Home> India
Advertisement

Omicron Third Wave In India: ಓಮಿಕ್ರಾನ್ ನಿಂದ ದೇಶದಲ್ಲಿ ಮೂರನೇ ಅಲೆ ಗ್ಯಾರಂಟಿ! ಸೂಪರ್ ಮಾಡೆಲ್ ಪ್ಯಾನೆಲ್ ನೀಡಿದ ಎಚ್ಚರಿಕೆ ಏನು?

Corona Latest News - ಕೊರೊನಾ ವೈರಸ್ ನ ಹೊಸ ರೂಪಾಂತರಿ ದೇಶದ 11 ರಾಜ್ಯಗಳಿಗೆ ತಲುಪಿದೆ. ನಿತ್ಯ ಓಮಿಕ್ರಾನ್ ಸೋಂಕಿನ ಹೊಸ ಪ್ರಕರಣಗಳು ದೃಢಪಡುತ್ತಿವೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆಯನ್ನು ನೀಡಿದೆ.

Omicron Third Wave In India: ಓಮಿಕ್ರಾನ್ ನಿಂದ ದೇಶದಲ್ಲಿ ಮೂರನೇ ಅಲೆ ಗ್ಯಾರಂಟಿ! ಸೂಪರ್ ಮಾಡೆಲ್ ಪ್ಯಾನೆಲ್ ನೀಡಿದ ಎಚ್ಚರಿಕೆ ಏನು?

ನವದೆಹಲಿ: Covid Latest News - ಕೊರೊನಾವೈರಸ್‌ನ (Coronavirus) ಹೊಸ ರೂಪಾಂತರವಾದ ಓಮಿಕ್ರಾನ್‌ನ (Omicron) ಆತಂಕ ವಿಶ್ವಾದ್ಯಂತ ಆವರಿಸಿದೆ. ಏತನ್ಮಧ್ಯೆ, ಮುಂದಿನ ವರ್ಷ ಫೆಬ್ರವರಿಯಲ್ಲಿ ಕರೋನಾ ಉತ್ತುಂಗಕ್ಕೇರಲಿದೆ ಎಂದು ರಾಷ್ಟ್ರೀಯ ಕೋವಿಡ್ -19 ಸೂಪರ್ ಮಾಡೆಲ್ ಪ್ಯಾನಲ್ (National Covid-19 Super Model Panel) ಭವಿಷ್ಯ ನುಡಿದಿದೆ. ಓಮಿಕ್ರಾನ್‌ನಿಂದಾಗಿ, ಭಾರತದಲ್ಲಿ ಕೊರೊನಾವೈರಸ್‌ನ ಮೂರನೇ ಅಲೆ (Third Wave) ಇರಲಿದೆ ಎಂದು ಅದು ಹೇಳಿದೆ.

ಡೆಲ್ಟಾ (Delta Variant) ಸ್ಥಾನ ಪಡೆಯಲಿದೆ Omicron

ಪ್ರತಿದಿನ ಸುಮಾರು 7 ರಿಂದ ಏಳೂವರೆ ಸಾವಿರ ಕೊರೊನಾ ವೈರಸ್ ಪ್ರಕರಣಗಳು ಭಾರತದಲ್ಲಿ ಬೆಳಕಿಗೆ ಬರುತ್ತಿವೆ. ಈ ಪ್ರಕರಣಗಳು ಡೆಲ್ಟಾ ರೂಪಾಂತರಕ್ಕೆ ಸೇರಿವೆ. ಆದರೆ ಶೀಘ್ರದಲ್ಲೇ ಓಮಿಕ್ರಾನ್ (Omicron) ಡೆಲ್ಟಾ ರೂಪಾಂತರವನ್ನು ಪಕ್ಕಕ್ಕೆ ಸರಿಸಲಿದೆ.

ಕರೋನಾ ಮೂರನೇ ಅಲೆ ಬರುವುದು ಖಚಿತ!
ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ಕೋವಿಡ್ -19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ ವಿದ್ಯಾಸಾಗರ್, ಓಮಿಕ್ರಾನ್‌ನಿಂದಾಗಿ ಭಾರತದಲ್ಲಿ ಮೂರನೇ ಕೊರೊನಾ ಅಲೆ ಇರಲಿದೆ. ಆದರೆ ಅದು ಎರಡನೇ ಅಲೆಗಿಂತ ದುರ್ಬಲವಾಗಿರುತ್ತದೆ. ಕರೋನದ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಹೆಚ್ಚಿನ ಜನರಲ್ಲಿ ರೋಗನಿರೋಧಕ ಶಕ್ತಿ ಬೆಳೆದಿರುವುದು ಇದಕ್ಕೆ ಕಾರಣ. ಆದರೆ ಕೊರೊನಾದ ಮೂರನೇ ಅಲೆ ಬಂದೆ ಬರುತ್ತದೆ ಎಂದು ಅವರು ಹೇಳಿದ್ದಾರೆ. 

ಮೂರನೇ ಅಲೆಯ ವೇಳೆ ಪ್ರತಿ ನಿತ್ಯ ಹೆಚ್ಚು ಪ್ರಕರಣಗಳು ಬೆಳಕಿಗೆ ಬರಲಿವೆ
ವಿದ್ಯಾಸಾಗರ್ ಐಐಟಿ ಹೈದರಾಬಾದ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಪ್ರತಿದಿನ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ವಾಸ್ತವವಾಗಿ, ಮುಂಚೂಣಿ ಕೆಲಸಗಾರರನ್ನು ಹೊರತುಪಡಿಸಿ, ಇತರ ಭಾರತೀಯ ನಾಗರಿಕರು ಮಾರ್ಚ್ 1, 2020 ರಿಂದ ಲಸಿಕೆ ಪಡೆಯಲು (Vaccination) ಪ್ರಾರಂಭಿಸಿದ್ದಾರೆ. ಭಾರತದಲ್ಲಿ ಡೆಲ್ಟಾ ರೂಪಾಂತರವು ವೇಗವಾಗಿ ಹರಡಿದಾಗ, ಹೆಚ್ಚಿನ ಭಾರತೀಯರು ಲಸಿಕೆ (Vaccine) ಹಾಕಿಸಿಕೊಂದಿರಲಿಲ್ಲ. ಆದರೆ ಈ ಬಾರಿ ಅದು ಸಂಭವಿಸುವುದಿಲ್ಲ. ಕರೋನಾದ ಎರಡನೇ ಅಲೆಯ ಸಮಯದಲ್ಲಿ, ನಾವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ, ಆದ್ದರಿಂದ ಮೊದಲಿಗಿಂತ ಮೂರನೇ ಕೊರೊನಾ ಅಲೆ ಎದುರಿಸುವುದು ಸುಲಭವಾಗಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Pfizer On COVID-19: 2024ರವರೆಗೆ ಬೆನ್ನು ಬಿಡಲ್ಲ ಕೊರೊನಾ, ಫೈಜರ್ ಕಂಪನಿಯ ಭವಿಷ್ಯವಾಣಿ

ಒಮಿಕ್ರಾನ್ ಪ್ರಕರಣಗಳು ಒಂದೂವರೆ ಮೂರು ದಿನಗಳಲ್ಲಿ ದ್ವಿಗುಣಗೊಳ್ಳುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಈಗಾಗಲೇ ಕರೋನಾ ಹೊಸ ರೂಪಂತರಿಯ ಕುರಿತು ಬಗ್ಗೆ ಇಡೀ ಜಗತ್ತಿಗೆ ಎಚ್ಚರಿಕೆ ನೀಡಿದೆ. ಈ ಹೊಸ ರೂಪಾಂತರದ ಕೊರೊನಾ ಸುಮಾರು 90 ದೇಶಗಳನ್ನು ತಲುಪಿದೆ ಮತ್ತು ಭಾರತದಲ್ಲಿ ಸೋಂಕಿತರ ಸಂಖ್ಯೆ 126 ಕ್ಕೆ ಏರಿದೆ. ಒಮಿಕ್ರಾನ್ ಸೋಂಕು ಕ್ರಮೇಣ ದೇಶದ 11 ರಾಜ್ಯಗಳಿಗೆ ಹರಡಿದೆ. ಪ್ರತಿದಿನ ಈ ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾಗುವ ಜನರು ದೇಶದಲ್ಲಿ ದೃಢೀಕರಿಸಲ್ಪಡುತ್ತಿದ್ದಾರೆ.

ಇದನ್ನೂ ಓದಿ-ಮಹಾರಾಷ್ಟ್ರದಲ್ಲಿ 8 ಹೊಸ ಓಮಿಕ್ರಾನ್ ಪ್ರಕರಣಗಳ ವರದಿ, ಒಟ್ಟು ಸಂಖ್ಯೆ 48ಕ್ಕೆ ಏರಿಕೆ

ಇದಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒಮಿಕ್ರಾನ್ ರೂಪಾಂತರವು ವೇಗವಾಗಿ ಹರಡುತ್ತಿದೆ ಮತ್ತು ಶೀಘ್ರದಲ್ಲೇ ಇದು ಡೆಲ್ಟಾ ರೂಪಾಂತರವನ್ನು ಹಿಂದಿಕ್ಕಬಹುದು ಎಂದು ಕೂಡ ಮಾಹಿತಿ ನೀಡಿದೆ.

ಇದನ್ನೂ ಓದಿ-ಓಮಿಕ್ರಾನ್ ಡೆಲ್ಟಾಕ್ಕಿಂತ ಐದು ಪಟ್ಟು ವೇಗದಲ್ಲಿ ಹರಡುತ್ತದೆ-ಅಧ್ಯಯನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More