Home> India
Advertisement

Transgender pregnant : ಯಶಸ್ವಿಯಾಗಿ ʼಗಂಡು ಮಗುʼವಿಗೆ ಜನ್ಮ ನೀಡಿದ ʼಯುವಕʼ..! 

ಸಲಿಂಗಿ ದಂಪತಿ ಜಿಯಾ ಪಾವಲ್‌ ಮತ್ತು ಜಿಹಾದ್‌ ಅವರಿಗೆ ಗಂಡು ಮಗುವಾಗಿದೆ. ಹೆರಿಗೆ ನಂತರ ತಾಯಿ ಹಾಗೂ ಮಗು ಚೆನ್ನಾಗಿದ್ದಾರೆ ಎಂದು ಅವರ ಸ್ನೇಹಿತ ಆಡಮ್ ಹ್ಯಾರಿ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅವರ ಸ್ನೇಹಿತರು ಮಗುವನ್ನು ನೋಡಲು ಕಾತುರತೆಯಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

Transgender pregnant : ಯಶಸ್ವಿಯಾಗಿ ʼಗಂಡು ಮಗುʼವಿಗೆ ಜನ್ಮ ನೀಡಿದ ʼಯುವಕʼ..! 

Transgender pregnant : ಸಲಿಂಗಿ ದಂಪತಿ ಜಿಯಾ ಪಾವಲ್‌ ಮತ್ತು ಜಿಹಾದ್‌ ಅವರಿಗೆ ಗಂಡು ಮಗುವಾಗಿದೆ. ಹೆರಿಗೆ ನಂತರ ತಾಯಿ ಹಾಗೂ ಮಗು ಚೆನ್ನಾಗಿದ್ದಾರೆ ಎಂದು ಅವರ ಸ್ನೇಹಿತ ಆಡಮ್ ಹ್ಯಾರಿ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಅವರ ಸ್ನೇಹಿತರು ಮಗುವನ್ನು ನೋಡಲು ಕಾತುರತೆಯಿಂದ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ನು ಈ ಕುರಿತು ಆಡಮ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ, ಜಿಯಾ ಉತ್ಸಾಹದಿಂದ ಹೊರಗೆ ಕಾಯುತ್ತಿದ್ದಾನೆ, ನನ್ನ ಜೀವನದಲ್ಲಿ ನಾನು ಎಂದಿಗೂ ಸಂತೋಷವನ್ನು ಅನುಭವಿಸಿಲ್ಲ, ಮಗು ಗಂಡೋ ಅಥವಾ ಹುಡುಗಿಯೋ ಎಂದು ಕೇಳುವವರಿಗೆ ಮಗು ಬೆಳೆದಾಗ ಹೇಳಲಾಗುವುದು ಎಂದು ಶೀರ್ಷಿಕೆ ಬರೆದು ಫೋಟೋಸ್‌ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಜಿಹಾದ್‌ ಗರ್ಭಧಾರಣೆಯ ಮೂಲಕ ಭಾರತದ ಮೊದಲ ಟ್ರಾನ್ಸ್‌ಮ್ಯಾನ್ ತಂದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣವನ್ನು ಅದಾನಿ ಸಂಸ್ಥೆಗೆ ಹಸ್ತಾಂತರಿಸಲು ಯಾರ ಒತ್ತಡವೂ ಇರಲಿಲ್ಲ : GVK ಸ್ಪಷ್ಟನ

ತೃತೀಯಲಿಂಗಿಗಳಾಗಿರುವುದರಿಂದ ಇಬ್ಬರೂ ಕಾನೂನು ಪ್ರಕ್ರಿಯೆಯಲ್ಲಿ ಸಿಲುಕಿದ್ದರಿಂದ ಮಗುವನ್ನು ದತ್ತು ಪಡೆಯುವ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರು. ನಂತರ ಸ್ವತಃ ತಾವೇ ಜನ್ಮ ನೀಡುವ ಆಲೋಚನೆಗೆ ಬಂದಿದ್ದರು. ವೈದ್ಯರ ನೇತೃತ್ವದಲ್ಲಿ ಪರೀಕ್ಷೆ ನಡೆಸಿದ ಬಳಿಕ ಜಿಹಾದ್‌ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದು ದೃಢಪಟ್ಟಿದ್ದು, ಚಿಕಿತ್ಸೆ ಆರಂಭಿಸಲಾಗಿದೆ. ಕೊನೆಗೂ ಇಬ್ಬರ ಕನಸು ನನಸಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Read More