Home> India
Advertisement

ಲೋಕಸಭೆ ಡೆಪ್ಯುಟಿ ಸ್ಪೀಕರ್​ ಹುದ್ದೆ ನಮ್ಮ ಬೇಡಿಕೆಯಲ್ಲ, ಹಕ್ಕು ಎಂದು ಪ್ರತಿಪಾದಿಸಿದ ಶಿವಸೇನೆ

ನಾವು 18 ಸಂಸದರನ್ನು ಹೊಂದಿರುವ ಕಾರಣ ಲೋಕಸಭೆ ಡೆಪ್ಯುಟಿ ಸ್ಪೀಕರ್​ ಹುದ್ದೆಯನ್ನು ನಮಗೇ ನೀಡಬೇಕು- ಶಿವಸೇನೆ 

ಲೋಕಸಭೆ ಡೆಪ್ಯುಟಿ ಸ್ಪೀಕರ್​ ಹುದ್ದೆ ನಮ್ಮ ಬೇಡಿಕೆಯಲ್ಲ, ಹಕ್ಕು ಎಂದು ಪ್ರತಿಪಾದಿಸಿದ ಶಿವಸೇನೆ

ನವದೆಹಲಿ: ಲೋಕಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ಹುದ್ದೆಯನ್ನು ನಮ್ಮ ಪಕ್ಷಕ್ಕೆ ನೀಡಬೇಕು. ಅದು ನಮ್ಮ ಬೇಡಿಕೆಯಲ್ಲ, ನಮ್ಮ ಹಕ್ಕು ಎಂದು ಶಿವಸೇನೆಯ ಸಂಜಯ್ ರಾವತ್ ಗುರುವಾರ ಪ್ರತಿಪಾದಿಸಿದ್ದಾರೆ.

ಸಂಜಯ್ ರಾವತ್ ಅವರು ಝೀ ನ್ಯೂಸ್ ಜೊತೆಗೆ ಮಾತನಾಡುತ್ತಾ, ಶಿವಸೇನೆ 18 ಸಂಸದರನ್ನು ಹೊಂದಿದೆ. ಹಾಗಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ನಮ್ಮ ಪಕ್ಷಕ್ಕೆ ನೀಡಬೇಕು ಎಂಬುದು ಸ್ವಾಭಾವಿಕವಾಗಿದೆ. 

"ಯಾವುದೇ ರೀತಿಯ ಬೇಡಿಕೆ ಇಡುವ ಅಭ್ಯಾಸವನ್ನು ನಾವು ಹೊಂದಿಲ್ಲ. ಆದರೆ, ಇದು ನಮ್ಮ ಹಕ್ಕು. ಶಿವಸೇನೆ 18 ಎಂಪಿ ಗಳನ್ನು ಹೊಂದಿರುವುದರಿಂದ ಆ ಸ್ಥಾನವನ್ನು ನಮಗೆ ನೀಡಬೇಕು. ಒಂದು ವೇಳೆ ಆ ಸ್ಥಾನವನ್ನು ಬೇರಾವುದೇ ಪಕ್ಷಕ್ಕೆ ನೀಡಿದರೆ ಅದನ್ನು ಪ್ರೋತ್ಸಾಹಿಸಬಾರದು" ಎಂದು ಅವರು ಹೇಳಿದರು.
 

Read More