Home> India
Advertisement

ಈ ಬಾರಿ ಸಿಎನ್‌ಜಿ ವಾಹನಗಳಿಗಿಲ್ಲ ಆಡ್-ಈವ್ ವಿನಾಯಿತಿ; ನಿಮಯ ಉಲ್ಲಂಘನೆಗೆ ಬೀಳುತ್ತೆ ಭಾರೀ ದಂಡ

ಭಾನುವಾರದಂದು ಆಡ್ ಈವ್ ಅನ್ವಯಿಸುವುದಿಲ್ಲ.

ಈ ಬಾರಿ ಸಿಎನ್‌ಜಿ ವಾಹನಗಳಿಗಿಲ್ಲ ಆಡ್-ಈವ್ ವಿನಾಯಿತಿ; ನಿಮಯ ಉಲ್ಲಂಘನೆಗೆ ಬೀಳುತ್ತೆ ಭಾರೀ ದಂಡ

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಮತ್ತೊಮ್ಮೆ ಆಡ್-ಈವ್ ಯೋಜನೆಯನ್ನು ಜಾರಿಗೆ ತರಲಿದೆ. ದೆಹಲಿಯ ಆಡ್ ಈವ್ ಯೋಜನೆಯ ಎರಡನೇ ಹಂತವು ನವೆಂಬರ್ 4 ರಿಂದ ನವೆಂಬರ್ 15 ರವರೆಗೆ ಜಾರಿಯಲ್ಲಿರಲಿದೆ. ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಆಡ್ ಈವ್ ನಿಯಮ ಜಾರಿಯಲ್ಲಿರಲಿದೆ.

ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್, ಈ ಬಾರಿ ದೆಹಲಿಯಲ್ಲೂ ಸಂಜೆ ಸಮಯದಲ್ಲಿ ಸಿಎನ್‌ಜಿ ವಾಹನಗಳಿಗೆ ರಿಯಾಯಿತಿ ಸಿಗುವುದಿಲ್ಲ. ಈ ಸಮಯದಲ್ಲಿ ನಿಯಮಗಳನ್ನು ಮುರಿಯುವವರು 4 ಸಾವಿರ ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಕಾರಿನಲ್ಲಿ ಶಾಲಾ ಮಕ್ಕಳು ಇದ್ದರೂ ಸಂಜೆ ರಿಯಾಯಿತಿ ಇರುತ್ತದೆ. ಇವುಗಳಲ್ಲದೆ, ಮಹಿಳೆಯರು ಮತ್ತು ಅಂಗವಿಕಲರಿಗೂ ಈ ನಿಯಮದಿಂದ ವಿನಾಯಿತಿ ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರದಂದು ಆಡ್ ಈವ್ ಅನ್ವಯಿಸುವುದಿಲ್ಲ. ಆದರೆ, ಆಡ್ ಈವ್ ನಿಯಮ ಜಾರಿಯಲ್ಲಿರುವ ಅವಧಿಯಲ್ಲಿ ದೆಹಲಿಯ ಹೊರಗಿನಿಂದ ಬರುವ ವಾಹನಗಳಿಗೂ ವಿನಾಯಿತಿ ನೀಡಲಾಗುವುದಿಲ್ಲ ಎಂದು ಸಿಎಂ ಹೇಳಿದರು. 

ಈ ಯೋಜನೆ 2 ವೀಲರ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಅರವಿಂದ ಕೇಜ್ರೀವಾಲ್, ರಾಷ್ಟ್ರಪತಿ, ಉಪರಾಷ್ಟ್ರಪತಿ, ಭಾರತದ ಮುಖ್ಯ ನ್ಯಾಯಮೂರ್ತಿ, ಪ್ರಧಾನಮಂತ್ರಿ ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳಿಗೆ ಆಡ್ ಈವ್ ನಿಯಮ ಅನ್ವಯಿಸುವುದಿಲ್ಲ. ಇದರೊಂದಿಗೆ ವಿರೋಧ ಪಕ್ಷದ ನಾಯಕರು, ಚುನಾವಣಾ ಆಯುಕ್ತರು, ಸಿಎಜಿ ಮತ್ತು ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರ ವಾಹನಗಳಿಗೂ ಇದರಲ್ಲಿ ವಿನಾಯಿತಿ ಸಿಗಲಿದೆ. ಈ ನಿಯಮ ದೆಹಲಿಯ ಸಿಎಂ ಮತ್ತು ಮಂತ್ರಿಗಳಿಗೆ ಅನ್ವಯವಾಗಲಿದೆ ಎಂದು ಕೇಜ್ರಿವಾಲ್ ಹೇಳಿದರು.

ದೆಹಲಿಯಲ್ಲಿ ದಿನೇ ದಿನೇ ವಾತಾವರಣ ಹದಗೆಡುತ್ತಿರುವುದರಿಂದ ಉಸಿರಾಡುವುದೂ ಕಷ್ಟವಾಗಿದೆ.  ಗಾಳಿಯ ಗುಣಮಟ್ಟ 'ತುಂಬಾ ಕಳಪೆ' ಮಟ್ಟವನ್ನು ತಲುಪುತ್ತಿದೆ. ಗುರುವಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ಮಟ್ಟವನ್ನು ತಲುಪಿದೆ. ದೆಹಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 312 ಮಟ್ಟವನ್ನು ತಲುಪಿದೆ. ದೆಹಲಿಯ ಚಾಂದನಿ ಚೌಕ್ ಪ್ರದೇಶದಲ್ಲಿ, ಪಿಎಂ -10 ಮಟ್ಟವು 301 ಕ್ಕೆ ತಲುಪಿದೆ ಮತ್ತು ಪಿಎಂ 2.5 ಮಟ್ಟವು 339 ಕ್ಕೆ ತಲುಪಿದೆ. ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, ಈ ಮಟ್ಟವು ತುಂಬಾ ಕಳಪೆಯಾಗಿದೆ.

ಅದೇ ಸಮಯದಲ್ಲಿ, ದೆಹಲಿಯ ಹಸಿರು ಪ್ರದೇಶವೆಂದು ಪರಿಗಣಿಸಲ್ಪಟ್ಟ ದೆಹಲಿ ವಿಶ್ವವಿದ್ಯಾಲಯದಲ್ಲಿ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿತ್ತು. ಡಿಯು(ದೆಹಲಿ ವಿಶ್ವವಿದ್ಯಾಲಯ)ನಲ್ಲಿ ಪಿಎಂ -10 ಮಟ್ಟ 217 ಮತ್ತು ಪಿಎಂ 2.5 ಮಟ್ಟ 322 ಆಗಿತ್ತು. ಇದು 'ತುಂಬಾ ಕೆಟ್ಟ' ವಿಭಾಗದಲ್ಲಿದೆ. ದೆಹಲಿಯ ಲೋಧಿ ರಸ್ತೆಯಲ್ಲಿ ಪಿಎಂ 2.5 ರ ಮಟ್ಟ 2.57 ದಾಖಲಾಗಿದೆ, ಇಲ್ಲಿಯೂ ಗಾಳಿಯ ಗುಣಮಟ್ಟ ತುಂಬಾ ಕಳಪೆಯಾಗಿತ್ತು.

ನೋಯ್ಡಾದಲ್ಲಿ, ಪಿಎಂ -10 ಮಟ್ಟ 260 ಮತ್ತು ಪಿಎಂ 2.5 ಮಟ್ಟ 329 ಆಗಿತ್ತು. ಗುರುಗ್ರಾಮ್‌ನಲ್ಲಿ ಪಿಎಂ 10 ಮಟ್ಟ ಉತ್ತಮವಾಗಿದ್ದರೆ ಪಿಎಂ 2.5 ಮಟ್ಟ ತುಂಬಾ ಕಳಪೆಯಾಗಿತ್ತು. ಪಿಎಂ 19 ಲೆವೆಲ್ 193 ಮತ್ತು ಪಿಎಂ 2.5 ಲೆವೆಲ್ 323 ಮಟ್ಟವನ್ನು ತಲುಪಿದೆ.

Read More