Home> India
Advertisement

'ಫಿಟ್ ಇಂಡಿಯಾ ಮೂವ್ಮೆಂಟ್'ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

ದೂರದರ್ಶನದಲ್ಲಿ ಕಾರ್ಯಕ್ರಮದ ನೇರಪ್ರಸಾರ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಪ್ರಸಾರವಾಗಲಿದೆ.

'ಫಿಟ್ ಇಂಡಿಯಾ ಮೂವ್ಮೆಂಟ್'ಗೆ ಇಂದು  ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ: ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಗಳನ್ನು ನಾಗರಿಕರ ದೈನಂದಿನ ಜೀವನದ ಭಾಗವಾಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ‘ಖೇಲ್ ದಿವಸ್’ ಕುರಿತು ‘ಫಿಟ್ ಇಂಡಿಯಾ ಚಳವಳಿ’('ಫಿಟ್ ಇಂಡಿಯಾ ಮೂವ್ಮೆಂಟ್') ಪ್ರಾರಂಭಿಸಲಿದ್ದಾರೆ. ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈವೆಂಟ್ ಸಮಯದಲ್ಲಿ, ಪ್ರಧಾನಿ ಮೋದಿ ಜನರನ್ನುದ್ದೇಶಿಸಿ ಮಾತನಾಡಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಫಿಟ್ನೆಸ್ ಪ್ರತಿಜ್ಞೆಯನ್ನು ನೀಡಲಿದ್ದಾರೆ.

ದೂರದರ್ಶನದಲ್ಲಿ ಕಾರ್ಯಕ್ರಮದ ನೇರಪ್ರಸಾರ ಬೆಳಿಗ್ಗೆ 10 ರಿಂದ 11 ಗಂಟೆವರೆಗೆ ಪ್ರಸಾರವಾಗಲಿದೆ. ಫಿಟ್ ಇಂಡಿಯಾ ಮೂವ್ಮೆಂಟ್ ಭಾಗವಾಗಿ, ಆರೋಗ್ಯಕರ ಜೀವನವನ್ನು ನಡೆಸಲು ಸದೃಢವಾಗಿರುವುದರ ಪ್ರಯೋಜನಗಳ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿಯ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಅವರು ಇತ್ತೀಚಿಗೆ ‘ಫಿಟ್ ಇಂಡಿಯಾ ಮೂವ್‌ಮೆಂಟ್’ ನಲ್ಲಿ ಭಾಗವಹಿಸಲು ಜನರಲ್ಲಿ ಮನವಿ ಮಾಡಿದ್ದರು. "ಇದು ಮಹಿಳೆಯರು, ಮಕ್ಕಳು, ಯುವಕರು ಮತ್ತು ಹಿರಿಯರು ಎಲ್ಲರಿಗೂ ಆಸಕ್ತಿದಾಯಕ ಅಭಿಯಾನವಾಗಲಿದೆ" ಎಂದು ಪಿಎಂ ಮೋದಿ ಹೇಳಿದರು.

ಬುಧವಾರ, ಯುಜಿಸಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (ಎಚ್‌ಇಐ) ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯಲು ಪ್ರಯತ್ನಿಸಲು ಪ್ರೇರೇಪಿಸುವಂತೆ ಕೇಳಿಕೊಂಡಿತ್ತು ಮತ್ತು ಅದನ್ನು ದಿನಚರಿಯಲ್ಲಿ ಅನುಸರಿಸಿ ಎಂದು ಸೂಚಿಸಿತ್ತು.

ಬೋಧಕವರ್ಗ ಮತ್ತು ವಿದ್ಯಾರ್ಥಿಗಳಿಗೆ ಫಿಟ್ ಇಂಡಿಯಾ ಮೂವ್ಮೆಂಟ್ ಕಾರ್ಯಕ್ರಮ ಲಾಂಚ್ ಆಗುವುದನ್ನು ನೇರಪ್ರಸಾರ ಮಾಡುವಂತೆ ಆಯೋಗ ಸಂಸ್ಥೆಗಳಿಗೆ ನಿರ್ದೇಶನ ನೀಡಿತು.

ಯುಜಿಸಿ ಬಿಡುಗಡೆ ಮಾಡಿದ ಇತ್ತೀಚಿನ ಸುತ್ತೋಲೆಯ ಪ್ರಕಾರ ಫಿಟ್‌ನೆಸ್ ಯೋಜನೆಯನ್ನು ತಯಾರಿಸಲು ಮತ್ತು ಕಾರ್ಯಗತಗೊಳಿಸಲು, ಕ್ರೀಡೆ, ವ್ಯಾಯಾಮ, ದೈಹಿಕ ಚಟುವಟಿಕೆಗಳನ್ನು ಕ್ಯಾಂಪಸ್‌ನಲ್ಲಿ ದಿನಚರಿಯಲ್ಲಿ ಅಳವಡಿಸಲು ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ. ಅಲ್ಲದೆ, ಕ್ಯಾಂಪಸ್‌ನಲ್ಲಿ ನಡೆಯುವ ಚಟುವಟಿಕೆಗಳ ಕಿರು ವಿಡಿಯೋ ತುಣುಕುಗಳನ್ನು ಯುಜಿಸಿಗೆ ಕಳುಹಿಸುವಂತೆ ತಿಳಿಸಲಾಗಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತನ್ನ ಅಂಗಸಂಸ್ಥೆ ಶಾಲೆಗಳಿಗೆ ಫಿಟ್ ಇಂಡಿಯಾ ಚಳವಳಿಯ ಪ್ರಾರಂಭಡ ಕಾರ್ಯವನ್ನು ವೀಕ್ಷಿಸಲು / ಕೇಳಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದೆ.

ಉನ್ನತ ಕೈಗಾರಿಕೋದ್ಯಮಿಗಳು, ಕ್ರೀಡಾಪಟುಗಳು, ನಟರು ಮತ್ತು ಇತರ ಗಣ್ಯರು ಫಿಟ್ ಇಂಡಿಯಾ ಚಳವಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಫಿಟ್ ಇಂಡಿಯಾ ಚಳವಳಿಯನ್ನು ಕ್ರೀಡಾ ಸಚಿವಾಲಯ, ಮಾನವ ಸಂಪನ್ಮೂಲ ಸಚಿವಾಲಯ, ಪಂಚಾಯತಿ ರಾಜ್ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಸೇರಿದಂತೆ ಪರಸ್ಪರರ ಸಮನ್ವಯದೊಂದಿಗೆ 11 ಕ್ಕೂ ಹೆಚ್ಚು ಸಚಿವಾಲಯಗಳು ನಿರ್ವಹಿಸಲಿವೆ.

Read More