Home> India
Advertisement

PM POSHAN Scheme : 'ಶಾಲಾ ಮಕ್ಕಳ ಆರೋಗ್ಯ'ಕ್ಕಾಗಿ ಈ ಹೊಸ ಯೋಜನೆ : ಇದರಿಂದ ಬದಲಾಗಲಿದೆ ಮಧ್ಯಾಹ್ನದ ಊಟ

ಇಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅನುರಾಗ್ ಠಾಕೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಪ್ರಧಾನ ಮಂತ್ರಿ ಪೌಷ್ಟಿಕಾಂಶ ಯೋಜನೆಯನ್ನು ಆರಂಭಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದರು.

PM POSHAN Scheme : 'ಶಾಲಾ ಮಕ್ಕಳ ಆರೋಗ್ಯ'ಕ್ಕಾಗಿ ಈ ಹೊಸ ಯೋಜನೆ : ಇದರಿಂದ ಬದಲಾಗಲಿದೆ ಮಧ್ಯಾಹ್ನದ ಊಟ

ನವದೆಹಲಿ : ಇಂದು ಮಹತ್ವದ ಸಚಿವ ಸಂಪುಟ ಸಭೆ ಪಿಎಂ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆಯಿತು ಇದರಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇಂದಿನ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಅನುರಾಗ್ ಠಾಕೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಪ್ರಧಾನ ಮಂತ್ರಿ ಪೌಷ್ಟಿಕಾಂಶ ಯೋಜನೆಯನ್ನು ಆರಂಭಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದರು.

ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳು

ಗಮನಾರ್ಹವಾಗಿ, ಮಂಗಳವಾರ, ಪ್ರಧಾನಿ ಮೋದಿ(PM Modi) ಅಧ್ಯಕ್ಷತೆಯಲ್ಲಿ ಮಂತ್ರಿ ಮಂಡಲ ಸಭೆ ನಡೆಯಿತು. ಇದರಲ್ಲಿ ಹಲವು ಪ್ರಮುಖ ಅಂಶಗಳನ್ನು ಚರ್ಚಿಸಲಾಗಿದೆ. ಅಲ್ಲದೆ ಇಂದಿನ ಸಭೆಯಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇಂದು ಪ್ರಧಾನ ಮಂತ್ರಿ ಪೌಷ್ಟಿಕಾಂಶ ಯೋಜನೆಯನ್ನು ಆರಂಭಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದರು. ಈ ಯೋಜನೆಯಡಿ, 11.2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮಕ್ಕಳು ದಿನದ ಉಚಿತ ಊಟ ಪಡೆಯುತ್ತಾರೆ.

ಇದನ್ನೂ ಓದಿ : Suryoday Bank : ಬ್ಯಾಂಕ್ ಗ್ರಾಹಕರೇ ಗಮನಿಸಿ : ಅಕ್ಟೋಬರ್ 1 ರಿಂದ ದೇಶದಲ್ಲಿ ಬಂದ್ ಆಗಲಿದೆ ಈ ಬ್ಯಾಂಕ್ ATM  

ಹೊಸ ಯೋಜನೆಯಿಂದ ಬದಲಾಗಲಿದೆ ಮಧ್ಯಾಹ್ನದ ಊಟ

ಈ ಯೋಜನೆಯನ್ನು 5 ವರ್ಷಗಳವರೆಗೆ ನಡೆಸಲಾಗುವುದು. ಇದಕ್ಕಾಗಿ ಸರ್ಕಾರವು 1.31 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ನಿರ್ಧರಿಸಿದೆ. ಈ ಯೋಜನೆಯು ಪ್ರಸ್ತುತ ಮಧ್ಯಾಹ್ನದ ಊಟ ಯೋಜನೆ(Free mid-day Meal)ಯನ್ನು ಬದಲಿಸುತ್ತದೆ. ರಾಜ್ಯ ಸರ್ಕಾರಗಳ ನೆರವಿನಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ನಡೆಸುತ್ತದೆ. ಆದರೆ ಮುಖ್ಯವಾಗಿ ಎಲ್ಲಾ ಜವಾಬ್ದಾರಿ ಕೇಂದ್ರ ಸರ್ಕಾರದದ್ದಾಗಿರುತ್ತದೆ.

PM-POSHAN ಯೋಜನೆ ಪ್ರಾರಂಭ

ಕೇಂದ್ರ ಸರ್ಕಾರ ಪಿಎಂ-ಪೋಶನ್ ಯೋಜನೆ(PM POSHAN scheme)ಯನ್ನು ಆರಂಭಿಸಿದೆ. ಇದು ದೇಶಾದ್ಯಂತ 11.2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮಕ್ಕಳಿಗೆ ಅನುಕೂಲವಾಗಲಿದೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಈ ಯೋಜನೆ 5 ವರ್ಷಗಳವರೆಗೆ ನಡೆಯುತ್ತದೆ ಮತ್ತು ಇದರಲ್ಲಿ 1.31 ಲಕ್ಷ ಕೋಟಿ ರೂ. ಇದಲ್ಲದೇ, ಕೇಂದ್ರ ಕ್ಯಾಬಿನೆಟ್ ರಾಷ್ಟ್ರೀಯ ರಫ್ತು ವಿಮಾ ಖಾತೆ (NEIA) ಯೋಜನೆ ಮುಂದುವರಿಸಲು ಮತ್ತು 5 ವರ್ಷಗಳಲ್ಲಿ 1650 ಕೋಟಿ ರೂ. ಸಹಾಯಧನಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Amazon ನಲ್ಲಿ ಆಫರ್ ಗಳ ಸುರಿಮಳೆ, ಸ್ಯಾಮ್ ಸಂಗ್ ನ ಈ ಫೋನ್ ಮೇಲೆ ಸಿಗಲಿದೆ 30 ಸಾವಿರಕ್ಕಿಂತ ಅಧಿಕ ರಿಯಾಯಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More