Home> India
Advertisement

Insurance Policyಗಳಿಗೆ ಹೆಸರು ಸೂಚಿಸಿ ರೂ.30,000ವರೆಗೆ ಬಹುಮಾನ ಗೆಲ್ಲುವ ಅವಕಾಶ

ಸ್ಟ್ಯಾಂಡರ್ಡ್ ಫೈರ್ ಮತ್ತು ಸ್ಪೆಷಲ್ ಪೆರಿಲ್ಸ್' ವಿಭಾಗದಲ್ಲಿ ವಸತಿ ಮತ್ತು ಸಣ್ಣ ಉದ್ಯಮಗಳ ಗುಣಮಟ್ಟದ ಉತ್ಪನ್ನಗಳಿಗಾಗಿ ಐಆರ್ಡಿಎ ಈ ಬೇಡಿಕೆಯನ್ನು ಮಾಡಿದೆ.

Insurance Policyಗಳಿಗೆ ಹೆಸರು ಸೂಚಿಸಿ ರೂ.30,000ವರೆಗೆ ಬಹುಮಾನ ಗೆಲ್ಲುವ ಅವಕಾಶ

ನವದೆಹಲಿ: ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಒಟ್ಟು 3 ವಿಮಾ ಪಾಲಸಿಗಳಿಗೆ ಹೆಸರನ್ನು ಸೂಚಿಸಲು ಸಾರ್ವಜನಿಕರಿಗೆ ಮನವಿ ಮಾಡಿದೆ. 'ಸ್ಟ್ಯಾಂಡರ್ಡ್ ಫೈರ್ ಮತ್ತು ಸ್ಪೆಷಲ್ ಪೆರಿಲ್ಸ್' ವಿಭಾಗದಲ್ಲಿ ವಸತಿ ಮತ್ತು ಸಣ್ಣ ಉದ್ಯಮಗಳ ಗುಣಮಟ್ಟದ ಉತ್ಪನ್ನಗಳಿಗಾಗಿ ಐಆರ್ಡಿಎ ಈ ಮನವಿ ಮಾಡಿದೆ. ಐಆರ್ಡಿಎ ಸಾರ್ವಜನಿಕರಿಂದ ಹೆಸರುಗಳನ್ನು ಕೋರಿರುವ ಮೂರು ಪಾಲಸಿಗಳು, ವಸತಿ ಯಾಪ್ತಿಗೆ ಒಳಪಡುವ ನಿವಾಸಗಳಿಗೆ ಯಾವುದೇ ಮೊತ್ತದವರೆಗೆ ಕವರ್ ನೀಡುವುದು, ಯಾವುದೇ ಲೋಕೇಶನ್ ನಲ್ಲಿರುವ ರೂ.5 ಕೋಟಿ ರೂ ಮೊತ್ತದ ವ್ಯಾಲ್ಯೂ ಅಟ್ ರಿಸ್ಕ್ ಹೊಂದಿರುವ ಮೈಕ್ರೋ ಕಮರ್ಷಿಯಲ್ ಎಂಟಿಟಿಗಳಿಗೆ ಕವರ್ ಮಾಡುವ ಹಾಗೂ ಯಾವುದೇ ಲೋಕೇಶನ್ ಮೇಲಿರುವ ಇನ್ಸ್ಯೂರೆಬಲ್ ಅಸೆಟ್ ಕ್ಲಾಸ್ ನಲ್ಲಿ 50 ಕೋಟಿ ರೂ.ಗಳವರೆಗೆ ಇರುವ ವ್ಯಾಲ್ಯೂ ಅಟ್ ರಿಸ್ಕ್ ಹೊಂದಿರುವ ಸಣ್ಣ ಕಮರ್ಷಿಯಲ್ ಎಂಟಿಟಿಜ್ ಗಳನ್ನೂ ಕವರ್ ಮಾಡುವ ಪಾಲಸಿಗಳಗಿವೆ. 

ಸರಿಯಾದ ಹೆಸರುಗಳನ್ನು ಸೂಚಿಸುವವರಿಗೆ ಪ್ರತಿ ಹೆಸರಿಗೆ 10,000 ರೂ.ಗಳ ಬಹುಮಾನ ಮತ್ತು ಉಲ್ಲೇಖ ಅಂದರೆ ಸೈಟೆಶನ್ ಸಿಗಲಿದೆ ಎಂದು ಐಆರ್ಡಿಎ ಘೋಷಿಸಿದೆ. ಅಂದರೆ, ಯಾರಾದರೂ ಸೂಚಿಸಿದ ಮೂರು ಹೆಸರುಗಳನ್ನು ಆಯ್ಕೆಯಾದರೆ ಅವರಿಗೆ 30000 ರೂ. ಐಆರ್ಡಿಎಗೆ ಬಹುಮಾನದ ರೂಪದಲ್ಲಿ ನೀಡಲಿದೆ. ಇದಕ್ಕಾಗಿ ಜುಲೈ ಜುಲೈ 10 ರವರೆಗೆ ಸಮಯಾವಕಾಶ ಇದೆ.

ಹೆಸರುಗಳು ಹೇಗಿರಬೇಕು?
ಈ ಪಾಲಸಿಗಳು ವಸತಿ ಘಟಕಗಳು ಮತ್ತು ಸಣ್ಣ ಉದ್ಯಮಗಳನ್ನು ದುರಂತ ಘಟನೆಗಳಿಂದ, ಅದರಲ್ಲೋ ಪ್ರಮುಖವಾಗಿ ಪ್ರವಾಹದಂತಹ ಪರಿಸ್ಥಿತಿಯಲ್ಲಿ ರಕ್ಷಣೆ ಒದಗಿಸಲಿವೆ ಎಂದು ಐಆರ್ಡಿಎ ಹೇಳಿದೆ. ಹೀಗಾಗಿ ಪಾಲಸಿಗಳ ಹೆಸರಿನಲ್ಲಿ ಅವುಗಳ ಉದ್ದೇಶ ಪ್ರತಿಫಲಿಸಬೇಕು. ಹೆಸರನ್ನು ಸೂಚಿಸುವಾಗ ಅದರ ಪ್ರಾಯೋಗಿಕತೆ, ಸರಳತೆ ಮತ್ತು ಅದನ್ನು ಸುಲಭವಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳಲು ಆಗಿರಬೇಕು. ಅಲ್ಲದೆ, ಈ ಪಾಲಸಿಗಳು ಇಡೀ ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ಬರಲಿವೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಈ ಹೆಸರನ್ನು ಭಾರತದಾದ್ಯಂತ ಬಳಸುವ ಹಾಗಿರಬೇಕು ಎಂದು IRDAI ಹೇಳಿದೆ.

Read More