Home> India
Advertisement

Punjab New Chief Minister: ಪಂಜಾಬ್ CM ಆಫರ್ ತಿರಸ್ಕರಿಸಿದ Ambika Soni, ಶಾಸಕಾಂಗ ಪಕ್ಷದ ಸಭೆಯೂ ರದ್ದು

Punjab New Chief Minister: ಪಂಜಾಬ್ ಕಾಂಗ್ರೆಸ್‌ನಲ್ಲಿ (Congress) ನೂತನ ಮುಖ್ಯಮಂತ್ರಿಗಾಗಿ ಇನ್ನೂ ಯಾವುದೇ ಒಂದು ಮುಖದ ಮೇಲೆ ಒಮ್ಮತ ಮೂಡಿಬಂದಿಲ್ಲ. ಈ ಕುರಿತು ಹೇಳಿಕೆ ನೀಡಿದ್ದ ಪಕ್ಷದ ಹಿರಿಯ ಮುಖಂಡೆ ಅಂಬಿಕಾ ಸೋನಿ ಕೇವಲ ಸಿಖ್ ಮುಖ ಮಾತ್ರ ಪಂಜಾಬ್ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ.

Punjab New Chief Minister: ಪಂಜಾಬ್ CM ಆಫರ್ ತಿರಸ್ಕರಿಸಿದ Ambika Soni, ಶಾಸಕಾಂಗ ಪಕ್ಷದ ಸಭೆಯೂ ರದ್ದು

Punjab New Chief Minister: ಪಂಜಾಬ್ ಕಾಂಗ್ರೆಸ್ ನಲ್ಲಿ ಏರಿಳಿತಗಳು ಮುಂದುವರೆದಿದೆ. ಏತನ್ಮಧ್ಯೆ ಪಕ್ಷದ ರಾಷ್ಟೀಯ ಅಧ್ಯಕ್ಷೆ ಸೋನಿಯಾ ಗಾಂಧೀ ಪ್ರದೇಶದ ಮುಖ್ಯಮಂತ್ರಿಯಾಗಿ ಅಂಬಿಕಾ ಸೋನಿ (Ambika Soni) ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಮೂಲಗಳ ವರದಿ ಪ್ರಕಾರ, ಅಂಬಿಕಾ ಸೋನಿ ಪಂಜಾಬ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ನಿರಾಕರಿಸಿದ್ದು, ಪಂಜಾಬ್ ಆಡಳಿತದ ಚುಕ್ಕಾಣಿ ಕೇವಲ ಸಿಖ್ ಸಮುದಾಯದ (Sikh Community) ವ್ಯಕ್ತಿಯ ಕೈಯಲ್ಲಿಯೇ ಇರಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಇಂದು ನಡೆಯಬೇಕಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ರದ್ದುಪಡಿಸಲಾಗಿದೆ ಎನ್ನಲಾಗಿದೆ. ಆದರೆ, ಈ ಸಭೆ ಮತ್ತೆ ಯಾವಾಗ ನಡೆಯಲಿದೆ ಎಬುದರ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಸಿಎಂ ರೇಸ್ ನಲ್ಲಿ ಈ ಹೆಸರುಗಳಿವೆ

ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ನಿನ್ನೆ ತಡರಾತ್ರಿ ರಾಹುಲ್ ಗಾಂಧಿ (Rahul Gandhi) ನಿವಾಸದಲ್ಲಿ ನಡೆದ ಸಭೆಯಲ್ಲಿ, ಅಂಬಿಕಾ ಸೋನಿ ಪಂಜಾಬ್ ರಾಜಕೀಯ ಪ್ರವೇಶಿಸಲು ನಿರಾಕರಿಸಿದ್ದಾರೆ. ಸೋನಿಯಾ ಗಾಂಧಿಯವರ (Sonia Gandhi) ಲಕೋಟೆಯಿಂದ ಪಂಜಾಬ್ ನ ಹೊಸ ಮುಖ್ಯಮಂತ್ರಿಯ ಹೆಸರು ಹೊರಹೊಮ್ಮಲಿದೆ ಎಂದು ಹೇಳಲಾಗುತ್ತಿದೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navajot Singh Sidhu), ಪಂಜಾಬ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ಸುನಿಲ್ ಜಖರ್ ಮತ್ತು ಸುಖಜಿಂದರ್ ಸಿಂಗ್ ರಾಂಧವಾ ಅವರ ಹೆಸರುಗಳು ಸಿಎಂ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿವೆ.

ಇದನ್ನೂ ಓದಿ-ಯಾರಾಗ್ತಾರೆ ಪಂಜಾಬ್ ನೂತನ ಮುಖ್ಯಮಂತ್ರಿ? ರೇಸ್​ನಲ್ಲಿ ಇರುವ ಹೆಸರುಗಳಿವು

ರಾಜೀನಾಮೆ ನೀಡಿದ ಬಳಿಕ ಕ್ಯಾಪ್ಟನ್ ಹೇಳಿದ್ದೇನು?
ಪಂಜಾಬ್ ಸಿಎಂ ಸ್ಥಾನಕ್ಕೆ ನಿನ್ನೆ ಕ್ಯಾಪ್ಟನ್ ಅಮರಿಂದ ಸಿಂಗ್ (Captain Amarindar Singh) ರಾಜೀನಾಮೆ ನೀಡಿದ್ದಾರೆ. ಬಳಿಕ  ಮಾತನಾಡಿದ ಅವರು, 'ನನ್ನನ್ನು ಅವಮಾನಿಸಲಾಗಿದೆ. ನನಗೆ ಯಾವುದೇ ರೀತಿಯ ಮಾಹಿತಿ ನೀಡದೆಯೇ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ' ಎಂದು ಹೇಳಿದ್ದರು.

ಇದನ್ನೂ ಓದಿ-ಸರ್ಕಾರಕ್ಕೆ 20 ಕೋಟಿ ತೆರಿಗೆ ವಂಚಿಸಿದ ನಟ ಸೋನು ಸೂದ್!

ನವಜೋತ್ ಸಿಂಗ್ ಸಿಧು ಅವರನ್ನು ವಿರೋಧಿಸುವೆ
ರಾಜೀನಾಮೆ ನೀಡಿದ ನಂತರ ಮಾತನಾಡಿದ್ದ ಕ್ಯಾಪ್ಟನ್ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಜೊತೆಗಿದ್ದಾರೆ, ನಾನು ಅವರನ್ನು ಒಪ್ಪಿಕೊಳ್ಳಬೇಕೆ? ಸಿದ್ದು ಬಾಜ್ವಾ ಜೊತೆಗಿದ್ದಾರೆ, ನಾನು ಆತನಿಗೆ ಬೆಂಬಲ ನೀಡಬೇಕೆ? ಮಂತ್ರಾಲಯವನ್ನು ನಡೆಸಲು ಸಾಧ್ಯವಾಗದ ವ್ಯಕ್ತಿ ರಾಜ್ಯವನ್ನುಹೇಗೆ ನಡೆಸಬಲ್ಲ? ಸಿದ್ದು ಪಂಜಾಬ್‌ಗೆ ವಿಪತ್ತು ಸಾಬೀತಾಗಲಿದ್ದಾರೆ. ಇಮ್ರಾನ್ ಖಾನ್ (Imran Khan) ಮತ್ತು ಬಾಜ್ವಾ (Bajwa) ಸಿಧುವಿನ ಸ್ನೇಹಿತರು. ಪಾಕಿಸ್ತಾನದಿಂದ ಪ್ರತಿದಿನ ಡ್ರೋನ್‌ಗಳು ಮತ್ತು ಗ್ರೆನೇಡ್‌ಗಳು ಬರುತ್ತವೆ. ಸಿದ್ದು ಅವರನ್ನು ಸಿಎಂ ಮಾಡಿದರೆ ನಾನು ಪ್ರತಿಭಟಿಸುತ್ತೇನೆ. ನಾನು ಇನ್ನೂ ಯಾವುದೇ ಪಕ್ಷದ ಜೊತೆ ಮಾತನಾಡಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More