Home> India
Advertisement

PM Cares: ಮಕ್ಕಳಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ, ಯುವಕರಿಗೆ 4 ಸಾವಿರ ರೂ. ಸ್ಟೈಪೆಂಡ್, ಪ್ರಧಾನಿ ಮೋದಿ ಘೋಷಣೆ

PM Cares For Children - ಯಾವುದೇ ಮಗುವಿನ ಚಿಕಿತ್ಸೆಯ ಕುರಿತು ಚಿಂತಿಸುವ ಅವಶ್ಯಕತೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಮಾಧ್ಯಮದ ಮೂಲಕ ಆಯುಷ್ಯಮಾನ್ ಹೆಲ್ತ್ ಕಾರ್ಡ್ ಕೂಡ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 
 

PM Cares: ಮಕ್ಕಳಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ, ಯುವಕರಿಗೆ 4 ಸಾವಿರ ರೂ. ಸ್ಟೈಪೆಂಡ್, ಪ್ರಧಾನಿ ಮೋದಿ ಘೋಷಣೆ

PM Narendra Modi Announcement - ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಅಡಿ ಸಿಗುವ ಸೌಕರ್ಯಗಳ ಕುರಿತು ಘೋಷಣೆ ಮಾಡಿದ್ದಾರೆ. ಈ ಯೋಜನೆಯ ಅಡಿ ಮಕ್ಕಳಿಗೆ 5 ಲಕ್ಷ ರೂ.ಗಳವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದಿದ್ದಾರೆ. ಇದಕ್ಕಾಗಿ ಆಯುಷ್ಯಮಾನ್ ಹೆಲ್ತ್ ಕಾರ್ಡ್ ಅನ್ನು ಕೂಡ ಜಾರಿಗೊಳಿಸಲಾಗುತ್ತಿದೆ ಎಂದೂ ಕೂಡ ಅವರು ಹೇಳಿದ್ದಾರೆ. ಇಲ್ಲಿ ವಿಶೇಷತೆ ಎಂದರೆ ಕೇಂದ್ರ ಸರ್ಕಾರ ವೃತ್ತಿಪರ ಕೋರ್ಸ್ ಗಳಿಗಾಗಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ಪಿಎಂ ಕೇರ್ಸ್ ಮೂಲಕ ಸಾಲ ನೀಡುವ ವ್ಯವಸ್ಥೆಯನ್ನು ಕೂಡ ಮಾಡಿದೆ. 

ಕೊರೊನಾ ಕಾರಣ ತನ್ನ ಆಪ್ತರನ್ನು ಕಳೆದುಕೊಂಡ ಮಕ್ಕಳನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, 'ಕೊರೊನಾ ಕಾರಣ ನೀವು ನಿಮ್ಮ ಆಪ್ತರನ್ನು ಅಗಲಿರುವ ಬಗ್ಗೆ ನಮಗೆ ತಿಳಿದಿದೆ. ನಿಮ್ಮ ಜೀವನದಲ್ಲಿ ಬಂದ ಈ ಬದಲಾವಣೆ ಎಷ್ಟೊಂದು ಕಠಿಣವಾಗಿದೆ ಎಂಬುದು ನಮಗೆ ಗೊತ್ತಿದೆ. ಇಂತಹ ಸವಾಲುಗಳ ಪರಿಸ್ಥಿತಿಯಲ್ಲಿ ಮತ್ತು ಕೊರೋನಾದಿಂದ ಪ್ರಭಾವಕ್ಕೆ ಒಳಗಾಗಿರುವ ಮಕ್ಕಳಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಪಿಎಂ ಕೆಯರ್ಸ್ ಫಾರ್ ಚಿಲ್ಡ್ರನ್ ಒಂದು ಸಣ್ಣ ಪ್ರಯತ್ನವಾಗಿದೆ' ಎಂದು ಹೇಳಿದ್ದಾರೆ.

ಯಾವುದೇ ಮಗು ಚಿಕಿತ್ಸೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಮೂಲಕ ನಿಮಗೆ ಆಯುಷ್ಮಾನ್ ಹೆಲ್ತ್ ಕಾರ್ಡ್ ಅನ್ನು ಸಹ ನೀಡಲಾಗುತ್ತಿದ್ದು, ಈ ಉಚಿತ ಸೌಲಭ್ಯದಿಂದ 5 ಲಕ್ಷದವರೆಗಿನ ಚಿಕಿತ್ಸಾ ಸೌಲಭ್ಯವು ನಿಮ್ಮೆಲ್ಲರಿಗೂ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಧನಸಹಾಯ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ವೃತ್ತಿಪರ ಕೋರ್ಸ್‌ಗಳಿಗೆ, ಉನ್ನತ ಶಿಕ್ಷಣಕ್ಕಾಗಿ ಯಾರಿಗಾದರೂ ಶಿಕ್ಷಣ ಸಾಲದ ಅಗತ್ಯವಿದ್ದರೆ, ಅದಕ್ಕೂ ಪಿಎಂ ಕೇರ್ಸ್ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ದಿನನಿತ್ಯದ ಇತರ ಅಗತ್ಯಗಳಿಗಾಗಿ, ಇತರ ಯೋಜನೆಗಳ ಮೂಲಕ ಅವರಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿಗಳ ಸ್ಟೈಪೆಂಡ್ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಮಕ್ಕಳು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದಾಗ ಭವಿಷ್ಯದ ಕನಸುಗಳಿಗೆ ಹೆಚ್ಚಿನ ಹಣದ ಅಗತ್ಯವಿರುತ್ತದೆ. ಇದಕ್ಕಾಗಿ, 18-23 ವರ್ಷ ವಯಸ್ಸಿನ ಯುವಕರು ಪ್ರತಿ ತಿಂಗಳು ಸ್ಟೈಫಂಡ್ ಪಡೆಯಲಿದ್ದಾರೆ ಮತ್ತು ಅವರು 23 ವರ್ಷ ವಯಸ್ಸಿನವರಾದಾಗ ಅವರಿಗೆ ಒಟ್ಟಿಗೆ 10 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

ಇದನ್ನೂ ಓದಿ-Driving License ಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ! ಸರ್ಕಾರದ ನೂತನ ಮಾರ್ಗಸೂಚಿಗಳು ಇಲ್ಲಿವೆ

ಪ್ರಧಾನಮಂತ್ರಿ ಕಾರ್ಯಾಲಯದ ಪ್ರಕಾರ, 'COVID-19 ಸಾಂಕ್ರಾಮಿಕ ರೋಗದಿಂದಾಗಿ 11 ಮಾರ್ಚ್ 2020 ರಿಂದ 28 ಫೆಬ್ರವರಿ 2022 ರ ಅವಧಿಯಲ್ಲಿ ತನ್ನ ಪೋಷಕರು ಅಥವಾ ಕಾನೂನು ಪಾಲಕರು ಅಥವಾ ದತ್ತು ಪಡೆದ ಪೋಷಕರು ಅಥವಾ ಉಳಿದಿರುವ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ನೆರವು ಒದಗಿಸುವ ನಿಟ್ಟಿನಲ್ಲಿ  29 ಮೇ 2021 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಪ್ರಾರಂಭಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ-Aadhar Card New Rules: ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಅಡ್ವೈಸರಿ ಜಾರಿಗೊಳಿಸಿದ ಸರ್ಕಾರ, ಈಗಲೇ ತಿಳಿದುಕೊಳ್ಳಿ

ಮಕ್ಕಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುವುದು, ಶಿಕ್ಷಣ ಮತ್ತು ವಿದ್ಯಾರ್ಥಿವೇತನದ ಮೂಲಕ ಅವರನ್ನು ಸಬಲೀಕರಣಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆ. 23 ವರ್ಷ ತುಂಬಿದ ಬಳಿಕ ಇಂತಹ ಮಕ್ಕಳ ಸ್ವಾವಲಂಬಿ ಅಸ್ತಿತ್ವಕ್ಕಾಗಿ  ರೂ.10 ಲಕ್ಷದ ನೆರವು ಒದಗಿಸಿ ಅವರನ್ನು ಸಜ್ಜುಗೊಳಿಸುವುದು ಮೂಲಕ ಮತ್ತು ಆರೋಗ್ಯ ವಿಮೆಯ ಮೂಲಕ ಅವರ ಕಲ್ಯಾಣವನ್ನು ಖಾತ್ರಿಪಡಿಸುವುದು ಹಾಗೂ ಅವರ ಸಮಗ್ರ ಆರೈಕೆ ಮತ್ತು ರಕ್ಷಣೆ ಖಚಿತಪಡಿಸುವುದು ಇದರ ಉದ್ದೇಶವಾಗಿದೆ ಎನ್ನಲಾಗಿದೆ.  

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More