Home> India
Advertisement

ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ : ಆರೋಪಿಗಳು ಮೊದಲು ಭೇಟಿಯಾಗಿದ್ದೇ ಮೈಸೂರಿನಲ್ಲಿ ! ಮೈಸೂರ್ ಟು ದೆಹಲಿ ಹೀಗಿದೆ ಕಹಾನಿ

Parliament Security Breach Chronology: ಸಂಸತ್ ಭವನದಲ್ಲಿ ಗದ್ದಲ ಸೃಷ್ಟಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ  ಮುಂದುವರೆದಿದೆ.

ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ : ಆರೋಪಿಗಳು ಮೊದಲು ಭೇಟಿಯಾಗಿದ್ದೇ ಮೈಸೂರಿನಲ್ಲಿ ! ಮೈಸೂರ್ ಟು ದೆಹಲಿ ಹೀಗಿದೆ ಕಹಾನಿ

Parliament Security Breach Chronology : ಸಂಸತ್ ಭವನದಲ್ಲಿ ಗದ್ದಲ ಸೃಷ್ಟಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ  ಮುಂದುವರೆದಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎಲ್ಲಾ ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಂದರೆ ಘಟನೆಯನ್ನು ಭಯೋತ್ಪಾದನಾ ಕೃತ್ಯದ ಸಂಚಿನ ದೃಷ್ಟಿ ಕೋನದಿಂದ ತನಿಖೆ ನಡೆಸಲಾಗುವುದು. ಈ ಮಧ್ಯೆ, ಸಂಸತ್ತಿನ ಭದ್ರತೆಯ ಲೋಪ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳ ಸಂಸದರು ಒತ್ತಾಯಿಸಿದ್ದಾರೆ. ಅಲ್ಲದೆ ಇಂದು I.N.D.I.A ನಾಯಕರು ರಾಷ್ಟ್ರಪತಿಯನ್ನು ಭೇಟಿ ಮಾಡಬಹುದು. 

ಸಂಸತ್ತಿನಲ್ಲಿ ಭದ್ರತೆ  ಉಲ್ಲಂಘನೆ : 

ಪ್ರಕರಣದ ಎಲ್ಲಾ ಆರೋಪಿಗಳಿಗೂ ಪರಸ್ಪರ ಪರಿಚಯವಿತ್ತು. ಅವರು 'ಭಗತ್ ಸಿಂಗ್ ಅಭಿಮಾನಿಗಳ ಸಂಘ' ದೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇವರೆಲ್ಲ ಒಂದೂವರೆ ವರ್ಷಗಳ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿದ್ದರು. ಇವರ ಎರಡನೇ ಮೀಟಿಂಗ್ ಕೆಲವು ತಿಂಗಳ ಹಿಂದೆ ನಡೆದಿದೆ. ನಾಲ್ವರೂ ಸೇರಿ ಈ ಯೋಜನೆ ಸಿದ್ಧಪಡಿಸಿದ್ದರು. ನಂತರ ಜುಲೈನಲ್ಲಿ ಆರೋಪಿಗಳ ಪೈಕಿ ಒಬ್ಬನಾದ ಸಾಗರ್ ಲಕ್ನೋಗೆ ಬಂದಿದ್ದ. ಎಲ್ಲರೂ ಡಿಸೆಂಬರ್ 10 ರಂದು ದೆಹಲಿ ತಲುಪಿದ್ದಾರೆ. ಇವರೆಲ್ಲರೂ  ಗುರುಗ್ರಾಮ್‌ನಲ್ಲಿರುವ ಆರೋಪಿ ವಿಕ್ಕಿ ಮನೆಯಲ್ಲಿ ತಂಗಿದ್ದರು. ಇದಾದ ನಂತರ ಮತ್ತೊಬ್ಬ ಆರೋಪಿ ಲಲಿತ್ ಝಾ ಗುರುಗ್ರಾಮ ತಲುಪಿದ್ದಾನೆ.  ಅಮೋಲ್ ಎಂಬಾತ ಮಹಾರಾಷ್ಟ್ರದಿಂದ ಕಲರ್ ಕ್ರ್ಯಾಕರ್ಸ್ ತಂದಿದ್ದ. ಇಂಡಿಯಾ ಗೇಟ್‌ನಲ್ಲಿ ಎಲ್ಲರೂ ಒಟ್ಟಿಗೆ ಭೇಟಿಯಾಗಿ, ಪರಸ್ಪರ ಬಣ್ಣದ ಪಟಾಕಿಗಳನ್ನು ಹಂಚಿಕೊಂಡಿದ್ದಾರೆ. ನಂತರ ಮಧ್ಯಾಹ್ನ 12 ಗಂಟೆಗೆ ಸಂಸತ್ ಭವನ ಪ್ರವೇಶಿಸಿದ್ದಾರೆ. ಲಲಿತ್ ಎನ್ನುವಾತ ಹೊರಗಿನಿಂದ ವಿಡಿಯೋ ಮಾಡುತ್ತಿದ್ದ. ಗಲಾಟೆಯ ನಂತರ ಲಲಿತ್ ಫೋನ್ ನೊಂದಿಗೆ  ಪರಾರಿಯಾಗಿದ್ದಾನೆ. ಇವರೆಲ್ಲರೂ ಪರಸ್ಪರರ ಸಂವಹನಕ್ಕಾಗಿ ಸಿಗ್ನಲ್ ಅಪ್ಲಿಕೇಶನ್ ಅನ್ನು ಬಳಸಿದ್ದಾರೆ.

ಇದನ್ನೂ ಓದಿ : ಪಿಂಚಣಿದಾರರೇ ಗಮನಿಸಿ ! ಇನ್ನು ಇದೇ ಬ್ಯಾಂಕ್ ಖಾತೆಗೆ ಬರುವುದು ನಿಮ್ಮ ಪೆನ್ಶನ್

ದೇಶದ ಸುರಕ್ಷಿತ ಕಟ್ಟಡವನ್ನು ತಲುಪಿದ್ದು ಹೇಗೆ ? : 
140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ 4 ಜನ ದೇಶದ ಅತ್ಯಂತ ಸುಭದ್ರ ಕಟ್ಟಡದ ಒಳಗೆ ಮತ್ತು ಹೊರಗೆ ಗಲಾಟೆ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ಅತ್ಯಂತ ಹೆಚ್ಚು ಭದ್ರತೆ ಹೊಂದಿರುವ ಸಂಸತ್ ಭವನಕ್ಕೆ ಬಹಳ ಸುಲಭವಾಗಿ ನುಗ್ಗಿ, ಕ್ರ್ಯಾಕರ್ ಮೂಲಕ ಹೊಗೆ ಬಿಡಲಾಗಿದೆ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದುವರೆಗೆ ನಡೆದಿರದ ಆಘಾತಕಾರಿ ಮತ್ತು ಆತಂಕಕಾರಿ ಘಟನೆಯಾಗಿದೆ. ಸುಮಾರು 28 ನಿಮಿಷಗಳ ಕಾಲ,  ಈ ಆರೋಪಿಗಳು ಸಂಸತ್ತಿನ ಒಳಗೆ ಮತ್ತು ಹೊರಗೆ ಗದ್ದಲವನ್ನು ಸೃಷ್ಟಿಸಿದ್ದಾರೆ. ಮಧ್ಯಾಹ್ನ 12.30ರ ನಂತರ ಇಡೀ ನಾಟಕ ಆರಂಭವಾಗಿದ್ದು, ನೀಲಂ ಎಂಬ ಮಹಿಳೆ ಮತ್ತು ಅಮೋಲ್ ಶಿಂಧೆ ಎಂಬ ಯುವಕ ಸಂಸತ್ ಭವನದ ಆವರಣದಲ್ಲಿ ಹೊಗೆ ಪಟಾಕಿಗಳಿಂದ ಹೊಗೆ ಊದುತ್ತಾ ಘೋಷಣೆಗಳನ್ನು ಕೂಗಲಾರಂಭಿಸಿದರು.

ಇದು ಯೋಜಿತ ಪಿತೂರಿ : 
ಆದರೆ, ಅಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಇಬ್ಬರನ್ನೂ ಹಿಡಿದಿದ್ದಾರೆ. ನಂತರವೂ ಇವರ ಘೋಷಣೆ ಮುಂದುವರೆದಿದೆ. ಮಾಧ್ಯಮದ ಕ್ಯಾಮರಾಗಳನ್ನು ನೋಡಿದ ಕೂಡಲೇ ನೀಲಂ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಲು ಆರಂಭಿಸಿದ್ದಾರೆ.  ಎಲ್ಲಾ ಘಟನೆಗಳನ್ನು ನಿಧಾನವಾಗಿ ಗಮನಿಸಿದಾಗ ನಿನ್ನೆ ಸಂಸತ್ತಿನ ಹೊರಗೆ ಮತ್ತು ಒಳಗೆ ನಡೆದ ಘಟನೆ ಆಕಸ್ಮಿಕವಲ್ಲ ಇದು ಯೋಜಿತ ಪಿತೂರಿ ಎನ್ನುವುದು ಅಲ್ಲಿದ್ದವರಿಗೆ ಅರ್ಥವಾಗಿದೆ. ಸಂಸತ್ತಿನ ಟಿವಿ ಕ್ಯಾಮೆರಾಗಳಲ್ಲಿ ಇಬ್ಬರು ಜನರು ಮೇಜಿನ ಮೇಲೆ ಜಿಗಿಯುವುಡು ಕಂಡು ಬಂದಿದೆ. ಅವರಲ್ಲಿ ಒಬ್ಬ ತಮ್ಮ ಶೂನಿಂದ ಹೊಗೆ ಕ್ರ್ಯಾಕರ್ ಅನ್ನು ತೆಗೆದುಕೊಂಡು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದಾನೆ.  

ಇದನ್ನೂ ಓದಿ :  ಹಳೆಯ ಪಿಂಚಣಿ ಯೋಜನೆ ಬಗ್ಗೆ ಹೊಸ ಅಪ್ಡೇಟ್ ! ಕೇಂದ್ರ ಸರ್ಕಾರ ನೀಡಿದ ಮಾಹಿತಿ ಇದು !

ನಡೆಯುತ್ತಿದೆ ಕೂಲಂಕುಷ ತನಿಖೆ : 
ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ದೆಹಲಿ ಪೊಲೀಸರು ಸಂಸತ್ ಭವನದಲ್ಲಿ ಕೋಲಾಹಲಕ್ಕೆ ಸಂಬಂಧಿಸಿದಂತೆ ಯುಎಪಿಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಭಯೋತ್ಪಾದಕ ಕೋನದಿಂದ ತನಿಖೆ ನಡೆಸಲಾಗುವುದು. ದೆಹಲಿ ಪೊಲೀಸ್ ವಿಶೇಷ ಸೆಲ್ ಈ ಬಗ್ಗೆ ತನಿಖೆ ನಡೆಸಲಿದೆ. ದೆಹಲಿ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ಘಟಕವು ಘಟನೆಯ ತನಿಖೆಯಲ್ಲಿ ನಿರತವಾಗಿದೆ. ಎಲ್ಲಾ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಿರಂತರ ದಾಳಿ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Read More