Home> India
Advertisement

ಅಕ್ಟೋಬರ್ 1 ರಿಂದ ಖಾಸಗಿ ಮದ್ಯದ ಅಂಗಡಿಗಳು ಬಂದ್‌, ಏನು ಹೇಳುತ್ತದೆ ಹೊಸ ನಿಯಮ

ರಾಜಧಾನಿ ದೆಹಲಿಯಲ್ಲಿ ಅಕ್ಟೋಬರ್ ನಿಂದ ಖಾಸಗಿ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವುದು. ಪ್ರಸ್ತುತ, ದೆಹಲಿಯಲ್ಲಿ 720 ಕ್ಕೂ ಹೆಚ್ಚು ಮದ್ಯದಂಗಡಿಗಳಿದ್ದು, ಇದರಲ್ಲಿ 260 ಖಾಸಗಿ ಅಂಗಡಿಗಳಾಗಿವೆ. 

ಅಕ್ಟೋಬರ್ 1 ರಿಂದ ಖಾಸಗಿ ಮದ್ಯದ ಅಂಗಡಿಗಳು ಬಂದ್‌, ಏನು ಹೇಳುತ್ತದೆ ಹೊಸ ನಿಯಮ

ನವದೆಹಲಿ : Liquor Shops Latest News:ಮದ್ಯಪ್ರಿಯರಿಗೆ ಇದು ಪ್ರಮುಖ ಸುದ್ದಿ. ಅಕ್ಟೋಬರ್‌ನಿಂದ ಎಲ್ಲಾ ಖಾಸಗಿ ಮದ್ಯದ ಅಂಗಡಿಗಳನ್ನು (Private Liquor Shops)ಮುಚ್ಚಲಾಗುವುದು ಮತ್ತು ಸರ್ಕಾರಿ ಅಂಗಡಿಗಳಲ್ಲಿ ಮಾತ್ರ ಮದ್ಯ ದೊರೆಯಲಿದೆ. ಅಂದರೆ, ಈಗ ಮದ್ಯ ಖರೀದಿ ಅಷ್ಟು  ಸುಲಭವಲ್ಲ. 

ಮುಚ್ಚಲಾಗುವುದು ಮದ್ಯದ ಅಂಗಡಿ : 

ರಾಜಧಾನಿ ದೆಹಲಿಯಲ್ಲಿ (Delhi) ಅಕ್ಟೋಬರ್ ನಿಂದ ಖಾಸಗಿ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವುದು. ಪ್ರಸ್ತುತ, ದೆಹಲಿಯಲ್ಲಿ 720 ಕ್ಕೂ ಹೆಚ್ಚು ಮದ್ಯದಂಗಡಿಗಳಿದ್ದು, ಇದರಲ್ಲಿ 260 ಖಾಸಗಿ ಅಂಗಡಿಗಳಾಗಿವೆ. ಹೊಸ ಅಬಕಾರಿ ನೀತಿಯ ಪ್ರಕಾರ, ಎಲ್ಲಾ 32 ವಲಯಗಳಲ್ಲಿ ಪರವಾನಗಿಗಳನ್ನು ಹಂಚಿಕೆ ಮಾಡಿದ ನಂತರ, ಸರ್ಕಾರವು ಖಾಸಗಿ ಮದ್ಯದ ಅಂಗಡಿಗಳ (Liquor shops) ಪರವಾನಗಿಯನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಆದರೆ ಇನ್ನು ಮುಂದೆ ಅದನ್ನು ವಿಸ್ತರಿಸುವುದಿಲ್ಲ. ಈ ಕಾರಣದಿಂದಾಗಿ, ಎಲ್ಲಾ 260 ಖಾಸಗಿ ಅಂಗಡಿಗಳನ್ನು ಅಕ್ಟೋಬರ್ 1 ರಿಂದ ಮುಚ್ಚಲಾಗುವುದು. 

ಇದನ್ನೂ ಓದಿ :  Bank Holidays In October:ಅಕ್ಟೋಬರ್‌ ನಲ್ಲಿ ೨೧ ದಿನ ಬಂದ್ ಇರಲಿದೆ ಬ್ಯಾಂಕ್‌ , ಇಲ್ಲಿದೆ ರಜೆಯ ಸಂಪೂರ್ಣ ಲಿಸ್ಟ್‌ ‌
 ನಿಯಮಗಳನ್ನು ರೂಪಿಸಿದೆ ದೆಹಲಿ ಸರ್ಕಾರ :
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಹೇಳುವಂತೆ, ಹೊಸ ಅಬಕಾರಿ ನೀತಿಯ ಪ್ರಕಾರ, ದೆಹಲಿಯನ್ನು 32 ವಲಯಗಳಾಗಿ ವಿಂಗಡಿಸಲಾಗಿದೆ.  ಅದರಲ್ಲಿ 20 ವಲಯಗಳಲ್ಲಿ ಪರವಾನಗಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಉಳಿದ 12 ವಲಯಗಳ ಹಣಕಾಸು ಬಿಡ್‌ಗಳನ್ನು ಶೀಘ್ರದಲ್ಲೇನೀಡಲಾಗುತ್ತದೆ. ಹೊಸ ಅಬಕಾರಿ ನೀತಿಯಡಿ (New Excise Policy) ನವೆಂಬರ್ 17 ರಿಂದ ದೆಹಲಿಯಲ್ಲಿ ಹೊಸ ಅಂಗಡಿಗಳನ್ನು ತೆರೆಯಲಾಗುವುದು. ಅಲ್ಲಿಯವರೆಗೆ ಸರ್ಕಾರಿ ಅಂಗಡಿಗಳಲ್ಲಿ (New liquor shops) ಮಾತ್ರ ಮದ್ಯವನ್ನು ಮಾರಾಟ ಮಾಡಲಾಗುತ್ತದೆ. 

ಹೊಸ ಅಬಕಾರಿ ನೀತಿಯೊಂದಿಗೆ ಈ ಸಂಪೂರ್ಣ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ತರಲಾಗುವುದು ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಇದರೊಂದಿಗೆ, ಯಾವುದೇ ಮದ್ಯದ ಅಂಗಡಿಯು ಕನಿಷ್ಠ 500 ಚದರ ಅಡಿಗಳ ಅಂಗಡಿಯನ್ನು ಹೊಂದಿರಲೇ ಬೇಕು. 

ಇದನ್ನೂ ಓದಿ :  ರೈತರ ಭಾರತ ಬಂದ್ ಯಶಸ್ವಿಯಾಗಿದೆ- ರಾಕೇಶ್ ಟಿಕಾಯತ್

ದೆಹಲಿ ಸರ್ಕಾರದ ಯೋಜನೆ ತಿಳಿಯಿರಿ :
ಗಮನಿಸಬೇಕಾದ ಸಂಗತಿಯೆಂದರೆ ದೆಹಲಿಯು ಕೇಂದ್ರ ತೆರಿಗೆಗಳಲ್ಲಿ (tax) ಕೇವಲ 325 ಕೋಟಿ ರೂಪಾಯಿಗಳನ್ನು ಪಡೆಯುತ್ತದೆ. ಆದರೆ ಕೇಂದ್ರ ತೆರಿಗೆಗಳಲ್ಲಿ ದೆಹಲಿ ಸರ್ಕಾರದ ಭಾಗವಹಿಸುವಿಕೆಯು 1 ಲಕ್ಷದ 40 ಸಾವಿರ ಕೋಟಿಗಳು. ಇಲ್ಲಿಯವರೆಗೆ ಮದ್ಯದ ಅಂಗಡಿಯ ಪರವಾನಗಿ (Liquor shop License) ಶುಲ್ಕ ರೂ 8-10 ಲಕ್ಷ ಮತ್ತು ಅಬಕಾರಿ ಸುಂಕ ಶೇ 300 ಇತ್ತು. ಹೊಸ ಅಬಕಾರಿ ನೀತಿಯೊಂದಿಗೆ, ದೆಹಲಿ ಸರ್ಕಾರವು ನವೆಂಬರ್ 2021 ರಿಂದ ಪ್ರತಿ ವರ್ಷ ಸುಮಾರು 3500 ಕೋಟಿ ಆದಾಯವನ್ನು (Income) ಪಡೆಯುತ್ತದೆ ಮತ್ತು ಸರ್ಕಾರವು ಅಬಕಾರಿಗಳಿಂದ ಒಟ್ಟು 10000 ಕೋಟಿಗಳಷ್ಟು ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More