Home> India
Advertisement

ಹೊಸ ವಾಹನ ಖರೀದಿಸಬೇಕೆ? ಆಗಸ್ಟ್ 1ರ ನಂತರ ಖರೀದಿಸಿದರೆ ಈ ಲಾಭ ಸಿಗಲಿದೆ

ಒಂದು ವೇಳೆ ನೀವೂ ಕೂಡ ಹೊಸ ವಾಹನ ಖರೀದಿಸುವ ಯೋಜನೆ ರೂಪಿಸುತ್ತಿದ್ದರೆ, ಆಗಸ್ಟ್ 1ರವರೆಗೆ ವೇಟ್ ಮಾಡಿ. ಏಕೆಂದರೆ ವಾಹನ ವಿಮೆಯ ಮೇಲೆ ನೀವು ಸದ್ಯ ಮಾಡುವ ಖರ್ಚಿನಿಂದ ನಿಮಗೆ ನೆಮ್ಮದಿ ಸಿಗಲಿದೆ. 

ಹೊಸ ವಾಹನ ಖರೀದಿಸಬೇಕೆ? ಆಗಸ್ಟ್ 1ರ ನಂತರ ಖರೀದಿಸಿದರೆ ಈ ಲಾಭ ಸಿಗಲಿದೆ

ನವದೆಹಲಿ: ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಜುಲೈ ಅಂತ್ಯದರವರೆಗೆ ಕಾಯಿರಿ ಏಕೆಂದರೆ ನಿಯಮಗಳು ಆಗಸ್ಟ್ 1 ರಿಂದ ಬದಲಾಗಲಿವೆ. ಹೊಸ ನಿಯಮದ ಪ್ರಕಾರ, ಈ ಸಮಯದಲ್ಲಿ ವಾಹನದ ವಿಮೆಗಾಗಿ ಖರ್ಚು ಮಾಡಿದ ದೊಡ್ಡ ಮೊತ್ತದಿಂದ ನಿಮಗೆ ಪರಿಹಾರ ಸಿಗಲಿದೆ. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದೆ.

3-5 ವರ್ಷಗಳ ದೀರ್ಘಾವಧಿ ವಿಮೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ

ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿರುವ IRDAI, 1 ಆಗಸ್ಟ್ 2020 ರಿಂದ ಖರೀದಿಸಲಾಗುವ ಹೊಸ ವಾಹನ (ದ್ವಿಚಕ್ರ ಹಾಗೂ ನಾಲ್ಕು ಚಕ್ರ)ಗಳಿಗಾಗಿ 3-5 ವರ್ಷಗಳಿಗೆ ಪಡೆಯಲಾಗುವ ಥರ್ಡ್ ಪಾರ್ಟಿ ಹಾಗೂ Own Damage ವಿಮೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಅದರ ಯಾವುದೇ ಅವಶ್ಯಕತೆ ಇಲ್ಲ ಎಂದು ಪ್ರಾಧಿಕಾರ ಹೇಳಿದೆ.

2018 ರಲ್ಲಿ ಈ ನಿಯಮ ಜಾರಿಗೆ ಬಂದಿತ್ತು
ಸುಪ್ರೀಂ ಕೋರ್ಟ್ ಆದೇಶದ ಬಳಿಕ IRDAI 28 ಆಗಸ್ಟ್ 2018 ರಂದು IRDAI/NL/CIR/MOT/13708/2018 ಅಧಿಸೂಚನೆ ಜಾರಿಗೊಳಿಸಿ ಕಾರ್ ಗಳಿಗಾಗಿ ಮೂರು ವರ್ಷಗಳ ಥರ್ಡ್ ಪಾರ್ಟಿ ವಿಮೆ ಹಾಗೂ ಬೈಕ್ ಗಳಿಗಾಗಿ 5 ವರ್ಷಗಳ ವಿಮೆ ತೆಗೆದುಕೊಳ್ಳುವುದನ್ನು ಅನಿವಾರ್ಯಗೊಳಿಸಿತ್ತು. ಈ ನಿಯಮ ಸೆಪ್ಟೆಂಬರ್ 1,2018 ರಿಂದ ಜಾರಿಗೆ ಬಂದಿತ್ತು.

ದೀರ್ಘಾವಧಿ ಪಾಲಸಿಗಳ ಪರ್ಫಾರ್ಮೆನ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದ್ದು, ಆಗಸ್ಟ್ 1 ರಿಂದ ಇಂತಹ ಪಾಲಸಿ ಪಡೆಯುವುದು ಅನಿವಾರ್ಯವಾಗಿಲ್ಲ ಎಂದು ಹೇಳಿದೆ.

Read More