Home> India
Advertisement

ಕರ್ನಾಟಕ ಬಿಕ್ಕಟ್ಟು: ಲೋಕಸಭೆಯಲ್ಲಿ ಬಿಜೆಪಿ ವಿರುದ್ಧದ ಘೋಷಣೆಗೆ ರಾಹುಲ್ ಗಾಂಧಿ ಕೂಡ ಸಾಥ್

 ಮಂಗಳವಾರದಂದು ಲೋಕಸಭೆಯಲ್ಲಿ ಕಾಂಗ್ರೆಸ ಸದನದ ನಾಯಕ ಅಧಿರ್ ರಂಜನ್ ಚೌಧರಿ ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟಿನ ವಿಚಾರವಾಗಿ ಪ್ರಸ್ತಾಪಿಸಿದರು.ಇದೇ ವೇಳೆ ಇದಕ್ಕೆ ಸಹಮತ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕ ಬಿಕ್ಕಟ್ಟು: ಲೋಕಸಭೆಯಲ್ಲಿ ಬಿಜೆಪಿ ವಿರುದ್ಧದ ಘೋಷಣೆಗೆ ರಾಹುಲ್ ಗಾಂಧಿ ಕೂಡ ಸಾಥ್

ನವದೆಹಲಿ:  ಮಂಗಳವಾರದಂದು ಲೋಕಸಭೆಯಲ್ಲಿ ಕಾಂಗ್ರೆಸ ಸದನದ ನಾಯಕ ಅಧಿರ್ ರಂಜನ್ ಚೌಧರಿ ಕರ್ನಾಟಕದಲ್ಲಿನ ರಾಜಕೀಯ ಬಿಕ್ಕಟ್ಟಿನ ವಿಚಾರವಾಗಿ ಪ್ರಸ್ತಾಪಿಸಿದರು.ಇದೇ ವೇಳೆ ಇದಕ್ಕೆ ಸಹಮತ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸದನದಲ್ಲಿ ಸದಸ್ಯರು ತನಶಾಹಿ ಬಂದ್ ಕರೋ, ಶಿಕರ್ ರಾಜನೀತಿ ಬಂದ್ ಕರೋ, ಬಂದ್ ಕರೋ  (ಸರ್ವಾಧಿಕಾರಕ್ಕೆ ಧಿಕ್ಕಾರ, ಬೇಟೆ ರಾಜಕಾರಣ ನಿಲ್ಲಿಸಿ) ಎಂದು ಘೋಷಣೆ ಕೂಗಿದರು. ಇದಕ್ಕೆ ರಾಹುಲ್ ಗಾಂಧಿ ಕೂಡ ಸಾಥ್ ನೀಡಿದರು. ಆದರೆ ಸ್ಪೀಕರ್ ಓಂ ಬಿರ್ಲಾ ಕಾಂಗ್ರೆಸ್ ನಾಯಕರ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸಿ, ಈ ವಿಚಾರ ಕುರಿತಾಗಿ ರಾಜ್ ನಾಥ್ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.

ಇದಾದ ನಂತರ ಕಾಂಗ್ರೆಸ್ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೂಡ ಸದನದಿಂದ ಹೊರ ನಡೆದರು. ಇದೇ ವೇಳೆ ಡಿಎಂಕೆ ಸದಸ್ಯರು ಕೂಡ ಸಾಥ್ ನೀಡಿದರು. ಬಿಜೆಪಿ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಆಪರೇಶನ್ ಗೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಆಡಳಿತ ಪಕ್ಷದ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Read More