Home> India
Advertisement

ನೋಟಾಗೆ ಅಧಿಕ ಮತ ಬಂದರೆ ಮರು ಚುನಾವಣೆ ನಡೆಸಿ-ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

ಚುನಾವಣೆಯಲ್ಲಿ ನೋಟಾಗೆ ಅಧಿಕ ಮತಗಳು ಬಂದಲ್ಲಿ ಅಂತಹ ಕ್ಷೇತ್ರಗಳಲ್ಲಿ ಹೊಸದಾಗಿ ಚುನಾವಣೆ ನಡೆಸಲು ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.ಈಗ ಈ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.

ನೋಟಾಗೆ ಅಧಿಕ ಮತ ಬಂದರೆ ಮರು ಚುನಾವಣೆ ನಡೆಸಿ-ಸುಪ್ರೀಂನಲ್ಲಿ ಪಿಐಎಲ್ ಸಲ್ಲಿಕೆ

ನವದೆಹಲಿ: ಚುನಾವಣೆಯಲ್ಲಿ ನೋಟಾಗೆ ಅಧಿಕ ಮತಗಳು ಬಂದಲ್ಲಿ ಅಂತಹ ಕ್ಷೇತ್ರಗಳಲ್ಲಿ ಹೊಸದಾಗಿ ಚುನಾವಣೆ ನಡೆಸಲು ಕೋರಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.ಈಗ ಈ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಸುಪ್ರೀಂಕೋರ್ಟ್ (Supreme Court) ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಅರ್ಜಿ ವಿಚಾರವಾಗಿ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಕೇಂದ್ರ ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.ಉಪಾಧ್ಯಾಯ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವೇ ಅವರು ನೋಟಾ ಮತಗಳು ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಗಿಂತ ಅಧಿಕ ಬಂದರೆ ಮತ್ತೆ ಹೊಸದಾಗಿ ಚುನಾವಣೆಯನ್ನು ನಡೆಸಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ- ಒಮ್ಮತದ ಲೈಂಗಿಕ ಸಂಬಂಧ ಅತ್ಯಾಚಾರವಾಗುತ್ತದೆಯೇ? ಸುಪ್ರಿಂಕೋರ್ಟ್ ಪ್ರಶ್ನೆ

ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೂ ಒಳಗೊಂಡ ನ್ಯಾಯಪೀಠ ಆರಂಭದಲ್ಲಿ ಈ ಮನವಿಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕಿತು. “ಸಮಸ್ಯೆಯೆಂದರೆ ಮತದಾರರ ಮೇಲೆ ಸಾಕಷ್ಟು ಪ್ರಭಾವ ಬೀರುವ ರಾಜಕೀಯ ಪಕ್ಷವು ಅನೇಕ ಅಭ್ಯರ್ಥಿಗಳನ್ನು ತಿರಸ್ಕರಿಸಿದರೆ, ಸಂಸತ್ತನ್ನು ಸರಿಯಾಗಿ ರಚಿಸಲಾಗುವುದಿಲ್ಲ. ಅನೇಕ ಅಭ್ಯರ್ಥಿಗಳನ್ನು ತಿರಸ್ಕರಿಸಿದರೆ, ಆ ಕ್ಷೇತ್ರಗಳು ಪ್ರತಿನಿಧಿಸದೆ ಹೋಗುತ್ತವೆ. ಆಗ ನೀವು ಸರಿಯಾದ ಸಂಸತ್ತನ್ನು ಹೇಗೆ ರಚಿಸುವಿರಿ? ಎಂದು ಅದು ಮನೇಕಾ ಅವರನ್ನು ಕೇಳಿತು.

ಇದಕ್ಕೆ ಉತ್ತರಿಸಿದ ಅವರು ಗರಿಷ್ಠ ನೋಟಾ ಮತಗಳನ್ನು ಪಡೆದ ಸ್ಥಳದಲ್ಲಿ ಹೊಸ ಮತದಾನ ನಡೆಸಬಹುದೆಂದು ಚುನಾವಣಾ ಆಯೋಗ ಸಹ ಶಿಫಾರಸುಗಳನ್ನು ಮಾಡಿದೆ. 99% ಮತಗಳನ್ನು ನೋಟಾ ಪರವಾಗಿ ಮತ ಚಲಾಯಿಸಿದರೂ, ಕೇವಲ ಒಂದು ಮತ ಪಡೆದ ಅಭ್ಯರ್ಥಿಯನ್ನು ಚುನಾಯಿತರೆಂದು ಘೋಷಿಸಬಹುದು, ಇದರಿಂದಾಗಿ ಚುನಾವಣೆಯ ಫಲಿತಾಂಶಗಳಲ್ಲಿ ನೋಟಾ ಯಾವುದೇ ನೈಜ ಪರಿಣಾಮಗಳನ್ನು ಹೊಂದಿರುವುದಿಲ್ಲ ಎಂದು ಗುರುಸ್ವಾಮಿ ಹೇಳಿದರು.

'ತಿರಸ್ಕರಿಸುವ ಹಕ್ಕು ರಾಜಕೀಯ ಪಕ್ಷಗಳನ್ನು ಅಭ್ಯರ್ಥಿಗಳನ್ನು ಹಾಕುವಲ್ಲಿ ಹೆಚ್ಚು ಜಾಗರೂಕರಾಗಿರಲು ಪ್ರೇರೇಪಿಸುತ್ತದೆ ಮತ್ತು ಸ್ವಚ್ಚವಾದ ದಾಖಲೆಗಳನ್ನು ಹೊಂದಿರುವವರಿಗೆ ಮಣೆ ಹಾಕಲು ಪ್ರೇರೇಪಿಸುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ-'Your Honour' ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ವೊಚ್ಛ ನ್ಯಾಯಾಲಯ 

ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಮತ್ತು ಒಂದು ಕ್ಷೇತ್ರದಲ್ಲಿ ನೋಟಾ ಗರಿಷ್ಠ ಮತಗಳನ್ನು ಪಡೆದರೆ ಹೊಸ ಮತದಾನ ನಡೆಸಲು 324 ನೇ ಪರಿಚ್ಚೆದದ ಅಡಿಯಲ್ಲಿ ಚುನಾವಣಾ ಆಯೋಗವು ತನ್ನ ಸಮಗ್ರ ಅಧಿಕಾರವನ್ನು ಬಳಸಬೇಕೆಂದು ಉಪಾಧ್ಯಾಯ ಪಿಐಎಲ್ ನಿರ್ದೇಶನಗಳನ್ನು ಕೋರಿದೆ. ಈ ಹಿಂದೆ ಅಮಾನ್ಯ ಚುನಾವಣೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳನ್ನು ಹೊಸ ಮತದಾನಕ್ಕೆ ಸ್ಪರ್ಧಿಸದಂತೆ ನಿರ್ಬಂಧಿಸಲು ಅದು ಪ್ರಯತ್ನಿಸಿತು.

ಪರ್ಯಾಯವಾಗಿ, ಚುನಾವಣೆಯಲ್ಲಿನ ಪರಿಣಾಮಗಳನ್ನು ತಿರಸ್ಕರಿಸುವ ಹಕ್ಕನ್ನು ಮತದಾರರಿಗೆ ನೀಡುವ ಸಲುವಾಗಿ ಕಾನೂನಿನಲ್ಲಿ ಸೂಕ್ತವಾದ ತಿದ್ದುಪಡಿಗಳನ್ನು ಒಳಗೊಂಡಂತೆ ಸೂಕ್ತ ಕ್ರಮಗಳನ್ನು ತರಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಉಪಾಧ್ಯಾಯ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Read More