Home> India
Advertisement

ಹಾಸ್ಟೆಲ್ ಕೊಠಡಿಯಲ್ಲಿ ಬೆಂಕಿ, ಓರ್ವ ವಿದ್ಯಾರ್ಥಿ ಸಾವು

ಮೃತ ವಿದ್ಯಾರ್ಥಿಯನ್ನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಸ್ಪಂದನ ಎಂದು ಗುರುತಿಸಲಾಗಿದೆ. 

ಹಾಸ್ಟೆಲ್ ಕೊಠಡಿಯಲ್ಲಿ ಬೆಂಕಿ, ಓರ್ವ ವಿದ್ಯಾರ್ಥಿ ಸಾವು

ಖಮ್ಮಾಮ್: ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಸೋಮವಾರ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 10 ವರ್ಷದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ತೆಲಂಗಾಣದ ಖಮ್ಮಾಮ್ ನಲ್ಲಿ ಸೋಮವಾರ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಸ್ಪಂದನ ಎಂದು ಗುರುತಿಸಲಾಗಿದೆ. 

"ಹಾಸ್ಟೆಲ್ ಕೋಣೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅನಾಹುತ ಸಂಭವಿಸಿದ್ದು, ಕೊಠಡಿ ಚಿಕ್ಕದಾಗಿದ್ದು ಒಂದೇ ಬಾಗಿಲು ಇದ್ದುದರಿಂದ ವಿದ್ಯಾರ್ಥಿಗಳು ಹೊರಹೋಗಲು ಕಷ್ಟವಾಗಿದೆ. ಆದಾಗ್ಯೂ ನಾವು ಇತರ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ರಕ್ಷಿಸಿದ್ದೇವೆ. ಆದರೆ ಸ್ಪಂದನಾ ಬೆಂಕಿ ಆಘಾತದಿಂದ ಹೆದರಿದ್ದರಿಂದ ಹೊರಬರಲು ಸಾಧ್ಯವಾಗಿಲ್ಲ" ಎಂದು ಖಮ್ಮಮ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್.ಕೆ.ಕರೀಮ್ ಎಎನ್‌ಐಗೆ ತಿಳಿಸಿದ್ದಾರೆ.

ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Read More