Home> India
Advertisement

ಆರ್‌ಬಿಐ​ ಡೆಪ್ಯುಟಿ ಗವರ್ನರ್​ ಆಗಿ ಎನ್​.ಎಸ್​. ವಿಶ್ವನಾಥನ್​ ಮುಂದುವರಿಕೆ

ಕೇಂದ್ರ ಬ್ಯಾಂಕಿನಲ್ಲಿ ಮೂವರು ಡೆಪ್ಯೂಟಿ ಗವರ್ನರ್ ಗಳಿದ್ದು, ಬಿ.ಪಿ.ಕನುಂಗೊ ಮತ್ತು ಎಂ.ಕೆ.ಜೈನ್ ಜೊತೆಗೆ ವಿಶ್ವನಾಥನ್ ಸಹ ಒಬ್ಬರಾಗಿದ್ದಾರೆ.

ಆರ್‌ಬಿಐ​ ಡೆಪ್ಯುಟಿ ಗವರ್ನರ್​ ಆಗಿ ಎನ್​.ಎಸ್​. ವಿಶ್ವನಾಥನ್​ ಮುಂದುವರಿಕೆ

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್​ನ (ಆರ್​ಬಿಐ) ಡೆಪ್ಯುಟಿ ಗವರ್ನರ್​ ಆಗಿ ಮತ್ತೊಂದು ವರ್ಷದ ಅವಧಿಗೆ ಎನ್​.ಎಸ್​. ವಿಶ್ವನಾಥನ್​ ಅವರನ್ನು ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ವರ್ಷದ ಜುಲೈ 4 ರಿಂದ ಜಾರಿಗೆ ಬರುವಂತೆ ವಿಶ್ವನಾಥನ್ ಅವರನ್ನು ಡೆಪ್ಯೂಟಿ ಗವರ್ನರ್ ಆಗಿ ಮರು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

ಕೇಂದ್ರ ಬ್ಯಾಂಕಿನಲ್ಲಿ ಮೂವರು ಡೆಪ್ಯೂಟಿ ಗವರ್ನರ್ ಗಳಿದ್ದು, ಬಿ.ಪಿ.ಕನುಂಗೊ ಮತ್ತು ಎಂ.ಕೆ.ಜೈನ್ ಜೊತೆಗೆ ವಿಶ್ವನಾಥನ್ ಸಹ ಒಬ್ಬರಾಗಿದ್ದಾರೆ.

ಕಳೆದ ತಿಂಗಳು ಆರ್‌ಬಿಐ ಉಪ ಗವರ್ನರ್ ಹುದ್ದೆಗೆ ವಿರಲ್ ಆಚಾರ್ಯ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ವಿಶ್ವನಾಥ್ ಅವರನ್ನು ಮತ್ತೊಂದು ವರ್ಷಕ್ಕೆ ಡೆಪ್ಯುಟಿ ಗವರ್ನರ್​ ಆಗಿ ಮುಂದುವರೆಸಲಾಗಿದೆ.
 
Read More