Home> India
Advertisement

West Bengal Election : ಎಲೆಕ್ಷನ್ ಮ್ಯಾನೇಜ್ ಮೆಂಟ್ ಕಾರ್ಯದಿಂದ Prashant Kishor ಸನ್ಯಾಸ ; ನಿರ್ಧಾರದ ಹಿಂದಿನ ಕಾರಣ ಇದು..

 ಪಶ್ಚಿಮ ಬಂಗಾಳದಲ್ಲಿ ಬಿಜೆಪಿ  ಎರಡಂಕಿಯನ್ನು ದಾಟಿದರೆ ಎಲೆಕ್ಷನ್ ಮ್ಯಾನೇಜ್ ಮೆಂಟ್ ವೃತ್ತಿಯಿಂದ ನಿವೃತ್ತಿ ಹೊಂದುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದರು. ಅವರ ಹೇಳಿಕೆ ಪ್ರಕಾರವೇ ಬಿಜೆಪಿ ರಾಜ್ಯದಲ್ಲಿ ಎರಡಂಕಿಯನ್ನು ದಾಟಿಲ್ಲ.
 

West Bengal Election  : ಎಲೆಕ್ಷನ್ ಮ್ಯಾನೇಜ್ ಮೆಂಟ್ ಕಾರ್ಯದಿಂದ Prashant Kishor ಸನ್ಯಾಸ ; ನಿರ್ಧಾರದ ಹಿಂದಿನ ಕಾರಣ ಇದು..

ನವದೆಹಲಿ : ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಕ್ಕಿಂತ (West Bengal Election Result) ಮುಂಚೆಯೇ ತೃಣಮೂಲ ಕಾಂಗ್ರೆಸ್  (TMC) ರಣನೀತಿಕಾರ ಪ್ರಶಾಂತ್ ಕಿಶೋರ್ (Prashant Kishor) ಎಲೆಕ್ಷನ್ ಮ್ಯಾನೇಜ್ ಮೆಂಟ್ ಕಾರ್ಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ. ಚುನಾವಣಾ ನಿರ್ವಹಣೆಯ ಕೆಲಸದಿಂದ ನಿವೃತ್ತರಾಗುತ್ತಿರುವುದಾಗಿ, ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಪ್ರಶಾಂತ್ ಕಿಶೋರ್ ನಿರ್ಧಾರದ ಹಿಂದಿನ ಕಾರಣ ಏನು ? 

 ಪಶ್ಚಿಮ ಬಂಗಾಳದಲ್ಲಿ ಬಿಜೆಪಿ (BJP) ಎರಡಂಕಿಯನ್ನು ದಾಟಿದರೆ ಎಲೆಕ್ಷನ್ ಮ್ಯಾನೇಜ್ ಮೆಂಟ್ ವೃತ್ತಿಯಿಂದ ನಿವೃತ್ತಿ ಹೊಂದುವುದಾಗಿ ಪ್ರಶಾಂತ್ ಕಿಶೋರ್ (Prashant Kishore) ಹೇಳಿದ್ದರು. ಅವರ ಹೇಳಿಕೆ ಪ್ರಕಾರವೇ ಬಿಜೆಪಿ ರಾಜ್ಯದಲ್ಲಿ ಎರಡಂಕಿಯನ್ನು ದಾಟಿಲ್ಲ. ಆದರೂ ಪ್ರಶಾಂತ್ ಕಿಶೋರ್ ನಿವೃತ್ತಿಯ ಹೇಳಿಕೆ ನೀಡಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಈ ಬಗ್ಗೆ ಪ್ರಶಾತ್ ಕಿಶೋರ್ ಅವರನ್ನು ಪ್ರಶ್ನಿಸಿದಾಗ, ಅವರು ನೀಡಿದ ಉತ್ತರ ಹೀಗಿತ್ತು. ತಾನು ಎಂದೂ ಈ ಕೆಲಸ ಮಾಡಲು ಬಯಸಿರಲಿಲ್ಲ. ಮನಸ್ಸಿಲ್ಲದಿದ್ದರೂ ಈ ಕೆಲಸಕ್ಕೆ ಬರುವಂತಾಯಿತು. ಈ ಕೆಲಸ ಮಾಡುವಂತಾಯಿತು ಎಂದಿದ್ದಾರೆ. ಅಲ್ಲದೆ, ಈಗ IPACಯಲ್ಲಿ ಬಹಳಷ್ಟು ಮಂದಿ ಸಮರ್ಥರಿದ್ದಾರೆ. ಅವರೆಲ್ಲಾ ನನಗಿಂತಲೂ ಚೆನ್ನಾಗಿ ಈ ಜವಾಬ್ದಾರಿಯನ್ನು ನಿಭಾಯಿಸಬಲ್ಲರು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. 
 
ಇದನ್ನೂ ಓದಿ
West Bengal Election Result 2021 : ನಂದಿಗ್ರಾಮದಲ್ಲಿ ಬಿಜೆಪಿಗೆ ಭಾರಿ ಮುಖಭಂಗ : ಮಮತಾ ಬ್ಯಾನರ್ಜಿಗೆ ಭರ್ಜರಿ ಗೆಲುವು!

ಪ್ರಶಾಂತ್ ಕಿಶೋರ್ ಮುಂದಿನ ನಡೆ? 
ಚುನಾವಣಾ ನಿರ್ವಹಣೆಯ (Election management) ಕೆಲಸಕ್ಕೆ ನಿವೃತ್ತಿ ಘೊಷಿಸಿದ ನಂತರ ಮುಂದೇನು ಎಂಬ ಪ್ರಶ್ನೆಗೂ ಪ್ರಶಾಂತ್ ಕಿಶೋರ್ ಅವರಲ್ಲಿ ಉತ್ತರವಿದೆ.  'ನಾನು ಖಂಡಿತವಾಗಿಯೂ ಏನಾದರೂ ಮಾಡುತ್ತೇನೆ. ಸ್ವಲ್ಪ ಯೋಚಿಸಲು ಸಮಯ ಬೇಕು ಎಂದಿದ್ದಾರೆ. ಸದ್ಯಕ್ಕೆ ವಿರಾಮದ ಅಗತ್ಯವಿದೆ ಎಂದಿದ್ದಾರೆ. ಅಷ್ಟೇ ಅಲ್ಲ ರಾಜಕೀಯ ಪ್ರವೇಶದ ಬಗ್ಗೆಯೂ ಸುಳಿವು ನೀಡಿದ್ದಾರೆ. 

ಇದನ್ನೂ ಓದಿ : TMC ಭರ್ಜರಿ ಗೆಲುವಿಗೆ ದೀದಿಗೆ ಅಭಿನಂದನೆ ಸಲ್ಲಿಸಿದ ಕೇಜ್ರಿವಾಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More