Home> India
Advertisement

ರಫೇಲ್‌ನಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ: ನಿರ್ಮಲಾ ಸೀತಾರಾಮನ್

ನಾವು ರಕ್ಷಣಾ ಡೀಲ್ ಮಾಡುತ್ತಿಲ್ಲ. ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡುವುದಕ್ಕಾಗಿ ರಕ್ಷಣೆಯಲ್ಲಿ ಡೀಲ್ ಮಾಡುತ್ತಿದ್ದೇವೆ. ಹೀಗಾಗಿ ನರೇಂದ್ರ ಮೋದಿ ಅವರನ್ನು ಜನತೆ ಮತ್ತೆ ಪ್ರಧಾನಿ ಮಾಡಲಿದ್ದಾರೆ ಎಂದು ಹೇಳಿದರು.

ರಫೇಲ್‌ನಿಂದ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ: ನಿರ್ಮಲಾ ಸೀತಾರಾಮನ್

ನವದೆಹಲಿ: ಬೋಫೋರ್ಸ್ ಹಗರಣದಿಂದ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದಿತ್ತು. ಆದರೆ ಯಾವುದೇ ಹಗರಣವಿಲ್ಲದೆ ರಫೇಲ್ ಫೈಟರ್ ಜೆಟ್ ಖರೀದಿ ಮೂಲಕ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಶುಕ್ರವಾರ ರಫೇಲ್ ಡೀಲ್‌ಗೆ ಸಂಬಂಧಿಸಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿಪಕ್ಷ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಬೋಫೋರ್ಸ್ ಫಿರಂಗಿ ಖರೀದಿ ಹಗರಣದಲ್ಲಿ ದೇಶದ ಹಿತಾಸಕ್ತಿಯನ್ನು ಕಡೆಗಣಿಸಿದ್ದರಿಂದ ಕಾಂಗ್ರೆಸ್ ಅನ್ನು ಜನರು ಅಧಿಕಾರದಿಂದ ಕೆಳಗಿಳಿಸಿದರು. ಆದರೆ ಯಾವುದೇ ಹಗರಣವಿಲ್ಲದೆ ರಫೇಲ್ ಫೈಟರ್ ಜೆಟ್ ಖರೀದಿ ಮೂಲಕ ಪ್ರಧಾನಿ ನರೇಂದ್ರ ಮೋದಿ, ದೇಶದ ರಕ್ಷಣೆಗೆ ಮುಂದಾಗಿದ್ದಾರೆ. ಹೀಗಾಗಿ ನರೇಂದ್ರ ಮೋದಿ ಅವರನ್ನು ಜನತೆ ಮತ್ತೆ ಪ್ರಧಾನಿ ಮಾಡಲಿದ್ದಾರೆ ಎಂದು ಹೇಳಿದರು.

'ರಫೇಲ್‌ ಡೀಲ್‌ ವಿಷಯದಲ್ಲಿ ಕಾಂಗ್ರೆಸ್‌ ಸುಳ್ಳುಗಳ ಸರಮಾಲೆಯನ್ನೇ ಕಟ್ಟುತ್ತಿದೆ' ಎಂದು ಟೀಕಿಸಿದ ಕೇಂದ್ರ ಸಚಿವೆ ಸೀತಾರಾಮನ್‌, ರಫೇಲ್‌ ದರ ಮತ್ತು ಎಚ್‌ಎಎಲ್‌ ಈ ಡೀಲ್‌ ನಲ್ಲಿ ಆಫ್ಸೆಟ್‌ ಗುತ್ತಿಗೆಯನ್ನು ಏಕೆ ಪಡೆಯಲಿಲ್ಲ ಎಂಬ ವಿಷಯದಲ್ಲಿ ವಿರೋಧ ಪಕ್ಷಗಳ ಆರೋಪಗಳನ್ನು ಅಂಕಿ-ಅಂಶ, ಮಾಹಿತಿ ಸಹಿತವಾಗಿ ತಳ್ಳಿ ಹಾಕಿದರು. ರಕ್ಷಣಾ ಸಚಿವಾಲಯ ದಲ್ಲಾಳಿಗಳ ನೆರವಿಲ್ಲದೆ, ನೇರವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ದೇಶದ ರಕ್ಷಣೆಯ ವಿಚಾರದಲ್ಲಿ ಕಾಂಗ್ರೆಸ್ ಕೈಗೊಂಡ ನಿರ್ಧಾರ, ಅವರಿಗೇ ಮುಳುವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಮುಂದುವರೆದು ಮಾತನಾಡುತ್ತಾ, ನಾವು ರಕ್ಷಣಾ ಡೀಲ್ ಮಾಡುತ್ತಿಲ್ಲ. ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡುವುದಕ್ಕಾಗಿ ರಕ್ಷಣೆಯಲ್ಲಿ ಡೀಲ್ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್'ಗೆ ಸ್ಪಷ್ಟಪಡಿಸಿದ ನಿರ್ಮಲಾ ಸೀತಾರಾಮನ್ ಅವರು, ಸೆಪ್ಟೆಂಬರ್ 2019ರಲ್ಲಿ ಮೊದಲ ರಫೇಲ್ ಯುದ್ಧ ವಿಮಾನ ಬರಲಿದೆ. ನಂತರ 2022ರ ವೇಳೆಗೆ ಎಲ್ಲಾ 36 ವಿಮಾನಗಳು ಡೆಲಿವೆರಿ ಆಗಲಿವೆ ಎಂದು ಲೋಕಸಭೆಗೆ ತಿಳಿಸಿದರು.

Read More