Home> India
Advertisement

ಭಯೋತ್ಪಾದನೆಗೆ ಬೆಂಬಲ ನಿಲ್ಲಿಸದಿದ್ದರೆ ಪಾಕ್ ಛಿದ್ರವಾಗಲಿದೆ: ರಾಜನಾಥ್ ಸಿಂಗ್ ಎಚ್ಚರಿಕೆ

ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಂಗ್, ಭಾರತ ಮಾಡಿದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಇಸ್ಲಾಮಾಬಾದ್ ಎಂದಿಗೂ ಸಹಿಸುವುದಿಲ್ಲ. 370 ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಪಾಕಿಸ್ತಾನಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಭಯೋತ್ಪಾದನೆಗೆ ಬೆಂಬಲ ನಿಲ್ಲಿಸದಿದ್ದರೆ ಪಾಕ್ ಛಿದ್ರವಾಗಲಿದೆ: ರಾಜನಾಥ್ ಸಿಂಗ್ ಎಚ್ಚರಿಕೆ

ಸೂರತ್: ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಯೋತ್ಪಾದಕರಿಗೆ ಸುರಕ್ಷತೆ ಮತ್ತು ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ ಹಾವು ಭಾಗಗಳಾಗಿ ಒಡೆದು ಛಿದ್ರವಾಗಲಿದೆ ಎಂದು ಹೇಳಿದ್ದಾರೆ.

ಸೂರತ್‌ನಲ್ಲಿರುವ ಭಾರತೀಯ ವೀರ್ ಜವಾನ್ ಟ್ರಸ್ಟ್‌ನ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ರಾಜನಾಥ್, "1971ರಲ್ಲಿ ಧರ್ಮದ ಆಧಾರದ ಮೇಲೆ ರೂಪುಗೊಂಡ ಪಾಕಿಸ್ತಾನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಪಾಕಿಸ್ತಾನದಲ್ಲಿ ಧರ್ಮ ಆಧರಿಸಿದ ರಾಜಕೀಯ ಮುಂದುವರಿದರೆ, ಅದನ್ನು ಹಲವಾರು ಭಾಗಗಳಾಗಿ ವಿಂಗಡಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಪಾಕಿಸ್ತಾನ ಭಯೋತ್ಪಾದನೆ ಬೆಂಬಲಿಸುವುದನ್ನು ನಿಲ್ಲಿಸದಿದ್ದರೆ ಭವಿಷ್ಯದಲ್ಲಿ ಇದು ಹಲವಾರು ಭಾಗಗಳಾಗಿ ಛಿದ್ರವಾಗಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ದೃಢ ನಿಲುವನ್ನು ಪುನರುಚ್ಚರಿಸಿದ ರಾಜನಾಥ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ವಿಷಯದ ಬಗ್ಗೆ ನವದೆಹಲಿ ಈಗ ಇಸ್ಲಾಮಾಬಾದ್ ಜೊತೆ ಮಾತನಾಡಲಿದೆ ಎಂದರು. "ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ಬಗ್ಗೆ ಮಾತ್ರ ಆಗಿರುತ್ತದೆ" ಎಂದು ಅವರು ಹೇಳಿದರು.

ಮಾನವೀಯತೆ ಮತ್ತು ನ್ಯಾಯದ ಬಗ್ಗೆ ಭಾರತದ ದೃಢವಾದ ನಂಬಿಕೆಯ ಬಗ್ಗೆ ಮಾತನಾಡಿದ ಅವರು, "ವಿಭಜನೆಯ ಸಮಯದಲ್ಲಿ ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಗಿದೆ ಎಂದು ನಾನು ಪಾಕಿಸ್ತಾನಕ್ಕೆ ಹೇಳಲು ಬಯಸುತ್ತೇನೆ. ಹೀಗಾಗಿಯೇ ಪಾಕಿಸ್ತಾನಕ್ಕೆ ತನ್ನದೇ ಸಿದ್ಧಾಂತ ಮತ್ತು ಧರ್ಮದ ರಾಜಕೀಯ ನಡೆಸಲು ಸಾಧ್ಯವಾಯಿತು. ಆದರೆ, ಭಾರತವು ಜಾತಿ ಮತ್ತು ಧರ್ಮದ ರಾಜಕೀಯವನ್ನು ನಂಬುವುದಿಲ್ಲ. ಅದು ಮಾನವೀಯತೆ ಮತ್ತು ನ್ಯಾಯವನ್ನು ನಂಬುತ್ತದೆ" ಎಂದು ರಾಜನಾಥ್ ಹೇಳಿದರು.

ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿಂಗ್, ಭಾರತ ಮಾಡಿದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಇಸ್ಲಾಮಾಬಾದ್ ಎಂದಿಗೂ ಸಹಿಸುವುದಿಲ್ಲ. "370 ನೇ ವಿಧಿಯನ್ನು ರದ್ದುಪಡಿಸಿರುವುದನ್ನು ಪಾಕಿಸ್ತಾನಕ್ಕೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತನ್ನ ರಾಷ್ಟ್ರದಲ್ಲೇ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ವಿಫಲವಾಗಿರುವ ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗದ ಬಗ್ಗೆ ಮಾತನಾಡುತ್ತಿದೆ" ಎಂದು ಟೀಕಿಸಿದರು.

"ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ. ಇದು ಬಲೂಚ್ ಜನರು, ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರ ವಿರುದ್ಧ ಶೋಷಣೆ ನಡೆಯುತ್ತಿದೆ. ಅಂತರರಾಷ್ಟ್ರೀಯ ಸಂಘಟನೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಮೂಲಕ ಪಾಕಿಸ್ತಾನವು ಭಾರತವನ್ನು ದೂಷಿಸಲು ಪ್ರಯತ್ನಿಸುತ್ತಿದೆ. ಆದರೆ ಪಾಕಿಸ್ತಾನದ ಆರೋಪಗಳನ್ನು ಯಾರೂ ಒಪ್ಪುವುದಿಲ್ಲ" ಎಂದು ರಾಜನಾಥ್ ಸಿಂಗ್ ತಿಳಿಸಿದರು.

Read More