Home> India
Advertisement

69 ದಿನಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆ ಪುನಃಸ್ಥಾಪನೆ

ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಸೋಮವಾರ ಮಧ್ಯಾಹ್ನ 12 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲಿವೆ.

69 ದಿನಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆ ಪುನಃಸ್ಥಾಪನೆ

ನವದೆಹಲಿ: ಕಾಶ್ಮೀರ ಕಣಿವೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸೋಮವಾರ ಮಧ್ಯಾಹ್ನ 12 ಗಂಟೆಗೆ ರಾಜ್ಯದ ಉಳಿದ ಭಾಗಗಳಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳನ್ನು ಪುನಃಸ್ಥಾಪಿಸಲಿದೆ. ಇದರೊಂದಿಗೆ ಕಣಿವೆಯಲ್ಲಿ ಕನಿಷ್ಠ 40 ಲಕ್ಷ ಪೋಸ್ಟ್‌ಪೇಯ್ಡ್ ಸಂಪರ್ಕವನ್ನು ಸೋಮವಾರದಿಂದ ಕಾರ್ಯರೂಪಕ್ಕೆ ತರಲಾಗುವುದು. ಆದಾಗ್ಯೂ, 20 ಲಕ್ಷಕ್ಕೂ ಹೆಚ್ಚು ಪ್ರಿಪೇಯ್ಡ್ ಮೊಬೈಲ್ ಸಂಪರ್ಕಗಳು ಮತ್ತು ಇತರ ಇಂಟರ್ನೆಟ್ ಸೇವೆಗಳು ಈಗಲೂ ನಿಷ್ಕ್ರಿಯಗೊಂಡಿವೆ.

ಮೂಲಗಳ ಪ್ರಕಾರ, ದ್ವೇಷ ಸಾಧಿಸುವವರ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಯಲಿದೆ ಮತ್ತು ಕಣಿವೆಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಭಂಗ ತರುವ ಯಾವುದೇ ಕಾನೂನುಬಾಹಿರ ಕೂಟವನ್ನು ತಪ್ಪಿಸಲು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗುವುದು ಎನ್ನಲಾಗಿದೆ.

69 ದಿನಗಳ ನಂತರ ಕಣಿವೆ ರಾಜ್ಯದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಫೋನ್ ಸಂಪರ್ಕವನ್ನು ಪುನಃಸ್ಥಾಪಿಸಲಾಗಿರುವುದರಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸುದ್ದಿಸಂಸ್ಥೆ ಎಎನ್‌ಐಗೆ ಮಾತನಾಡಿದ ದಿಮ್ಮಾ ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ದಿಲ್ಬಾಗ್ ಸಿಂಗ್, "ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು. ದ್ವೇಷ ಸಾಧಿಸುವವರಿಗೆ ಸುಳ್ಳು ಹರಡಲು ಮೊಬೈಲ್ ಫೋನ್‌ಗಳು ಹೆಚ್ಚು ಆದ್ಯತೆಯ ಮಾರ್ಗವಾಗಿದೆ. ಸ್ಥಳೀಯ ಪೊಲೀಸರು ನಕಲಿ ಸುದ್ದಿಗಳು, ಈ ಪ್ರದೇಶದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಯನ್ನು ಪ್ರಚೋದಿಸಲು ರಚಿಸಲಾದ ಸಂದೇಶಗಳ ಮೇಲೆ ನಿಗಾ ಇಡುತ್ತಾರೆ. ಪಾಕಿಸ್ತಾನ ಬೆಂಬಲಿತ ಗುಂಪುಗಳು ಸುಳ್ಳು ವದಂತಿಗಳನ್ನು ಹರಡಿ ಶಾಂತಿ ಕದಡುವ ಬಗ್ಗೆ ಮಾಹಿತಿ ಇದ್ದು, ಇದನ್ನು ನಿಗ್ರಹಿಸಲು ನಾವು ಸಕಲ ರೀತಿಯಲ್ಲೂ ಸಿದ್ಧರಿದ್ದೇವೆ" ಎಂದರು.

ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಲ್ಯಾಂಡ್‌ಲೈನ್‌ಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಿದೆ ಮತ್ತು ಕಳೆದ ಆರು ವಾರಗಳಿಂದ ಅವು ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಆಗಸ್ಟ್ 5 ರಂದು ಕೇಂದ್ರ ಸರ್ಕಾರವು ಕಣಿವೆಯಲ್ಲಿನ ಫೋನ್ ಸಂಪರ್ಕವನ್ನು ಸ್ಥಗಿತಗೊಳಿಸಿತು. ಕೇಂದ್ರವು ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು. ಅಕ್ಟೋಬರ್ 31 ರಿಂದ ಕೇಂದ್ರಾಡಳಿತ ಪ್ರದೇಶ(ಯುಟಿ)ಗಳು ಅಸ್ತಿತ್ವಕ್ಕೆ ಬರಲಿವೆ.

Read More