Home> India
Advertisement

ಹೆಣ್ಣು ಮಗು ಜನಿಸಿದರೆ ಈ ರಾಜ್ಯದಲ್ಲಿ ಸರ್ಕಾರ ನೀಡುತ್ತದೆ 21 ಸಾವಿರ ರೂಪಾಯಿ

  ಹರಿಯಾಣದ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರವು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಲು 'ಆಪ್ಕಿ ಬೇಟಿ-ಹಮಾರಿ ಬೇಟಿ' ಯೋಜನೆಯನ್ನು  ಆರಂಭಿಸಿದೆ. 
  

 ಹೆಣ್ಣು ಮಗು ಜನಿಸಿದರೆ ಈ ರಾಜ್ಯದಲ್ಲಿ ಸರ್ಕಾರ ನೀಡುತ್ತದೆ 21 ಸಾವಿರ ರೂಪಾಯಿ

ನವದೆಹಲಿ : ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಹರಿಯಾಣ ಸರಕಾರ (Haryana Government) ಮಹತ್ತರ ನಿರ್ಧಾರ  ಕೈಗೊಂಡಿದೆ. ಸರ್ಕಾರದ ಈ ಕ್ರಮದಿಂದ ರಾಜ್ಯದಲ್ಲಿ ಕುಸಿಯುತ್ತಿರುವ ಲಿಂಗ ಅನುಪಾತ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಬಹುದು. ಇನ್ನು ಈ ರಾಜ್ಯದಲ್ಲಿ ಹುಟ್ಟುವ ಹೆಣ್ಣು ಮಕ್ಕಳಿಗೆ ಶಕುನವಾಗಿ 21 ಸಾವಿರ ರೂಪಾಯಿಗಳನ್ನು ಸರ್ಕಾರದ ವತಿಯಿಂದ ನೀಡಲಾಗುವುದು. 

ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಸರ್ಕಾರ ಬದ್ಧ :

ಹರಿಯಾಣದ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರವು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಲು 'ಆಪ್ಕಿ ಬೇಟಿ-ಹಮಾರಿ ಬೇಟಿ' ಯೋಜನೆಯನ್ನು  (aapki beti humari beti yojna)ಆರಂಭಿಸಿದೆ. ಇದೀಗ ಈ ಯೋಜನೆಯ ಬಗ್ಗೆ  ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿಸುತ್ತಿದೆ. ಈ ಯೋಜನೆಯು ಪರಿಶಿಷ್ಟ ಜಾತಿ ಮತ್ತು ಬಿಪಿಎಲ್ (BPL) ಕುಟುಂಬಗಳಿಗೆ ಮಾತ್ರವಲ್ಲದೆ, ಸಾಮಾನ್ಯ ಕುಟುಂಬಗಳಿಗೂ ಅನ್ವಯಿಸುತ್ತದೆ. 

ಇದನ್ನೂ ಓದಿ : ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಗಳಲ್ಲಿ ಭಾಗವಹಿಸಿ, ಆಕರ್ಷಕ ಬಹುಮಾನ ಗೆಲ್ಲಿ...!

ಸರ್ಕಾರದಿಂದ 'ಆಪ್ಕಿ ಬೇಟಿ-ಹಮಾರಿ ಬೇಟಿ' ಯೋಜನೆಯನ್ನು ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಹೆಣ್ಣು ಮಗುವಿನ ಜನನದ ಬಗ್ಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆ ತರುವುದು, ಹೆಣ್ಣು ಭ್ರೂಣ ಹತ್ಯೆಯನ್ನು ನಿಲ್ಲಿಸುವುದು, ಲಿಂಗ ಅನುಪಾತವನ್ನು ಸುಧಾರಿಸುವುದು ಮತ್ತು ಹೆಣ್ಣು ಮಗುವಿಗೆ ಸರಿಯಾದ ಶಿಕ್ಷಣದ ಅವಕಾಶಗಳನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ      (Education for girl child) .

 21 ಸಾವಿರ  ರುಪಾಯಿ ಶಗನ್ : 
ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಜನಿಸಿದ ಪರಿಶಿಷ್ಟ ಜಾತಿ ಮತ್ತು ಬಿಪಿಎಲ್ ಕುಟುಂಬಗಳ (BPL Family) ಮೊದಲ ಹೆಣ್ಣು ಮಗುವಿಗೆ  21 ಸಾವಿರ ರೂ. ಮತ್ತು ಎಲ್ಲಾ ವರ್ಗದ ಎರಡನೇ ಮತ್ತು ಮೂರನೇ ಹೆಣ್ಣು ಮಗುವಿಗೆ 21 ಸಾವಿರ ರೂ. ನೀಡಲಾಗುವುದು, ಈ ಹಣವನ್ನು ಜೀವ ವಿಮಾ ನಿಗಮದಲ್ಲಿ ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡಲಾಗುವುದು. ಫಲಾನುಭವಿಯ ಹೆಸರಿನಲ್ಲಿ LIC ಸದಸ್ಯತ್ವ ಪ್ರಮಾಣಪತ್ರವನ್ನು ಕೂಡಾ ನೀಡಲಾಗುತ್ತದೆ. ಹೆಣ್ಣು ಮಗು 18 ವರ್ಷಗಳನ್ನು ಪೂರೈಸಿದ ನಂತರ ಫಲಾನುಭವಿ ಹುಡುಗಿ ಅವಿವಾಹಿತಳಾಗಿದ್ದರೆ ಸದಸ್ಯತ್ವ ಪ್ರಮಾಣಪತ್ರವನ್ನು ಎನ್‌ಕ್ಯಾಶ್ ಮಾಡಬಹುದು.

ಇದನ್ನೂ ಓದಿ: ನಿಷೇಧಿತ Sikhs For Justiceಗೆ ಲಿಂಕ್ ಆದ ಅಪ್ಲಿಕೇಶನ್ಸ್, ವೆಬ್‌ಸೈಟ್ಸ್ ಬ್ಯಾನ್

ಅರ್ಜಿದಾರರು ಸರಳ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು :
ಯೋಜನೆಯ ಲಾಭ ಪಡೆಯಲು, ಅರ್ಜಿದಾರರು ಸರಳ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು (Online application) . ಅರ್ಜಿಗಾಗಿ, ಪ್ರಯೋಜನವನ್ನು ಪಡೆಯುವ ಹುಡುಗಿಯ ಜನನ ಪ್ರಮಾಣಪತ್ರದ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕಾಗುತ್ತದೆ. ಅದೇ ರೀತಿ ಕುಟುಂಬದ ಗುರುತಿನ ಚೀಟಿ ಸಂಖ್ಯೆ, ಪಡಿತರ ಚೀಟಿ, ಜಾತಿ ಪ್ರಮಾಣಪತ್ರ , ಬಿಪಿಎಲ್ ಪುರಾವೆ ಮತ್ತು ಮಾನ್ಯ ಬಿಪಿಎಲ್ ಸಂಖ್ಯೆ (ಬಿಪಿಎಲ್ ಕುಟುಂಬಗಳಿಗೆ ಮಾತ್ರ) ನಂತಹ ದಾಖಲೆಗಳು ಬೇಕಾಗುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More