Home> India
Advertisement

ಪೇಟಿಎಂ/ ಇತರ ವಾಲೆಟ್ ಬಳಸುವವರಿಗೆ ವಿಶೇಷ ಸುದ್ದಿ!

ನೀವು ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವಾಗ ಪೇಟಿಎಂ, ಮೊಬಿಕ್ವಿಕ್ ಅಥವಾ ಭಾರತ್ ಬಿಲ್ ನಂತರ ಪೇಮೆಂಟ್ ಗೇಟ್ ವೆ ಬಳಸುತ್ತೀರಾ... ಹಾಗಾದರೆ ಈ ಸುದ್ದಿ ನಿಮಗಾಗಿ. ವಾಸ್ತವವಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಡಿಜಿಟಲ್ ಪೇಮೆಂಟ್ ಉತ್ತೇಜಿಸುತ್ತಿದೆ.

ಪೇಟಿಎಂ/ ಇತರ ವಾಲೆಟ್ ಬಳಸುವವರಿಗೆ ವಿಶೇಷ ಸುದ್ದಿ!

ನವದೆಹಲಿ: ನೀವು ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವಾಗ ಪೇಟಿಎಂ, ಮೊಬಿಕ್ವಿಕ್ ಅಥವಾ ಭಾರತ್ ಬಿಲ್ ನಂತರ ಪೇಮೆಂಟ್ ಗೇಟ್ ವೆ ಬಳಸುತ್ತೀರಾ... ಹಾಗಾದರೆ ಈ ಸುದ್ದಿ ನಿಮಗಾಗಿ. ವಾಸ್ತವವಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಡಿಜಿಟಲ್ ಪೇಮೆಂಟ್ ಉತ್ತೇಜಿಸುತ್ತಿದೆ. ಮತ್ತೊಂದೆಡೆ, ಆರ್ಬಿಐ ಅದನ್ನು ಸುರಕ್ಷಿತಗೊಳಿಸಲು ಮತ್ತೊಂದು ಹಂತವನ್ನು ತೆಗೆದುಕೊಂಡಿದೆ. ಪಾವತಿ ಗೇಟ್ವೇ ಪೂರೈಕೆದಾರರನ್ನು ಮತ್ತು ಪಾವತಿ ಮೊತ್ತವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ಒಂದು ಪ್ರಸ್ತಾಪವನ್ನು ನೀಡಿದೆ. ಇದರಿಂದಾಗಿ ಗ್ರಾಹಕರ ಡಿಜಿಟಲ್ ಪಾವತಿ ಹೆಚ್ಚು ಸುರಕ್ಷಿತವಾಗಿರಲಿದೆ. ಇದರ ನಂತರ ಪೇಟಿಎಂ, ಮೊಬಿಕ್ವಿಕ್ ಅಥವಾ ಭಾರತ್ ಬಿಲ್ ನಂತರ ಪೇಮೆಂಟ್ ಗೇಟ್ ವೆ ಗಳು ರಿಸರ್ವ್ ಬ್ಯಾಂಕ್ ನ ಗೈಡ್ ಲೈನ್ ಅನುಸರಿಸುತ್ತವೆ.

ಇ-ವ್ಯಾಲೆಟ್ ಬಳಕೆಗೆ ಕೆವೈಸಿ ಕಡ್ಡಾಯ:

ಸುಪ್ರೀಂ ಕೋರ್ಟ್ ಗ್ರಾಹಕರ ಅಧಿಕೃತತೆಯನ್ನು ಸಾರುವ ಕೆವೈಸಿ ವ್ಯವಸ್ಥೆ ಕಡ್ಡಾಯ ಜಾರಿಗೊಳಿಸುವಂತೆ ನಿರ್ದೇಶನ ಮಾಡಿತ್ತು. ಇದರ ಆಧಾರದಲ್ಲಿ ಕೆವೈಸಿ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ನಡೆದಿತ್ತು. ಇ-ವ್ಯಾಲೆಟ್ ಬಳಕೆಗೆ ಕೆವೈಸಿ ಕಡ್ಡಾಯವಾಗಿರುತ್ತದೆ. ನೀವು ಇನ್ನೂ KYC ಯನ್ನು ನವೀಕರಿಸದಿದ್ದರೆ ಫೆಬ್ರವರಿ 28ರ ಬಳಿಕ ನಿಮ್ಮ ಇ ವಾಲೆಟ್ ಬಂದ್ ಆಗಲಿದೆ. ಆರ್ಬಿಐ ನಿಯಮಗಳ ಪ್ರಕಾರ ವಾಲೆಟ್ ನಲ್ಲಿರುವ ಹಣ ವರ್ಗಾವಣೆ ಮಾಡಲು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಅನ್ನು ಹೊಂದಿರುವುದು ಅವಶ್ಯಕವಾಗಿದ್ದು, ಗ್ರಾಹಕರು ಫೆ.28 ರೊಳಗೆ ಕೆವೈಸಿ ನವೀಕರಿಸಬೇಕು.
 

Read More