Home> India
Advertisement

Post Officeನಲ್ಲಿ ಎಲ್ಲಕ್ಕಿಂತ ಹೆಚ್ಚಿನ ಆದಾಯ ನೀಡುವ ಸ್ಕೀಮ್ ಇದು, ಕೇವಲ 5ವರ್ಷಗಳಲಿ 14 ಲಕ್ಷ ಆದಾಯ

ಅಂಚೆ ಕಚೇರಿ ವಿವಿಧ ರೀತಿಯ ವಿಶೇಷ ಯೋಜನೆಗಳನ್ನು ನಡೆಸುತ್ತದೆ. ಇದರಲ್ಲಿ ಎಲ್ಲಾ ವಯಸ್ಸಿನ ಜನರಿಗೆ ಯೋಜನೆಗಳನ್ನು ನೀವು ಕಾಣಬಹುದು.

Post Officeನಲ್ಲಿ ಎಲ್ಲಕ್ಕಿಂತ ಹೆಚ್ಚಿನ ಆದಾಯ ನೀಡುವ ಸ್ಕೀಮ್ ಇದು, ಕೇವಲ 5ವರ್ಷಗಳಲಿ 14 ಲಕ್ಷ ಆದಾಯ

ನವದೆಹಲಿ: Post Office Senior Citizen Savings Scheme (SCSS):ಅಂಚೆ ಕಚೇರಿ ವಿವಿಧ ರೀತಿಯ ವಿಶೇಷ ಯೋಜನೆಗಳನ್ನು ನಡೆಸುತ್ತದೆ. ಇದರಲ್ಲಿ ಎಲ್ಲಾ ವಯಸ್ಸಿನ ಜನರಿಗೆ ಯೋಜನೆಗಳನ್ನು ನೀವು ಕಾಣಬಹುದು. ಒಂದು ವೇಳೆ ನೀವೂ ಕೂಡ  ಕರೋನಾ ಬಿಕ್ಕಟ್ಟಿನ ಈ ಕಾಲದಲ್ಲಿ ಹಣ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದ ಕೆಲವೇ ವರ್ಷಗಳಲ್ಲಿ ನೀವು ಮಿಲಿಯನೇರ್ ಆಗಬಹುದು. ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ, ಹೂಡಿಕೆದಾರರಿಗೆ ಶೇ. 7.4 ರಷ್ಟು ಬಡ್ಡಿ ಸಿಗುತ್ತದೆ. ಕೇವಲ ಐದೇ ವರ್ಷಗಳಲ್ಲಿ ನೀವು 14 ಲಕ್ಷ ರೂ. ಹೇಗೆ ಸಂಪಾದಿಸಬಹುದು ಎಂಬುದನ್ನು ತಿಳಿಯಲು ಈ ವರದಿ ಓದಿ.

ಈ ಯೋಜನೆಯಲ್ಲಿ ಯಾರು ಖಾತೆ ತೆರೆಯಬಹುದು?

ಹಿರಿಯ ನಾಗರಿಕರ ಉಳಿತಾಯ ಯೋಜನೆಯ (Senior Citizen Savings Schem)ಅಡಿಯಲ್ಲಿ ಖಾತೆ ತೆರೆಯುವವರ  ವಯಸ್ಸು 60 ವರ್ಷಗಳಾಗಿರಬೇಕು. ಈ ಯೋಜನೆಯಡಿ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜನರು ಮಾತ್ರ ಖಾತೆ ತೆರೆಯಬಹುದು. ಇದಲ್ಲದೆ, VRS (ಸ್ವಯಂಪ್ರೇರಿತ ನಿವೃತ್ತಿ ಯೋಜನೆ) ತೆಗೆದುಕೊಂಡ ಜನರು ಈ ಯೋಜನೆಯಡಿ ಖಾತೆಯನ್ನು ತೆರೆಯಬಹುದು.

10 ಲಕ್ಷ ಹೂಡಿಕೆ ಮಾಡಿ 14 ಲಕ್ಷಕ್ಕೂ ಅಧಿಕ ಸಂಪಾದಿಸಿ
ಹಿರಿಯ ನಾಗರಿಕರ ಯೋಜನೆಯಲ್ಲಿ ನೀವು 10 ಲಕ್ಷ ರೂ.ಗಳವರೆಗಿನ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ, ಶೇಕಡಾ 7.4 ರಷ್ಟು (ಕಾಂಪೌಂಡಿಂಗ್) ಬಡ್ಡಿದರದಲ್ಲಿ, ಮುಕ್ತಾಯದ ಸಮಯದಲ್ಲಿ ಹೂಡಿಕೆದಾರರಿಗೆ ಒಟ್ಟು 14,28,964 ರೂ. ಅಂದರೆ 14 ಲಕ್ಷ ರೂ. ಗೂ ಅಧಿಕ ಸಿಗಲಿದೆ. ಈ ಯೋಜನೆಯಲ್ಲಿ ನಿಮಗೆ ಒಟ್ಟು 4,28, 964 ರೂ. ಬಡ್ಡಿ ಲಾಭ ಸಿಗಲಿದೆ.

ಈ ಖಾತೆ ತೆರೆಯಲು ಕನಿಷ್ಠ ಹೂಡಿಕೆ ಎಷ್ಟು?
ಈ ಯೋಜನೆಯ ಅಡಿ ಖಾತೆ ತೆರೆಯಲ್ಲೂ ಕನಿಷ್ಠ 1000 ರೂ. ಹೂಡಿಕೆ ಮಾಡಬೇಕು. ಇದಲ್ಲದೆ ಈ ಖಾತೆಯಲ್ಲಿ ನೀವು ಅತಿ ಹೆಚ್ಚು ಅಂದರೆ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಖಾತೆ ತೆರೆಯಲು ಒಂದು ಲಕ್ಷಕ್ಕಿಂತ ಕಡಿಮೆ ನೀಡುತ್ತಿದ್ದರೆ, ಅದನ್ನು ನೀವು ನಗದು ರೂಪದಲ್ಲಿ ಹಣವನ್ನು ಕೂಡ ಪಾವತಿಸಬಹುದು. ಒಂದು ಲಕ್ಷಕ್ಕಿಂತ ಹೆಚ್ಹಿನ ಹಣವನ್ನು ನೀಡಿ ನೀವು ಖಾತೆ ತೆರೆಯುತ್ತಿದ್ದರೆ ನೀವು ಚೆಕ್ ನೀಡಬೇಕು.

ಮ್ಯಾಚೂರಿಟಿ ಅವಧಿ ಎಷ್ಟು?
SCSS ಮ್ಯಾಚುರಿಟಿ ಅವಧಿ 5 ವರ್ಷಗಳದ್ದಾಗಿದೆ. ಆದರೆ, ಒಂದು ವೇಳೆ ಖಾತೆದಾರರು ಬಯಸಿದರೆ ಈ ಅವಧಿಯನ್ನು ಅವರು ವಿಸ್ತರಿಸಬಹುದು. ಇಂಡಿಯಾ ಪೋಸ್ಟ್ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಮ್ಯಾಚ್ಯುರಿಟಿ ಅವಧಿಯ ಬಳಿಕ ಓರ್ವ ಹೂಡಿಕೆದಾರ ತನ್ನ ಹೂಡಿಕೆಯ ಅವಧಿಯನ್ನು ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಿಸಬಹುದು. ಈ ಅವಧಿ ವಿಸ್ತರಿಸಲು ನೀವು ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಟ್ಯಾಕ್ಸ್ ಉಳಿತಾಯ
ತೆರಿಗೆಯ ಕುರಿತು ಮಾತನಾಡುವುದಾದರೆ SCSS ಅಡಿ ಒಂದು ವೇಳೆ ನಿಮ್ಮ ಬಡ್ಡಿಯ ಮೊತ್ತ ವಾರ್ಷಿಕವಾಗಿ 10,000ಕ್ಕಿಂತ ಹೆಚ್ಚಾದರೆ TDS ಪಾವತಿಸಬೇಕಾಗಲಿದೆ. ಆದರೆ ಆದಾಯ ತೆರಿಗೆ ಇಲಾಖೆ ಕಾಯ್ದೆಯ ಸೆಕ್ಷನ್ 80 ಸಿ ಅಡಿ ನೀವು ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ.

Read More