Home> India
Advertisement

Jammu-Kashmir: ಕಾಶ್ಮೀರದಲ್ಲಿ ಮುಂದುವರೆದ ಆಪರೇಷನ್ ಆಲ್ ಔಟ್, 36 ಗಂಟೆಗಳಲ್ಲಿ 7 ಉಗ್ರರ ಹತ್ಯೆ

Jammu-Kashmir: ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಧನಸಹಾಯ ಸ್ಥಗಿತಗೊಂಡಿದೆ. ಎಲ್ಲಾ ದೊಡ್ಡ ಪ್ರತ್ಯೇಕತಾವಾದಿ ನಾಯಕರು ಜೈಲಿನಲ್ಲಿದ್ದಾರೆ. ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ವೇಗವಾಗಿ ನಿರ್ಮೂಲನೆ ಮಾಡುತ್ತಿವೆ. 

Jammu-Kashmir: ಕಾಶ್ಮೀರದಲ್ಲಿ ಮುಂದುವರೆದ ಆಪರೇಷನ್ ಆಲ್ ಔಟ್, 36 ಗಂಟೆಗಳಲ್ಲಿ 7 ಉಗ್ರರ ಹತ್ಯೆ

ಕುಲ್ಗಾಮ್: ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ಭಯೋತ್ಪಾದಕರ ಎನ್‌ಕೌಂಟರ್‌ (Encounter With Terrorists) ನಡೆಯುತ್ತಿದೆ. ಭದ್ರತಾ ಪಡೆಗಳು 2-3 ಭಯೋತ್ಪಾದಕರನ್ನು ಸುತ್ತುವರೆದಿದ್ದು, ಎರಡೂ ಕಡೆಯಿಂದ ಗುಂಡಿನ ದಾಳಿ ಮುಂದುವರೆದಿದೆ. 

ಕಾಶ್ಮೀರದಲ್ಲಿ ಮುಂದುವರೆದ ಆಪರೇಷನ್ ಆಲ್ ಔಟ್ :

ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯ ಕಾರ್ಯಾಚರಣೆ ಆಪರೇಷನ್ ಆಲ್ ಔಟ್ ನಡೆಯುತ್ತಿದೆ. ಸುಂದರ್‌ಬಾನಿಯಲ್ಲಿ ಸೇನಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಮುಖಾಮುಖಿಯಾಗಿದ್ದು, ಇದರಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಕಣಿವೆ ರಾಜ್ಯದಲ್ಲಿ ಕಳೆದ 36 ಗಂಟೆಗಳಲ್ಲಿ 7 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದ್ದು ಈ ಸಂದರ್ಭದಲ್ಲಿ ಇಬ್ಬರು ಸೈನಿಕರೂ ಹುತಾತ್ಮರಾಗಿದ್ದಾರೆ. 

ಭಯೋತ್ಪಾದಕರಿಂದ ಮದ್ದುಗುಂಡು ಚೇತರಿಸಿಕೊಳ್ಳಲಾಗಿದೆ:
ಮಾಹಿತಿಯ ಪ್ರಕಾರ, ರಾಜೌರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಯೋತ್ಪಾದಕರ ಉಪಸ್ಥಿತಿ ಬಗ್ಗೆ ಮಾಹಿತಿ ಪಡೆದ ಬಳಿಕ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಏತನ್ಮಧ್ಯೆ, ಭದ್ರತಾ ಪಡೆಗಳು (Security Forces) ಭಯೋತ್ಪಾದಕರನ್ನು ಸುತ್ತುವರೆದಿವೆ. ಇದರ ಬೆನ್ನಲ್ಲೇ ಭಯೋತ್ಪಾದಕರು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಲು ಪ್ರಾರಂಭಿಸಿದ್ದು ಗ್ರೆನೇಡ್ ಎಸೆದಿದ್ದಾರೆ. ಭದ್ರತಾ ಪಡೆಗಳೂ ಪ್ರತೀಕಾರ ತೀರಿಸಿಕೊಂಡಿದ್ದು, ಇದರಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕರಿಂದ ಅಪಾರ ಪ್ರಮಾಣದ ಮದ್ದುಗುಂಡು ಮತ್ತು 2 ಎಕೆ -47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-  J&K: ಶ್ರೀನಗರದಲ್ಲಿ ಉನ್ನತ ಲಷ್ಕರ್ ಕಮಾಂಡರ್ ಸೇರಿದಂತೆ ಇಬ್ಬರು ಉಗ್ರರ ಹತ್ಯೆ

ಪುಲ್ವಾಮಾ ಮತ್ತು ಕುಲ್ಗಾಮ್ನಲ್ಲಿ 5 ಭಯೋತ್ಪಾದಕರ ಹತ್ಯೆ:
ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir), ಭಯೋತ್ಪಾದಕರ ನಿರ್ಮೂಲನೆಗಾಗಿ ಸೇನೆಯು ಆಪರೇಷನ್ ಆಲ್ ಔಟ್ ಅನ್ನು ಪ್ರಾರಂಭಿಸಿದೆ. ಈ ಹಿಂದೆ ಪುಲ್ವಾಮಾ ಮತ್ತು ಕುಲ್ಗಂನಲ್ಲಿಯೂ ಭದ್ರತಾ ಪಡೆಗಳು 5 ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

ಅಷ್ಟೇ ಅಲ್ಲ, ಪುಲ್ವಾಮಾದ ಪೂಚಲ್ ಗ್ರಾಮದಲ್ಲಿ 2 ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ ಎಂದೂ ಕೂಡ ವರದಿಯಾಗಿದೆ. ಅದರ ನಂತರ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದವು. ಭದ್ರತಾ ಪಡೆಗಳು ಭಯೋತ್ಪಾದಕರನ್ನು ಶರಣಾಗುವಂತೆ ಕೇಳಿಕೊಂಡವು. ಆದರೆ ಅವರು ಗುಂಡು ಹಾರಿಸಲಾರಂಭಿಸಿದರು. ನಂತರ ಪ್ರತೀಕಾರದ ಕ್ರಮದಲ್ಲಿ ಇಬ್ಬರೂ ಭಯೋತ್ಪಾದಕರು ಕೊಲ್ಲಲ್ಪಟ್ಟರು. ಇವರಿಬ್ಬರೂ ಲಷ್ಕರ್-ಎ-ತೈಬಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಎನ್‌ಕೌಂಟರ್‌ನಲ್ಲಿ ಮತ್ತೊಬ್ಬ ಭಯೋತ್ಪಾದಕ ಮೆಹ್ರಾಜುದ್ದೀನ್ ಕೂಡ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ-  J&K: ದಕ್ಷಿಣ ಕಾಶ್ಮೀರದಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರ ಹತ್ಯೆ

ಕುಲ್ಗಂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರು ದಾಳಿ ನಡೆಸಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನಲೆಯಲ್ಲಿ ಭದ್ರತಾ ಪಡೆಯ ತಂಡ ಮತ್ತು ಕುಲ್ಗಂ ಪೊಲೀಸರು ಒಟ್ಟಿಗೆ ಕಾರ್ಯಾಚರಣೆ ನಡೆಸಿ ಭಯೋತ್ಪಾಕರನ್ನು ಹೊಡೆದುರುಳಿಸಿದ್ದಾರೆ. ಈ ಇಬ್ಬರೂ ಸ್ಥಳೀಯರಾಗಿದ್ದು ಎಲ್‌ಇಟಿ (LET) ಜೊತೆಗೆ ಸಂಪರ್ಕ ಹೊಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಭಯೋತ್ಪಾದಕರು ಏಕೆ ಭಯಭೀತರಾಗಿದ್ದಾರೆ?
ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ಪುನಃಸ್ಥಾಪನೆ ಅಸಾಧ್ಯ. ಇದಲ್ಲದೆ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಧನಸಹಾಯ ಸ್ಥಗಿತಗೊಂಡಿದೆ. ಎಲ್ಲಾ ದೊಡ್ಡ ಪ್ರತ್ಯೇಕತಾವಾದಿ ನಾಯಕರು ಜೈಲಿನಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಶೀಘ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಇದಲ್ಲದೆ ಕಾಶ್ಮೀರದಲ್ಲಿ ಭಯೋತ್ಪಾದನೆ ವೇಗವಾಗಿ ನಾಶವಾಗುತ್ತಿರುವುದರಿಂದ ಭಯೋತ್ಪಾದಕರು ಭಯಭೀತರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More