Home> India
Advertisement

ಗುರುನಾನಕ್‌ರ 550ನೇ ಜಯಂತಿ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಪಾಕ್

ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆ ನೆನಪಿಗಾಗಿ ಪಾಕಿಸ್ತಾನ ಸರ್ಕಾರ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದೆ. 

ಗುರುನಾನಕ್‌ರ 550ನೇ ಜಯಂತಿ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಪಾಕ್

ನವದೆಹಲಿ: ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ 550ನೇ ಜನ್ಮದಿನಾಚರಣೆ ನೆನಪಿಗಾಗಿ ಪಾಕಿಸ್ತಾನ ಸರ್ಕಾರ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದೆ. 

ಪಾಕಿಸ್ತಾನದ 50 ರೂ. ಮೌಲ್ಯದ ಈ ನಾಣ್ಯವನ್ನು ಕರ್ತಾರ್‌ಪುರ್ ಸಾಹಿಬ್‌ನಲ್ಲಿ ಪಡೆಯಬಹುದು. ಇದೇ ವೇಳೆ ಯಾತ್ರಾರ್ಥಿಗಳಿಗೆ ಪಿಕೆಆರ್ 8 ಮೌಲ್ಯದ ಅಂಚೆ ಚೀಟಿಗಳನ್ನು ಸಹ ನೀಡಲಾಗುವುದು ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಏತನ್ಮಧ್ಯೆ, ಪಾಕಿಸ್ತಾನದ ಕರ್ತಾರ್‌ಪುರ ಕಾರಿಡಾರ್ ಮೂಲಕ ಗುರುದ್ವಾರ ಕರ್ತಾರ್‌ಪುರ್ ಸಾಹಿಬ್‌ಗೆ ಉದ್ಘಾಟನಾ 'ಜಾಥಾ'ದಲ್ಲಿ ಭಾಗವಹಿಸಲು ತೆರಳುತ್ತಿರುವ 575 ಯಾತ್ರಾರ್ಥಿಗಳ ಪಟ್ಟಿಯನ್ನು ಭಾರತ ಮಂಗಳವಾರ ರಿಲೀಸ್ ಮಾಡಿದೆ. ಭಾರತದಿಂದ ಮೊದಲ ಯಾತ್ರಾರ್ಥಿಗಳ ತಂಡವು ನವೆಂಬರ್ 9ರಂದು ನೆರೆಯ ದೇಶಕ್ಕೆ ತೆರಳುವ ನಿರೀಕ್ಷೆಯಿದೆ.

Read More