Home> India
Advertisement

Google Play Storeನಿಂದ ಮಾಯವಾದ ಕೆಲವೇ ಗಂಟೆಗಳಲ್ಲಿ ಮತ್ತೆ ಪ್ಲಾಟ್ ಫಾರ್ಮ್ ಗೆ ಮರಳಿದೆ Paytm

ಇದೀಗ ಮತ್ತೆ ಸ್ಮಾರ್ಟ್ ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಿಂದ Paytm ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Google Play Storeನಿಂದ ಮಾಯವಾದ ಕೆಲವೇ ಗಂಟೆಗಳಲ್ಲಿ ಮತ್ತೆ ಪ್ಲಾಟ್ ಫಾರ್ಮ್ ಗೆ ಮರಳಿದೆ Paytm

ನವದೆಹಲಿ: ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂ (Paytm),ಗೂಗಲ್ ಪ್ಲೇ ಸ್ಟೋರ್‌ಗೆ ಮತ್ತೆ ಮರಳಿದೆ. ಗೂಗಲ್‌ ಕೈಗೊಂಡ ಕ್ರಮದ ಕೆಲವೇ ಗಂಟೆಗಳಲ್ಲಿ, ಪೇಟಿಎಂ ಅಪ್ಲಿಕೇಶನ್ ಮತ್ತೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಿದೆ. ಅಂದರೆ, ಬಳಕೆದಾರರು ಮತ್ತೊಮ್ಮೆ Paytm ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ. ಕಂಪನಿಯು ಟ್ವೀಟ್ ಮಾಡುವ ಮೂಲಕ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.

ಗೂಗಲ್ ಪ್ಲೇ ಸ್ಟೋರ್ ನಿಂದ ಮಾಯವಾಗಲು ಕಾರಣ 
ಇದಕ್ಕೂ ಮೊದಲು ಸೆಪ್ಟೆಂಬರ್ 18 ರಂದು ಆಟಗಳಲ್ಲಿ ಬೆಟ್ಟಿಂಗ್ ಅನ್ನು ಉತ್ತೇಜನ ನೀಡುವ ಆಪ್ ಗಳಅನುಮತಿಸಲಾಗುವುದಿಲ್ಲ ಹಾಗೂ ಇದು ಗೂಗಲ್ ನ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದ ಗೂಗಲ್, ತನ್ನ ಪ್ಲೇ ಸ್ಟೋರ್ ನಿಂದ ಪೇಟಿಎಂ ಆಪ್ ಅನ್ನು ತೆಗೆದು ಹಾಕಿತ್ತು. ಇದಾದ ಬಳಿಕ ಪ್ರತಿಕ್ರಿಯೆ ನೀಡಿದ್ದ paytm ಆಡಳಿತ ಮಂಡಳಿ ಶೀಘ್ರವೆ ಮತ್ತೆ ಪ್ಲಾಟ್ಫಾರ್ಮ್ ಗೆ ಮರಳುವುದಾಗಿ ಹೇಳಿಕೆ ನೀಡಿತ್ತು.  ಭಾರತದಲ್ಲಿ ಐಪಿಎಲ್ ನಂತಹ ಪ್ರಮುಖ ಕ್ರೀಡಾಕೂಟ ಆರಂಭಕ್ಕೂ ಮುನ್ನವೇ ಇಂತಹ ಆಪ್ ಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗುತ್ತಿದೆ. ಈ ಬಾರಿಯ ಐಪಿಎಲ್ ಆವೃತ್ತಿ ಕೂಡ ಸೆಪ್ಟೆಂಬರ್ 19, 2020 ಕ್ಕೆಆರಂಭವಾಗುತ್ತಿರುವುದು ಇಲ್ಲಿ ಉಲ್ಲೇಖನೀಯ. 

Also Read- ಶೀಘ್ರದಲ್ಲೇ ಬರಲಿದೆಯಂತೆ Google ಸ್ಮಾರ್ಟ್ ಡೆಬಿಟ್ ಕಾರ್ಡ್

paytm ಅನ್ನು ತನ್ನ ಪ್ಲಾಟ್ ಫಾರ್ಮ್ ನಿಂದ ತೆಗೆದು ಹಾಕಿದ ಕುರಿತು ತನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದ ಗೂಗಲ್, ತನ್ನ ನೀತಿಗಳು ಬಳಕೆದಾರರನ್ನು ಸಂಭಾವ್ಯ ಹಾನಿಯಿಂದ ರಕ್ಷಿಸಲಿವೆ ಎಂದು ಹೇಳಿತ್ತು. 

Also Read- ರೂ.1 ಲಕ್ಷದವರೆಗಿನ ಸಾಮಾನು ಖರೀದಿಸಿ ನಂತರ ಹಣ ಪಾವತಿಸಿ, EMIಗೂ ಅವಕಾಶ ಕಲ್ಪಿಸಿದ Paytm

Read More