Home> India
Advertisement

ತನ್ನ Playstore ನಿಂದ Paytmಗೆ ಕೊಕ್ ನೀಡಿದ Google... ಕಾರಣ ಇಲ್ಲಿದೆ

ಡಿಜಿಟಲ್ ಹಣ ಪಾವತಿ ಮತ್ತು ಹಣಕಾಸು ಸೇವಾ ಅಪ್ಲಿಕೇಶನ್ Paytm ಅನ್ನು ಗೂಗಲ್ (Google) ತನ್ನ ಪ್ಲೇ (Google Playstore)ಸ್ಟೋರ್ ನಿಂದ ತೆಗೆದುಹಾಕಿದೆ. Paytm ಮೇಲೆ ಕೈಗೊಂಡ ಕ್ರಮಕ್ಕೆ Google ಕಾರಣ ಕೂಡ ಹೇಳಿದೆ.

ತನ್ನ Playstore ನಿಂದ Paytmಗೆ ಕೊಕ್ ನೀಡಿದ Google... ಕಾರಣ ಇಲ್ಲಿದೆ

ನವದೆಹಲಿ: ಡಿಜಿಟಲ್ ಹಣ ಪಾವತಿ ಮತ್ತು ಹಣಕಾಸು ಸೇವಾ ಅಪ್ಲಿಕೇಶನ್ ಪೇಟಿಎಂ (Paytm) ಅನ್ನು ಗೂಗಲ್ (Google) ತನ್ನ ಪ್ಲೇಸ್ಟೋರ್ (Google Playstore) ನಿಂದ ತೆಗೆದುಹಾಕಿದೆ. Paytm ಮೇಲೆ ಕೈಗೊಂಡ ಕ್ರಮಕ್ಕೆ Google ಕಾರಣ ಕೂಡ ಹೇಳಿದೆ. ಪೇಟಿಎಂ ಗೂಗಲ್ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ಆರೋಪಿಸಿದೆ, "ನಾವು ಯಾವುದೇ ಗ್ಯಾಂಬಲಿಂಗ್ ನಡೆಸುವ , ಆನ್‌ಲೈನ್ ನಗದು ಆಟಗಳನ್ನು ಬೆಂಬಲಿಸುವ  ಅಪ್ಲಿಕೇಶನ್ ಅನ್ನು ಬೆಂಬಲಿಸುವುದಿಲ್ಲ" ಎಂದು ಗೂಗಲ್ ಹೇಳಿಕೊಂಡಿದೆ.

ಗೂಗಲ್‌ನಲ್ಲಿ ಜೂಜಾಟಕ್ಕೆ ಸಂಬಂಧಿಸಿದ  ನೀತಿಗಳ ಉಲ್ಲಂಘನೆಯಿಂದಾಗಿ ಈ ಕ್ರಮವನ್ನು Paytm ನಲ್ಲಿ ಕೈಗೊಳ್ಳಲಾಗಿದೆ. ಹಣವನ್ನು ತೆಗೆದುಕೊಳ್ಳುವ ಮೂಲಕ ಕ್ರೀಡೆಗಳಲ್ಲಿ ಹಣ ಅಥವಾ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ನೀಡುವ ಬಾಹ್ಯ ವೆಬ್‌ಸೈಟ್‌ಗೆ ಭೇಟಿ ನೀಡಲು ಗ್ರಾಹಕರನ್ನು ಪ್ರೋತ್ಸಾಹಿಸುವ ಅಪ್ಲಿಕೇಶನ್‌ಗಳು ಇದರಲ್ಲಿ ಸೇರಿವೆ. ಇದು ಗೂಗಲ್ ನ ನೀತಿಗಳ ಉಲ್ಲಂಘನೆಯಾಗಿದೆ.

Also Read- ಶೀಘ್ರದಲ್ಲೇ ಬರಲಿದೆಯಂತೆ Google ಸ್ಮಾರ್ಟ್ ಡೆಬಿಟ್ ಕಾರ್ಡ್

ಪೆಟಿಎಂ 'PayTM First Games'ಮೂಲಕ ಹಣ ಗೆಲ್ಲುವ ಆಮೀಷ ನೀಡುತ್ತದೆ. ಹೀಗಾಗಿ ಇನ್ಮುಂದೆ ನಿಮಗೆ  ಗೂಗಲ್ ಪ್ಲೇ ಸ್ಟೋರ್ ನಲ್ಲಿ Paytm ಕಾಣಸಿಗುವುದಿಲ್ಲ. ಆದರೆ, ಗೂಗಲ್ ನಲ್ಲಿ Paytm for business, Paytm Mall, Paytm Money ಗಳಂತಹ ಆಪ್ ಗಳು ಮಾತ್ರ ಇರಲಿವೆ.

Also Read- Google Play Store ನಲ್ಲಿನ ಅಪಾಯಕಾರಿ App, ಒಂದು ತಪ್ಪಿನಿಂದ ಖಾಲಿಯಾಗುತ್ತೆ ಖಾತೆ

ಆಟಗಳಲ್ಲಿ ಬೆಟ್ಟಿಂಗ್ ಅನ್ನು ಉತ್ತೇಜನ ನೀಡುವ ಅಪ್ಲಿಕೇಶನ್‌ಗಳನ್ನು ಅನುಮತಿಸಲಾಗುವುದಿಲ್ಲ ಹಾಗೂ ಅಂತಹ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗುವುದು ಎಂದು ಗೂಗಲ್ ಶುಕ್ರವಾರ (ಸೆಪ್ಟೆಂಬರ್ 18) ಹೇಳಿದೆ. ಭಾರತದಲ್ಲಿ ಐಪಿಎಲ್ ನಂತಹ ಪ್ರಮುಖ ಕ್ರೀಡಾಕೂಟಗಳ ಮೊದಲು, ಅಂತಹ ಅಪ್ಲಿಕೇಶನ್ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭಿಸಲಾಗುತ್ತದೆ.. ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಇತ್ತೀಚಿನ ಆವೃತ್ತಿ ಕೂಡ ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ಪ್ರಾರಂಭವಾಗಲಿದೆ ಎಂಬುದು ಇಲ್ಲಿ ಉಲ್ಲಖನೀಯ.

Also Read- ರೂ.1 ಲಕ್ಷದವರೆಗಿನ ಸಾಮಾನು ಖರೀದಿಸಿ ನಂತರ ಹಣ ಪಾವತಿಸಿ, EMIಗೂ ಅವಕಾಶ ಕಲ್ಪಿಸಿದ Paytm

ತನ್ನ ನೀತಿಗಳು ಬಳಕೆದಾರರನ್ನು ಸಂಭಾವ್ಯ ಹಾನಿಯಿಂದ ರಕ್ಷಿಸಲಿವೆ ಎಂದು ಬ್ಲಾಗ್ ಪೋಸ್ಟ್ ನಲ್ಲಿ ಗೂಗಲ್ ಹೇಳಿಕೊಂಡಿದೆ. ಆದರೆ, ಈ ಆಧಾರದ ಮೇಲೆ ಅಪ್ಲಿಕೇಶನ್ ಅನ್ನು ತೆಗೆದುಹಾಕಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಗೂಗಲ್ ಸ್ಪಷ್ಟಪಡಿಸಿಲ್ಲ. ಅಪ್ಲಿಕೇಶನ್ ಈ ನೀತಿಗಳನ್ನು ಉಲ್ಲಂಘಿಸಿದಾಗ, ಅದರ ಡೆವಲಪರ್‌ಗೆ ಇದನ್ನು ತಿಳಿಸಲಾಗುತ್ತದೆ ಮತ್ತು ಡೆವಲಪರ್ ಅಪ್ಲಿಕೇಶನ್‌ ಅನ್ನು ನಿಯಮಗಳಿಗೆ ಅನುಸಾರವಾಗಿ ಮಾಡುವವರೆಗೆ ಅದನ್ನು Google Play Store ನಿಂದ ತೆಗೆದು ಹಾಕಲಾಗುತ್ತದೆ.

ಪ್ರಸ್ತುತ ಗೂಗಲ್ ಕೈಗೊಂಡ ಈ ಕ್ರಮದ ಕುರಿತು ಪ್ರತಿಕ್ರಿಯೆ ನೀಡಿರುವ paytm ಆಡಳಿತ ಮಂಡಳಿ. ಶೀಘ್ರದಲ್ಲಿಯ ಗೂಗಲ್ ಪ್ಲೇ ಸ್ಟೋರ್ ಪ್ಲಾಟ್ ಫಾರಂಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದೆ.

Read More