Home> India
Advertisement

ಯಾವ ಹೇರಿಕೆಯೂ ಇಲ್ಲ, ಇತರ ಭಾಷೆಗಳನ್ನೂ ವಿರೋಧಿಸುತ್ತಿಲ್ಲ-ಉಪರಾಷ್ಟ್ರಪತಿ

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯಬೇಕೆಂದು ಕರೆ ನೀಡಿದರು ಮತ್ತು ಯಾವುದೇ ಭಾಷೆಯ ಹೇರಿಕೆ ಇರಬಾರದು, ಯಾವುದೇ ನಿರ್ದಿಷ್ಟ ಭಾಷೆಯ ವಿರುದ್ಧ ವಿರೋಧ ಇರಬಾರದು ಎಂದು ಪ್ರತಿಪಾದಿಸಿದರು. 

ಯಾವ ಹೇರಿಕೆಯೂ ಇಲ್ಲ, ಇತರ ಭಾಷೆಗಳನ್ನೂ ವಿರೋಧಿಸುತ್ತಿಲ್ಲ-ಉಪರಾಷ್ಟ್ರಪತಿ

ನವದೆಹಲಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯಬೇಕೆಂದು ಕರೆ ನೀಡಿದರು ಮತ್ತು ಯಾವುದೇ ಭಾಷೆಯ ಹೇರಿಕೆ ಇರಬಾರದು, ಯಾವುದೇ ನಿರ್ದಿಷ್ಟ ಭಾಷೆಯ ವಿರುದ್ಧ ವಿರೋಧ ಇರಬಾರದು ಎಂದು ಪ್ರತಿಪಾದಿಸಿದರು. 

ನಾಸಾ ಮತ್ತು ಯುಎಸ್ ನಲ್ಲಿರುವ ಇತರ ಸ್ಥಳಗಳಿಗೆ ಭೇಟಿ ನೀಡಿ ಇತ್ತೀಚೆಗೆ ಮರಳಿದ ಕರ್ನಾಟಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ನಾಯ್ಡು, ಭಾರತವು ಅನೇಕ ಭಾಷೆಗಳಿಂದ ಆಶೀರ್ವದಿಸಲ್ಪಟ್ಟಿದೆ ಎಂದು ಒತ್ತಿ ಹೇಳಿದರು. ಇತರ ಭಾಷೆಗಳನ್ನು ಕಲಿಯುವಾಗ ಮಾತೃಭಾಷೆಯನ್ನು ಉತ್ತೇಜಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು  ಪ್ರಾಮುಖ್ಯತೆ ನೀಡುವಂತೆ ಮನವಿ ಮಾಡಿಕೊಂಡರು.

ಪಯಣವನ್ನು ಅವರು ಶಿಕ್ಷಣ ಹಾಗೂ ಉತ್ತಮ ಕಲಿಕೆಯ ಅನುಭವ ಎಂದು ವಿವರಿಸಿದ ಉಪ ರಾಷ್ಟ್ರಪತಿಗಳು ಭಾರತದ ಸಂಸ್ಕೃತಿ, ಪರಂಪರೆ, ಭಾಷೆಗಳು ಮತ್ತು ಪಾಕಪದ್ಧತಿಯ ವಿವಿಧ ಅಂಶಗಳನ್ನು ತಿಳಿದುಕೊಳ್ಳಲು ಮತ್ತು ಭಾರತದ ವಿಶಿಷ್ಟ ಸಾಂಸ್ಕೃತಿಕತೆಯ ಬಗ್ಗೆ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ಭಾರತದ ಎಲ್ಲ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ 2022 ರ ವೇಳೆಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯನ್ನು ಉಲ್ಲೇಖಿಸಿದ ನಾಯ್ಡು, ಭಾರತದ ಐತಿಹಾಸಿಕ, ಆಧ್ಯಾತ್ಮಿಕ, ರಮಣೀಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಲು ಸಲಹೆ ನೀಡಿದರು.

ಇಂತಹ ಪ್ರವಾಸವು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಗತಕಾಲದ ಬಗ್ಗೆ ಒಳನೋಟವನ್ನು ನೀಡುತ್ತದೆ ಎಂದು ಅವರು ಹೇಳಿದರು.

Read More