Home> India
Advertisement

ಶೀಘ್ರವೇ ನಿರ್ಧಾರ: ಪೆಟ್ರೋಲ್ ಹಾಕಿಸಿಕೊಳ್ಳುವ ಮೊದಲು ಈ ಪ್ರಮಾಣಪತ್ರ ತೋರಿಸಬೇಕಾಗುತ್ತದೆ!

ದೆಹಲಿ ಸರ್ಕಾರವು ಈ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಶೀಘ್ರವೇ ನಿರ್ಧಾರ: ಪೆಟ್ರೋಲ್ ಹಾಕಿಸಿಕೊಳ್ಳುವ ಮೊದಲು ಈ ಪ್ರಮಾಣಪತ್ರ ತೋರಿಸಬೇಕಾಗುತ್ತದೆ!

ನವದೆಹಲಿ: ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್(Petrol and Diesel) ತುಂಬಿಸಿಕೊಳ್ಳಲು ದೆಹಲಿ ಸರ್ಕಾರವು ಶೀಘ್ರದಲ್ಲೇ ಪಿಯುಸಿ ಪ್ರಮಾಣಪತ್ರ(Pollution Under Control Certificate)ವನ್ನು ಕಡ್ಡಾಯಗೊಳಿಸಲಿದೆ. ದೆಹಲಿಯಲ್ಲಿ ಮಾಲಿನ್ಯಕಾರಕ ವಾಹನಗಳು ಸಂಚರಿಸುವುದನ್ನು ತಡೆಯಲು ಈ ನೀತಿಯು ನಮಗೆ ಸಹಾಯ ಮಾಡುತ್ತದೆ ಮತ್ತು ಜನರು ಇಲ್ಲಿ ಶುದ್ಧ ಗಾಳಿಯನ್ನು ಉಸಿರಾಡಬಹುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಈ ಕರಡನ್ನು ಸಾರ್ವಜನಿಕ ಅಭಿಪ್ರಾಯಕ್ಕಾಗಿ ಇರಿಸಲಾಗಿದೆ ಮತ್ತು ಜಾರಿಗೊಳಿಸುವ ಮೊದಲು ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೆಟ್ರೋಲ್‌ಗೆ ಪಿಯುಸಿ ಪ್ರಮಾಣಪತ್ರವೂ ಅಗತ್ಯ!

ವಾಹನ ಮಾಲೀಕರು ತಮ್ಮ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು (PUC Certificate) ದೆಹಲಿಯ ಪೆಟ್ರೋಲ್ ಪಂಪ್‌ಗೆ ಕೊಂಡೊಯ್ಯಬೇಕಾಗುತ್ತದೆ. ಪಿಯುಸಿ ಅಮಾನ್ಯವಾಗಿದೆ ಎಂದು ಕಂಡುಬಂದರೆ ಅದನ್ನು ಅದೇ ಪಂಪ್‌ನಲ್ಲಿ ಮತ್ತೇ ನೀಡಬೇಕಾಗುತ್ತದೆ. ದೆಹಲಿಯ ಕಳಪೆ ವಾಯು ಗುಣಮಟ್ಟ (AQI) ಮಟ್ಟ ಪರಿಗಣಿಸಿ ಈ ಕ್ರಮವನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ರಸ್ತೆಗಳಲ್ಲಿ ಮಾಲಿನ್ಯಕಾರಕ ವಾಹನಗಳ ಮೇಲೆ ಕಣ್ಣಿಡಲು ಇದು ಸಹಕಾರಿಯಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿWATCH: ನವಜೋತ್ ಸಿಂಗ್ ಸಿಧು ಕ್ರೂರಿ ಎಂದ ಸಹೋದರಿ..!

ಪೆಟ್ರೋಲ್ ಪಂಪ್‌ನಲ್ಲಿ ಮಾತ್ರ ತಪಾಸಣೆ

ದೆಹಲಿ ಸೇರಿದಂತೆ ಉತ್ತರ ಭಾರತವು ವಿಶೇಷವಾಗಿ ಚಳಿಗಾಲದಲ್ಲಿ ತೀವ್ರ ವಾಯು ಮಾಲಿನ್ಯವನ್ನು ಎದುರಿಸುತ್ತಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. ಈ ನೀತಿ ಜಾರಿಯಾದ ನಂತರ ಪಂಪ್‌(Petrol Pump)ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬುವಾಗ ವಾಹನಗಳು ಕಡ್ಡಾಯವಾಗಿ ಪಿಯುಸಿ ಪ್ರಮಾಣಪತ್ರವನ್ನು ಹೊಂದಿರಬೇಕು. ಹೀಗಾಗಿ ರಾಜ್ಯದ ಪ್ರತಿಯೊಂದು ವಾಹನಗಳ ಮಾಲಿನ್ಯದ ಮಟ್ಟವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು.

ಪಿಯುಸಿ ಸರ್ಟಿಫಿಕೇಟ್ ಎಂದರೇನು?

ವಾಹನ ಮಾಲಿನ್ಯವನ್ನು ನಿಯಂತ್ರಿಸಲು ನೋಂದಾಯಿತ ಪಿಯುಸಿ ಕೇಂದ್ರ(PUC Center)ಗಳ ಮೂಲಕ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು (ಪಿಯುಸಿ) ನೀಡಲಾಗುತ್ತದೆ. ದೆಹಲಿಯಲ್ಲಿ 10 ವಲಯಗಳಲ್ಲಿ ಸುಮಾರು 966 ಇಂತಹ ಕೇಂದ್ರಗಳಿವೆ. ವಾಹನ ಮಾಲಿನ್ಯದ ಮೇಲ್ವಿಚಾರಣೆ ಮತ್ತು ಹೊರಸೂಸುವಿಕೆಯ ಮಾನದಂಡಗಳ ಪ್ರಕಾರ ವಾಹನಗಳ ಫಿಟ್‌ನೆಸ್ ಅನ್ನು ಪ್ರಮಾಣೀಕರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ಪಿಯುಸಿ ಕೇಂದ್ರಗಳಿಂದ ಸರಿಯಾದ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಾಲಿನ್ಯ ಮಟ್ಟದ ಪರೀಕ್ಷಾ ನಿರೀಕ್ಷಕರಿಂದ ಆವರ್ತಕ ತಪಾಸಣೆಗಳನ್ನು ಮಾಡಲಾಗುತ್ತದೆ.

ಇದನ್ನೂ ಓದಿ: ನೂತನ ಮುಖ್ಯ ಆರ್ಥಿಕ ಸಲಹೆಗಾರ ಡಾ.ವಿ.ಅನಂತ ನಾಗೇಶ್ವರನ್ ಬಗ್ಗೆ ನಿಮಗೆಷ್ಟು ಗೊತ್ತು?

ದೆಹಲಿ ಸರ್ಕಾರ ವಿಶೇಷ ತಯಾರಿ ನಡೆಸುತ್ತಿದೆ

ದೆಹಲಿ ಸರ್ಕಾರ(Delhi Government)ವು ಈ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ವಾಹನ ಮಾಲೀಕರು ಮತ್ತು ಪೆಟ್ರೋಲ್ ಪಂಪ್ ಮಾಲೀಕರು ಪಿಯುಸಿ ಪ್ರಮಾಣಪತ್ರಗಳ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ ಮತ್ತು ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಪ್ರಮೇಯ ಬರುವುದಿಲ್ಲ. ಈ ವಿಧಾನಗಳು RFID ಯಂತಹ ತಂತ್ರಜ್ಞಾನವನ್ನು ಸಹ ಒಳಗೊಂಡಿರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More