Home> India
Advertisement

Driving License ಮಾಡಿಸಲು RTO ಗೆ ಹೋಗಬೇಕಾಗಿಲ್ಲ, ಆನ್‌ಲೈನ್‌ ನಲ್ಲಿಯೇ ನಡೆಯುತ್ತದೆ ಡ್ರೈವಿಂಗ್ ಟೆಸ್ಟ್

ಈ ಹೊಸ ನಿಯಮದ ಪ್ರಕಾರ, ಡ್ರೈವಿಂಗ್ ಲೈಸೆನ್ಸ್ ಪಡೆಯುವ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿರುತ್ತದೆ. ಅಂದರೆ, ಲೈಸೆನ್ಸ್ ಅಪ್ಲಿಕೇಶನ್‌ನಿಂದ ಹಿಡಿದು,  ಲೈಸೆನ್ಸ್ ಪ್ರಿಂಟ್ ಆಗುವವರೆಗಿನ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿರುತ್ತದೆ.

Driving License ಮಾಡಿಸಲು  RTO ಗೆ ಹೋಗಬೇಕಾಗಿಲ್ಲ, ಆನ್‌ಲೈನ್‌ ನಲ್ಲಿಯೇ ನಡೆಯುತ್ತದೆ ಡ್ರೈವಿಂಗ್ ಟೆಸ್ಟ್

ನವದೆಹಲಿ : Driving License New Rules: ಡ್ರೈವಿಂಗ್ ಲೈಸನ್ಸ್  ಪಡೆಯುವುದಕ್ಕಾಗಿ ಅಥವಾ ನವೀಕರಣಕ್ಕೆ ಸಂಬಂಧಪಟ್ಟಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (Ministry of Road Transport & Highways) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 

ಸಂಪೂರ್ಣ ಆನ್‌ಲೈನ್‌ ಪ್ರಕ್ರಿಯೆ ಹೀಗಿರಲಿದೆ : 

ಈ ಹೊಸ ನಿಯಮದ ಪ್ರಕಾರ, ಡ್ರೈವಿಂಗ್ ಲೈಸೆನ್ಸ್ ( Driving License) ಪಡೆಯುವ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿರುತ್ತದೆ. ಅಂದರೆ, ಲೈಸೆನ್ಸ್ ಅಪ್ಲಿಕೇಶನ್‌ನಿಂದ ಹಿಡಿದು,  ಲೈಸೆನ್ಸ್ ಪ್ರಿಂಟ್ ಆಗುವವರೆಗಿನ ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿರುತ್ತದೆ (Online). ಇದಲ್ಲದೆ, ಎಲೆಕ್ಟ್ರಾನಿಕ್ ಪ್ರಮಾಣಪತ್ರಗಳು ಮತ್ತು ದಾಖಲೆಗಳು, ವೈದ್ಯಕೀಯ ಪ್ರಮಾಣಪತ್ರಗಳು,  ಲರ್ನಿಂಗ್ ಲೈಸೆನ್ಸ್ ,   ಡ್ರೈವಿಂಗ್ ಲೈಸೆನ್ಸ್  ಸರೆಂಡರ್ ,  ಲೈಸೆನ್ಸ್  ನವೀಕರಣ ಎಲ್ಲವೂ ಆನ್ ಲೈನ್ ನಲ್ಲಿಯೇ ನಡೆಯಲಿದೆ. 

ಇದನ್ನೂ ಓದಿ Driving License: ಈಗ ಮನೆಯಲ್ಲಿಯೇ ಕುಳಿತು DL ಪಡೆಯಲು ಇಲ್ಲಿದೆ ಸುಲಭ ವಿಧಾನ

 RC ನವೀಕರಣ ಪ್ರಕ್ರಿಯೆ ಕೂಡಾ ಸರಳವಾಗಲಿದೆ : 
ಇಂಥಹ ಮಾರ್ಗಸೂಚಿಗಳಿಂದ ಹೊಸ ವಾಹನವನ್ನು ನೋಂದಾಯಿಸುವ ಪ್ರಕ್ರಿಯೆ ಕೂಡಾ ಸರಳವಾಗಲಿದೆ. ನೋಂದಣಿ ಪ್ರಮಾಣಪತ್ರ (RC) ನವೀಕರಣವನ್ನು ಈಗ 60 ದಿನಗಳ ಮುಂಚಿತವಾಗಿಯೇ ಮಾಡಬಹುದು. ತಾತ್ಕಾಲಿಕ ನೋಂದಣಿಯ ಸಮಯ ಮಿತಿಯನ್ನು ಸಹ 1 ತಿಂಗಳಿಂದ 6 ತಿಂಗಳಿಗೆ ಹೆಚ್ಚಿಸಲಾಗಿದೆ.

ಡ್ರೈವಿಂಗ್ ಟೆಸ್ಟ್ ಗೆ  ಆರ್‌ಟಿಒಗೆ ಹೋಗಬೇಕಾಗಿಲ್ಲ :
ಇದರ ಜೊತೆಗೆ, ಲರ್ನರ್ಸ್ ಲೈಸೆನ್ಸ್ (Learners License) ಪ್ರಕ್ರಿಯೆಯಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಿದೆ. ಅದರ ಪ್ರಕಾರ ನೀವು ಚಾಲನಾ ಪರೀಕ್ಷೆಗೆ ಆರ್‌ಟಿಒಗೆ (RTO) ಹೋಗಬೇಕಾಗಿಲ್ಲ.  ಈ ಕೆಲಸವನ್ನು ಟ್ಯುಟೋರಿಯಲ್ ಮೂಲಕ ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ಮಾಡಿಕೊಳ್ಳಬಹುದು. ಕರೋನಾ (COVID-19) ಕಾಲದಲ್ಲಿ ಈ ನಿಯಮ ಹೆಚ್ಚು ಸಹಾಯಕ್ಕೆ ಬರಲಿದೆ ಎನ್ನಲಾಗಿದೆ. 

ಇದನ್ನೂ ಓದಿ : ದೊಡ್ಡ ಬದಲಾವಣೆಯತ್ತ Transport Ministry, ಈ ಕೆಲಸ ಮಾಡಿದರಷ್ಟೇ ವಾಹನ ಚಲಾಯಿಸಲು ಸಾಧ್ಯ

ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು , ಮೋಟಾರು ವಾಹನ ದಾಖಲೆಗಳಾದ ಡ್ರೈವಿಂಗ್ ಲೈಸೆನ್ಸ್ (DL), ನೋಂದಣಿ ಪ್ರಮಾಣಪತ್ರ (RC), ಫಿಟ್ನೆಸ್ ಸರ್ಟಿಫಿಕೇಟ್, ಪರ್ಮಿಟ್ ಮುಂತಾದವುಗಳ ಸಿಂಧುತ್ವವನ್ನು 30 ಜೂನ್ 2021ವರೆಗೆ ವಿಸ್ತರಿಸಲಾಗಿದೆ. ಫೆಬ್ರವರಿ 1 ಕ್ಕೆ ಅವಧಿ ಮುಗಿದಿರುವ ದಾಖಲೆಗಳ ಸಿಂಧುತ್ವವನ್ನು 30 ಜೂನ್ 2021 ರವರೆಗೆ ವಿಸ್ತರಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Read More