Home> India
Advertisement

SBI Jobs: ನೌಕರಿ ಹೆಸರಿನಲ್ಲಿ ವಂಚನೆ, ಈ ಎಚ್ಚರಿಕೆಯನ್ನು ತಪ್ಪದೆ ಓದಿ

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಉದ್ಯೋಗ ಪಡೆಯುವುದು ಸಾವಿರಾರು ಯುವಕರ ಕನಸು. ಆದರೆ ಎಸ್‌ಬಿಐನಲ್ಲಿ ಉದ್ಯೋಗ ಪಡೆಯುವ ಆಕಾಂಕ್ಷೆಯಿಂದ ವಂಚನೆಯ ಅಪಾಯ ಹೆಚ್ಚಾಗಿದೆ. ಹೌದು, ಎಸ್‌ಬಿಐನಲ್ಲಿ ಸರ್ಕಾರಿ ಉದ್ಯೋಗ ನೀಡುವ ಹೆಸರಿನಲ್ಲಿ ವಂಚನೆಗಳೂ ನಡೆಯುತ್ತಿವೆ.

SBI Jobs: ನೌಕರಿ ಹೆಸರಿನಲ್ಲಿ ವಂಚನೆ, ಈ ಎಚ್ಚರಿಕೆಯನ್ನು ತಪ್ಪದೆ ಓದಿ

ನವದೆಹಲಿ: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಉದ್ಯೋಗ ಪಡೆಯುವುದು ಸಾವಿರಾರು ಯುವಕರ ಕನಸು. ಆದರೆ ಎಸ್‌ಬಿಐನಲ್ಲಿ ಉದ್ಯೋಗ ಪಡೆಯುವ ಆಕಾಂಕ್ಷೆಯಿಂದ ವಂಚನೆಯ ಅಪಾಯ ಹೆಚ್ಚಾಗಿದೆ. ಹೌದು, ಎಸ್‌ಬಿಐನಲ್ಲಿ ಸರ್ಕಾರಿ ಉದ್ಯೋಗ ನೀಡುವ ಹೆಸರಿನಲ್ಲಿ ವಂಚನೆಗಳೂ ನಡೆಯುತ್ತಿವೆ. ಸ್ವತಃ SBI ಈ ಅಪಾಯವನ್ನು ಮನಗಂಡು ಎಚ್ಚರಿಕೆಯ ಸಂದೇಶವನ್ನು ಜಾರಿಗೊಳಿಸಿದೆ.

SBI ಜಾರಿಗೊಳಿಸಿದೆ ಅಲರ್ಟ್

ಪ್ರಸ್ತುತ ನಡೆಯುತ್ತಿರುವ ಭರ್ತಿಗಳ ನಡುವೆ ಬರುತ್ತಿರುವ ದೂರುಗಳನ್ನು ಆಧರಿಸಿ, ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಅಲರ್ಟ್ ಜಾರಿಗೊಳಿಸಿದೆ. ನೂತನ ಎಚ್ಚರಿಕೆಯ ಅನುಸಾರ SBI ಹೆಸರಿನ ಅಡಿ ಫೇಕ್ ಜಾಬ್ ಲೆಟರ್ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಫೇಕ್ ವೆಬ್ ಸೈಟ್ ಕೂಡ ರಚಿಸಲಾಗಿದ್ದು, ಫೇಕ್ ಸಿಲೆಕ್ಷನ್ ಲಿಸ್ಟ್ ಕೂಡ ಪ್ರಕಟಿಸಲಾಗುತ್ತಿದೆ. ಹೀಗಾಗಿ ನೌಕರಿ ನೀಡುವ ಹೆಸರಿನಡಿ ನೀವು ವಂಚನೆಗೆ ಒಳಗಾಗಬಹುದು ಎಂದು SBI ಎಚ್ಚರಿಕೆ ನೀಡಬಹುದು.

fallbacksಒಂದು ವೇಳೆ ನೀವೂ ಕೂಡ ಅರ್ಜಿ ಸಲ್ಲಿಸಿದ್ದರೆ ಈ ವಿಷಯಗಳನ್ನು ಗಮನಿಸಿ 
ಈ ಕುರಿತು ತನ್ನ ಅಧಿಕೃತ ವೆಬ್ ಸೈಟ್ ಮೇಲೆ ಜಾರಿಗೊಳಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್, SBI ಎಂದಿಗೂ ಕೂಡ ತನ್ನ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವುದಿಲ್ಲ. ಎಸ್.ಬಿ.ಐ ಕೇವಲ ತನ್ನ ಆಯ್ಕೆಯಾದ ಅಭ್ಯರ್ಥಿಗಳ ರೋಲ್ ನಂಬರ್ ಹಾಗೂ ನೋಂದಣಿ ಸಂಖ್ಯೆಯನ್ನು ಮಾತ್ರ ಜಾರಿಗೊಳಿಸುತ್ತದೆ. ಇದಲ್ಲದೆ ಆಯ್ಕೆ ಮಾಡಲಾದ ಅಭ್ಯರ್ಥಿಗಳಿಗೆ ಇ-ಮೇಲ್, ಎಸ್.ಎಂ.ಎಸ್ ಹಾಗೂ ಅಂಚೆ ಮೂಲಕ ಸೂಚಿಸಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ. ಇದಲ್ಲದೆ https://www.sbi.co.in/careers ಹಾಗೂ https://bank.sbi/careers ವೆಬ್ ಸೈಟ್ ಗಳಿಗೂ ಕೂಡ ನೀವು ಭೇಟಿ ನೀಡಬಹುದು.

Read More