Home> India
Advertisement

ನೂತನ ಶಿಕ್ಷಣ ನೀತಿಗೆ PM Modi ಕ್ಯಾಬಿನೆಟ್ ಅನುಮೋದನೆ, ಬದಲಾಯ್ತು HRD ಸಚಿವಾಲಯದ ಹೆಸರು

ಈ ನೂತನ ಶಿಕ್ಷಣ ನೀತಿಗೆ ಅನುಮೋದನೆಯ ಬಳಿಕ, ಇದೀಗ ಇಡೀ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಕೇವಲ ಒಂದು ನಿಯಂತ್ರಕ ಸಂಸ್ಥೆ ಇರಲಿದೆ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿನ ಅವ್ಯವಸ್ಥೆಗಳನ್ನು ತೊಡೆದು ಹಾಕಬಹುದಾಗಿದೆ.

ನೂತನ ಶಿಕ್ಷಣ ನೀತಿಗೆ PM Modi ಕ್ಯಾಬಿನೆಟ್ ಅನುಮೋದನೆ, ಬದಲಾಯ್ತು HRD ಸಚಿವಾಲಯದ ಹೆಸರು

ನವದೆಹಲಿ: ದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು. ಈ ಸಭೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ಇಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (HRD) ಹೆಸರನ್ನು ಶಿಕ್ಷಣ ಸಚಿವಾಲಯ ಎಂದು ಬದಲಾಯಿಸಲಾಗಿದೆ. ಇದೇ ವೇಳೆ ಈ ಸಭೆಯಲ್ಲಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನೂತನ ಶಿಕ್ಷಣ ನೀತಿಗೂ ಕೂಡ ಅನುಮೋದನೆ ನೀಡಿದೆ. ಈ ಕುರಿತು ಸರ್ಕಾರದ ವತಿಯಿಂದ ಇಂದು ಸಂಜೆ ನಾಲ್ಕು ಗಂಟೆಗೆ ಕ್ಯಾಬಿನೆಟ್ ಬ್ರೀಫಿಂಗ್ ನಲ್ಲಿ ಮಾಹಿತಿ ನೀಡಲಾಗುವುದು ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ, ಸಚಿವಾಲಯದ ಈಗಿರುವ ಹೆಸರನ್ನು ಶಿಕ್ಷಣ ಸಚಿವಾಲಯ ಎಂದು ಬದಲಾಯಿಸಲು ಮನವಿ ಮಾಡಿತ್ತು. ಇನ್ನೊಂದೆಡೆಗೆ ನೂತನ ಶಿಕ್ಷಣ ನೀತಿಗೆ ಅನುಮೋದನೆ ಸಿಕ್ಕ ಬಳಿಕ ಇದೀಗ ಇಡೀ ಉನ್ನತ ಶಿಕ್ಷಣ ಕ್ಷೇತ್ರಕ್ಕಾಗಿ ಒಂದೇ ನಿಯಂತ್ರಕ ಮಂಡಳಿ ಇರಲಿ. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿನ ಅವ್ಯವವಸ್ಥೆ ತೊಡೆದುಹಾಕುವಲ್ಲಿ ನೆರವು ಸಿಗಲಿದೆ ಎನ್ನಲಾಗಿದೆ.

ಹೊಸ ಶಿಕ್ಷಣ ನೀತಿಯ ಅನುಸಾರ, ಮುಂಬರುವ ದಿನಗಳಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಅನುಪಾತ 1:30 ಇರಲಿದೆ. ನೂತನ ಶಿಕ್ಷಣ ನೀತಿಯಲ್ಲಿ ಕಥೆ, ರಂಗಮಂಚ, ಸಾಮೂಹಿಕ ಪಾಠ-ಪಠಣ, ಚಿತ್ರಗಳ ಡಿಸ್ಪ್ಲೇ, ಬರವಣಿಗೆಯ ಕೌಶಲ್ಯ, ಭಾಷೆ ಹಾಗೂ ಗಣಿತಗಳಂತಹ ವಿಷಯಗಳ ಮೇಲೆ ಒತ್ತು ನೀಡಲಾಗುತ್ತಿದೆ. ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೂತನ ಶಿಕ್ಷಣ ನೀತಿಯ ಘೋಷಣೆ ಮಾಡಿದ್ದರು. ಈ ನೂತನ ಶಿಕ್ಷಣ ನೀತಿಯಿಂದ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೂತನ ರೂಪುರೇಷೆ ನೀಡಲಾಗುತ್ತಿದೆ. ಈ ನೀತಿಯಿಂದ ಯುವಕರಲ್ಲಿ ಶಿಕ್ಷಣದ ಹೊಸ ಅವಸರಗಳು ನಿರ್ಮಾಣಗೊಳ್ಳಲಿದ್ದು, ಉದ್ಯೋಗಾವಕಾಶಕ್ಕೆ ಕೂಡ ಒಟ್ಟು ಸಿಗಲಿದೆ.

ಟಾಪ್ 100 ವಿವಿಗಳಲ್ಲಿ ಆನ್ಲೈನ್ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ
ನೂತನ ಶಿಕ್ಷಣ ನೀತಿಯ ಘೋಷಣೆ ಮಾಡಿರುವ ಸರ್ಕಾರ, ಶಿಕ್ಷಣ ಕ್ಷೇತ್ರದಲ್ಲಿ ಎಕ್ಸ್ಟರ್ನಲ್ ಕಮರ್ಷಿಯಲ್ ಬಾರೋವಿಂಗ್ ಹಾಗೂ ವಿದೇಶಿ ಬಂಡವಾಳ ಹೂಡಿಕೆಗಾಗಿ ಆತ್ಯಾವಶ್ಯಕ ಹೆಜ್ಜೆಗಳನ್ನು ಇಡಲಾಗುವುದು ಎನ್ನಲಾಗಿದೆ.  

ಯುವ ಎಂಜಿನಿಯರ್‌ಗಳಿಗೆ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುವ ಉದ್ದೇಶದಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ. ಇದರೊಂದಿಗೆ ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಪ್ರಸ್ತಾವನೆಯನ್ನು ತರಲಾಗುತ್ತಿದೆ. ಇದೇ ವೇಳೆ ದೇಶದ ಟಾಪ್ 100 ವಿಶ್ವವಿದ್ಯಾಲಯಗಳಲ್ಲಿ ಸಂಪೂರ್ಣ ಆನ್‌ಲೈನ್ ಶಿಕ್ಷಣ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ.

ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒಟ್ಟು ನೀಡಲಾಗುತ್ತಿದೆ
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್, "ಭಾರತದ ನೂತನ ಶಿಕ್ಷಣ ನೀತಿ ಜಾರಿಗೆ ಬರುತ್ತಿದ್ದು, ಹಲವು ಸಂಗತಿಗಳನ್ನು ಅದು ಒಳಗೊಂಡಿರಲಿದೆ. ನೂತನ ಶಿಕ್ಷಣ ನೀತಿಯ ಅಡಿಯಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಹಿನ ಒತ್ತು ನೀಡುವ ಕುರಿತು ಹೇಳಲಾಗಿದೆ. ಅಷ್ಟೇ ಅಲ್ಲ ಯುವಕರು ಉನ್ನತ ಶಿಕ್ಷಣ ಪಡೆಯುವುದು ಈ ಮೊದಲಿಗಿಂತಲೂ ಸುಲಭವಾಗಲಿದೆ" ಎಂದು ಹೇಳಿದ್ದಾರೆ.

Read More