Home> India
Advertisement

ಅಟಾರಿ ಗಡಿ ಮೂಲಕ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಹತ್ಯೆಗೈದ ಬಿಎಸ್ಎಫ್

ಬಿಎಸ್ಎಫ್ ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಬಳಿ ಇದ್ದ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಸಲ್ವಾರ್-ಕಮೀಜ್, 160 ರೂಪಾಯಿ ಪಾಕ್ ಕರೆನ್ಸಿ (50-50ರ ಮೂರು ನೋಟುಗಳು ಮತ್ತು 5-5 ರೂಪಾಯಿಗಳ ಎರಡು ನಾಣ್ಯಗಳು ಸೇರಿದಂತೆ), ಒಂದು ಪರ್ಸ್, ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ಒಂದು ಲೈಟರ್ ಮತ್ತು 1 ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದೆ.

ಅಟಾರಿ ಗಡಿ ಮೂಲಕ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಹತ್ಯೆಗೈದ ಬಿಎಸ್ಎಫ್

ಅಮೃತಸರ: ಇಂಡೋ-ಪಾಕ್ ಬಾರ್ಡರ್ ಅಟಾರಿ ಅಂತರಾಷ್ಟ್ರೀಯ ರೈಲ್ವೆ ಗೇಟ್‌ನ ಫೆನ್ಸಿಂಗ್‌ನ ಭಾರತದ ಭೂಪ್ರದೇಶದಲ್ಲಿ ಬಿಪಿ (ಗೇಟ್ ಸಂಖ್ಯೆ 103) ಬಳಿ ಒಳನುಗ್ಗಲು ಯತ್ನಿಸಿದ ಪಾಕಿಸ್ತಾನದ ವ್ಯಕ್ತಿಯನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಬುಧವಾರ ಸಂಜೆ ಕೊಂದಿದ್ದಾರೆ. ಈ ಪಾಕಿಸ್ತಾನಿ ನಾಗರಿಕನನ್ನು ಗುಲೆನ್ವಾಜ್ ಎಂದು ಗುರುತಿಸಲಾಗಿದೆ. ಪಾಕ್ ರೇಂಜರ್ಸ್‌ನೊಂದಿಗೆ ಧ್ವಜ ಸಭೆ ನಡೆಸಿದ ನಂತರ ಬಿಎಸ್‌ಎಫ್ ಅಧಿಕಾರಿಗಳು ತಕ್ಷಣ ಈ ಬಗ್ಗೆ ಮಾಹಿತಿ ನೀಡಿದರು ಮತ್ತು ಗುರುತಿಸಲು ಕೇಳಿಕೊಂಡರು, ಆದರೆ ಪಾಕ್ ರೇಂಜರ್ಸ್ ಶವವನ್ನು ತೆಗೆದುಕೊಳ್ಳಲು ನಿರಾಕರಿಸಿದರು ಎನ್ನಲಾಗಿದೆ.

ಜಂಟಿ ಚೆಕ್ ಪೋಸ್ಟ್ ಅಟ್ಟಿಕ್‌ನಲ್ಲಿ ನಿಯೋಜಿಸಲಾದ ಬಿಎಸ್‌ಎಫ್ ಸಿಬ್ಬಂದಿ ಸಂಜೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಸೈನಿಕರಿಗೆ ಪಾಕಿಸ್ತಾನದಿಂದ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿರುವ ವ್ಯಕ್ತಿಯನ್ನು ನೋಡಿದ್ದಾರೆ. ಆತನಿಗೆ ಹಿಂತಿರುಗುವಂತೆ ಬಿಎಸ್ಎಫ್ ಯೋಧರು ಎಚ್ಚರಿಸಿದರಾದರೂ, ಆತ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಒಳಬರುತ್ತಿದ್ದ. ಹೀಗಾಗಿ ಆತನ ಮೇಲೆ ಗುಂಡು ಹಾರಿಸಲಾಯಿತು ಎನ್ನಲಾಗಿದೆ. ಗುಂಡೇಟಿನಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಆತ ತಕ್ಷಣವೇ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ. 

ಬಿಎಸ್ಎಫ್ ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಬಳಿ ಇದ್ದ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಸಲ್ವಾರ್-ಕಮೀಜ್, 160 ರೂಪಾಯಿ ಪಾಕ್ ಕರೆನ್ಸಿ (50-50ರ ಮೂರು ನೋಟುಗಳು ಮತ್ತು 5-5 ರೂಪಾಯಿಗಳ ಎರಡು ನಾಣ್ಯಗಳು ಸೇರಿದಂತೆ), ಒಂದು ಪರ್ಸ್, ಸಿಮ್ ಕಾರ್ಡ್, ಮೆಮೊರಿ ಕಾರ್ಡ್, ಒಂದು ಲೈಟರ್ ಮತ್ತು 1 ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದೆ.

ಘಟನೆ ಬಳಿಕ ಬಿಎಸ್ಎಫ್ ಡಿಐಜಿ ಜೆಎಸ್ ಒಬೆರಾಯ್ ಮತ್ತು ಇತರ ಅಧಿಕಾರಿಗಳು ಭಾರತೀಯ ಪ್ರದೇಶದಾದ್ಯಂತ ಫೆನ್ಸಿಂಗ್ ತಲುಪಿ ತೀವ್ರ ಶೋಧ ನಡೆಸಿದ್ದಾರೆ. ಬಿಎಸ್ಎಫ್ ಫೆನ್ಸಿಂಗ್ ಕ್ರಾಸಿಂಗ್ ರೈಲ್ವೆ ಗೇಟ್ ಮತ್ತು ಅದರ ಸುತ್ತಲಿನ ಜಾಗಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದೆ.
 
Read More