸನ್ನು ಹೊಂದಿತ್ತು, ಆದರೆ ಮತ ಶೇಕಡಾ 15.8 ರಷ್ಟು ಇತ್ತು. ನೀವು ಮೂರು ಪಕ್ಷಗಳ ಮತ ಹಂಚಿಕೆಯನ್ನು ನೋಡಿದರೆ, ಈ ಅಂಕಿ-ಅಂಶವು 51.6 ಪ್ರತಿಶತದಷ್ಟು ಆಗುತ್ತದೆ. 

Read More