Home> India
Advertisement

ಗ್ರಾಹಕರಿಗೆ ಸಿಲಿಂಡರ್ ಶಾಕ್: ಸಬ್ಸಿಡಿ ಸಹಿತ ಎಲ್‌ಪಿಜಿ ದರ 2.08 ರೂ. ಹೆಚ್ಚಳ

ಮೂರು ತಿಂಗಳ ಕಡಿತದ ನಂತರ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಲಾಗಿದ್ದು, ಸಬ್ಸಿಡಿ ರಹಿತ ಎಲ್‌ಪಿಜಿ ದರದಲ್ಲಿ 42.50ರೂ. ಏರಿಕೆ ಕಂಡಿದೆ.

ಗ್ರಾಹಕರಿಗೆ ಸಿಲಿಂಡರ್ ಶಾಕ್: ಸಬ್ಸಿಡಿ ಸಹಿತ ಎಲ್‌ಪಿಜಿ ದರ 2.08 ರೂ. ಹೆಚ್ಚಳ

ನವದೆಹಲಿ: ಮೂರು ತಿಂಗಳ ಕಡಿತದ ನಂತರ ಸಿಲಿಂಡರ್ಗಳ ಬೆಲೆ ಏರಿಕೆಯಾಗಿದ್ದು, ಸಬ್ಸಿಡಿ ಹೊಂದಿರುವ ಗೃಹಬಳಕೆಯ ಅಡುಗೆ ಅನಿಲ ದರದಲ್ಲಿ 2.08ರೂ. ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ದರದಲ್ಲಿ 42.50ರೂ. ಏರಿಕೆ ಮಾಡಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಗುರುವಾರ ತಿಳಿಸಿದೆ. 

ಇಂಧನ ಬೆಲೆ ಏರಿಕೆ ಹಾಗೂ ತೆರಿಗೆ ಕಾರಣದಿಂದಾಗಿ ಸಿಲಿಂಡರ್ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎಲ್‌ಪಿಜಿ ದರ ಹೆಚ್ಚಳದ ಬಳಿಕ ದೆಹಲಿಯಲ್ಲಿ 493.53 ರೂ. ಇದ್ದ 14 ಕೆ.ಜಿ. ತೂಕದ ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ಮಾರ್ಚ್ 1 ರಿಂದ 495.61 ರೂಪಾಯಿಯಾಗಲಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ದರ 701.50 ರೂ. ಆಗಲಿದೆ.

ಮೂರು ತಿಂಗಳ ಕಡಿತದ ನಂತರ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಮೊದಲಿಗೆ, ಹೊಸ ವರ್ಷದ ಮೊದಲ ದಿನದಂದು ಅಂದರೆ ಜನವರಿ 1ರಂದು ಎಲ್‌ಪಿಜಿ ದರಗಳನ್ನು ಕಡಿತಗೊಳಿಸಲಾಗಿತ್ತು. ಆ ವೇಳೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಗೆ 1.46 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ಗಳ ಬೆಲೆ 30 ರೂಪಾಯಿ ಕಡಿಮೆಯಾಗಿತ್ತು.

ಎಲ್​ಪಿಜಿಯ ಸರಾಸರಿ ಅಂತರರಾಷ್ಟ್ರೀಯ ಬೆಂಚ್ಮಾರ್ಕ್ ದರ ಮತ್ತು ಎಲ್​ಪಿಜಿ ಸಿಲಿಂಡರ್ಗಳ ಬೆಲೆಯನ್ನು ವಿದೇಶಿ ವಿನಿಮಯ ದರವನ್ನು ಅವಲಂಬಿಸಿದ್ದು ಆ ಪ್ರಕಾರ ನಿಗದಿಪಡಿಸಲಾಗಿದೆ. ಹೀಗಾಗಿ ಪ್ರತಿ ತಿಂಗಳು ಸಬ್ಸಿಡಿ ಮೊತ್ತವು ಬದಲಾಗುತ್ತದೆ. ಅಂತಹ ಸನ್ನಿವೇಶದಲ್ಲಿ, ಅಂತರರಾಷ್ಟ್ರೀಯ ಬೆಲೆ ಏರಿಕೆಯಾದಾಗ, ಸರಕಾರವು ಹೆಚ್ಚಿನ ಸಬ್ಸಿಡಿಯನ್ನು ನೀಡುತ್ತದೆ ಮತ್ತು ಬೆಲೆ ಕಡಿಮೆಯಾದಾಗ, ಸಬ್ಸಿಡಿ ಕಡಿತಗಳನ್ನು ಮಾಡಲಾಗುತ್ತದೆ.

Read More